ಮಂಗಳೂರು: ಭಾರತ ದೇಶವನ್ನು ಸಮೃದ್ಧವಾಗಿ ಕಟ್ಟಲು ಎಲ್ಲರೂ ಒಗ್ಗೂಡಿ ಶ್ರಮಿಸುವುದು ಅಗತ್ಯ ಎಂದು ಎನ್ಆರ್ಐ ಉದ್ಯಮಿ, ಕೊಡುಗೈ ದಾನಿ ಮೈಕಲ್ ಡಿಸೋಜ ಕರೆ ನೀಡಿದ್ದಾರೆ. ದೇಶಪ್ರೇಮ, ಸಾಮರಸ್ಯ ಮತ್ತು ಶಾಂತಿ, ಸೌಹಾರ್ದತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನವತೆಯ ಧರ್ಮವು ಮುಖ್ಯ ಎಂದು ಅವರು ಪ್ರತಿಪಾದಿಸಿದರು.
ಸಂತ ಮದರ್ ತೆರೇಸಾ ವಿಚಾರ ವೇದಿಕೆ, ಮಂಗಳೂರು ಇವರ ಆಶ್ರಯದಲ್ಲಿ, ಹೋಲಿಕ್ರಾಸ್ ಚರ್ಚ್ ಕೋರ್ಡೆಲ್, ಕುಲಶೇಖರ ಇದರ ಸಹಕಾರದಲ್ಲಿ ಮಂಗಳವಾರ ಕುಲಶೇಖರದ ಕಲ್ಪನೆ ಮೈದಾನದಲ್ಲಿ ನಡೆದ ಬೆಳಕಿನ ಹಬ್ಬ ದೀಪಾವಳಿ ಸಮಾರಂಭ 2024 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಅತಿಥಿಯಾಗಿದ್ದ ಚಿತ್ರನಟ ಅರವಿಂದ್ ಬೋಳಾರ್ ಮಾತನಾಡಿ, ದೀಪಾವಳಿಯು ಖುಷಿಯ, ಎಲ್ಲಾ ಧರ್ಮದವರು ಆಚರಿಸುವ ಹಬ್ಬವಾಗಿದೆ, ಸೌಹಾರ್ದತೆಯನ್ನು ಪಸರಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶ್ಲಾಘಿಸಿದರು.
ಅತಿಥಿಯಾಗಿದ್ದ ಬಿಕರ್ನಕಟ್ಟೆ ಅಹ್ಸನುಲ್ ಮಸಾಜಿದ್ ಸದಸ್ಯರಾದ ಸರ್ಫುದ್ದೀನ್ ಬಿ.ಎಸ್. ಮಾತನಾಡಿ, ಭಾರತವು ಶತಮಾನಗಳಿಂದ ಶಾಂತಿ ಮತ್ತು ಒಳಿತು ಮಾಡಲು ಪ್ರೋತ್ಸಾಹಿಸಿದ ಬಹುತ್ವದ ನೆಲ, ವಿವಿಧತೆಯೇ ಏಕತೆ ಎಂದು ಸಂದೇಶ £ೀಡಿದರು. ದೇಶದ ಪ್ರಗತಿಗೆ ಎಲ್ಲಾ ಧರ್ಮಗಳ ಕೊಡುಗೆ ಇದೆ ಎಂದರು. ಮಂಗಳೂರಿಗೆ ಶಾಂತಿಯ, ಸೌಹಾರ್ದತೆಯ ಹಣೆಪಟ್ಟಿ ತರುವಲ್ಲಿ ಎಲ್ಲರೂ ಶ್ರಮಿಸಿ ಕರಾವಳಿಯ ಅಭಿವೃದ್ಧಿ ಹೆಚ್ಚಿಸಲು ಕರೆ ನೀಡಿದರು.
ಹಬ್ಬಗಳು ದೇಶದ ಸಮೃದ್ಧಿಯನ್ನು ಹೆಚ್ಚಿಸುವ ಅವಕಾಶ ಒದಗಿಸುತ್ತವೆ ಎಂದ ಕೊರ್ಡೆಲ್ ಚರ್ಚಿನ ಧರ್ಮಗುರುಗಳಾದ ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್ ಶುಭಾಶಂಸನೆಗೈದರು.
ಮದರ್ ತೆರೆಸಾ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಮಾತನಾಡಿ, ವ್ಯತ್ಯಾಸ, ಭಿನ್ನತೆಗಳನ್ನು ಅರ್ಥ ಮಾಡಿ ಸಂಭ್ರಮಿಸಲು ಕರೆ ನೀಡಿದರು. ಪ್ರೀತಿಯಿಂದಲೇ ಸಹಬಾಳ್ವೆ ಸಾಧ್ಯ, ಸರ್ವರ ಒಗ್ಗಟ್ಟಿನಿಂದಲೇ ನಾಡು, ರಾಷ್ಟ್ರ ಕಟ್ಟಲು ಸಾಧ್ಯವೆಂದರು.
ಸ್ಥಳೀಯ ಕಾರ್ಪೋರೇಟರ್ ಕಿಶೋರ್ ಕೊಟ್ಟಾರಿ, ಶ್ರೀ ಧರ್ಮಶಾಸ್ತಾ ಮಂದಿರ ಟ್ರಸ್ಟ್ (ರಿ) ಜ್ಯೋತಿನಗರ ಕುಲಶೇಖರದ ಅಧ್ಯಕ್ಷ ವಕೀಲ ರಾಮಪ್ರಸಾದ್ ಎಸ್. ಮಾತನಾಡಿದರು. ಅನಿವಾಸಿ ಉದ್ಯಮಿ ಜೇಮ್ಸ್ ಮೆಂಡೋನ್ಸಾ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಬಿಕರ್ನಕಟ್ಟೆ ಅಹ್ಸನುಲ್ ಮಸಾಜಿದ್ ಅಧ್ಯಕ್ಷ ಸಯ್ಯದ್ ಮಹಮ್ಮದ್ ಸಯೀದ್ ಉಪಸ್ಥಿತರಿದ್ದರು.
ಮದರ್ ತೆರೆಸಾ ವೇದಿಕೆಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶಿಷ್ಟವಾಗಿ ದೀಪವನ್ನು ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಫಾ. ವಾಲ್ಟರ್ ಅಲ್ಬುಕರ್ಕ್ ಎಸ್ಜೆ ಗಾಯನ ವೃಂದ, ಮಂಗಳೂರು ಹಾಗೂ ಕಲಾ ಸರಸ್ವತಿ ಡ್ಯಾನ್ಸ್ ಅಕಾಡೆಮಿ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮನೋಜ್ ವಾಮಂಜೂರ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾಲ್ಫಿ ಡಿಸೋಜ ನಡೆಸಿ ಕೊಟ್ಟರು. ರೂತ್ ಸಿಲ್ವಿಯಾ ಕ್ಯಾಸ್ತೆಲಿನೊ ಧನ್ಯವಾದ ಸಮರ್ಪಿಸಿದರು.
Saint Mother Teresa Forum, Mangalore, Hosts Festival of Lights – Diwali Celebrations 2024
Mangalore, November 5, 2024 – The Saint Mother Teresa Forum, Mangalore, in association with Holy Cross Church, Kulshekar, held the Festival of Lights – Diwali Celebrations 2024 at Kalpane Maidan, Kulshekar. This gathering aimed to unite people across backgrounds, celebrating Diwali and promoting cultural harmony within the community.
The event opened with a vibrant cultural program led by the Father Walter Albuquerque SJ Choir and the Kalasaraswati Dance Academy, featuring an inspiring prayer song along with music and dance performances that captured the festive spirit of Diwali. Mr. Dolphy Dsouza served as the MC for the cultural segment, adding energy and enthusiasm to the proceedings.
Following the cultural program, the formal stage ceremony commenced with Mr. Manoj Vamanjoor as the master of ceremonies. Mr. Michael D’Souza, esteemed social thinker and NRI entrepreneur, inaugurated the event and delivered a thoughtful address on the importance of unity and harmony in a diverse society. Other prominent dignitaries, including Mr. Aravind Bolar, renowned film actor; Mr. Sarfuddin B.S., member of Ahsanul Masajid, Bikarnakatte; Mr. Ramaprasad S., Advocate and Chairman of Sri Dharmashasta Mandir Trust (Re), Jyotinagar Kulshekar; Fr. Clifford Fernandes, Parish Priest of Holy Cross Church; and Mr. Kishore Kottari, a respected local corporator, each shared words that underscored the importance of unity, respect, and cultural diversity.
After these addresses, Mr. Roy Castellino, President of the Saint Mother Teresa Forum, delivered the Presidential Address, expressing gratitude to the community for its support and reflecting on the role of Diwali in fostering togetherness.
Ms. Ruth Castellino then delivered the Vote of Thanks, acknowledging everyone’s contributions to the event’s success. The celebration concluded with a lively display of fireworks, adding a festive finale to the Diwali gathering.