ಕುಂದಾಪುರ : 69ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಕನ್ನಡಭಿಮಾನ ಡಾ| ರಾಜ್ ಸಂಘಟನೆಯ ಅಧ್ಯಕ್ಷ ರತ್ನಾಕರ್ ಪೂಜಾರಿ ಅವರು ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡುವ ಮೂಲಕ ಕುಂದಾಪುರದ ಹೊಸ ಬಸ್ ನಿಲ್ದಾಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಹಿರಿಯ ವಕೀಲರಾದ ಶಿರಿಯಾರ ಮುದ್ದಣ್ಣ ಶೆಟ್ಟಿಯವರು ಕನ್ನಡ ಧ್ವಜಾರೋಹಣ ಮಾಡಿದರು ಸಂಘದ ದುಂಡಿರಾಜ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಪತ್ರಕರ್ತ ಮಝರ್ ಕುಂದಾಪುರ ಕನ್ನಡ ರಾಜ್ಯೋತ್ಸವ ಮತ್ತು ರಾಜ್ ಸಂಘಟನೆಯ ಅವಿನಾಭಾವ ಸಂಬಂಧದ ಬಗ್ಗೆ ಹೇಳಿದರು. ಕಾರ್ಯದರ್ಶಿ ಸುನಿಲ್ ಖಾರ್ವಿ ತಲ್ಲೂರು ರವರು ಸ್ವಾಗತಿಸಿದರು ಗೋಪಾಲ ಮಡಿವಾಳ ವಂದನಾರ್ಪಣೆಗೈದರು ಹರ್ಷವರ್ಧನ್ ಖಾರ್ವಿಯವರು ನಿರೂಪಿಸಿದರು ಕಾರ್ಯಕ್ರಮದಲ್ಲಿ ಡಾ |ರಾಜ್ ಸಂಘಟನೆಯ ಪದಾಧಿಕಾರಿಗಳಾದ ಅಗಸ್ಟೀನ್ ಡಿಸೋಜ, ಶ್ರೀಧರ್ ಗಾಣಿಗ, ಪ್ರಭಾಕರ್ ಖಾರ್ವಿ, ನವೀನ್ ಕುಮಾರ್, ಗಾಳಿ ಮಾಧವ ಖಾರ್ವಿ , ಪಚ್ಚಿ ಶೈನ್ ರಾಮಚಂದ್ರ, ಸಾಗರ್ ಪೂಜಾರಿ, ರಾಜ್ಯದ ಮಾಜಿ ಕಬಡ್ಡಿ ಆಟಗಾರ ಶೇಕ್ ಮಹ್ಮದ್ ತನ್ವೀರ್, ಕಾಸರಗೋಡು ಗಡಿನಾಡ ಕನ್ನಡಿಗ ಮನ್ಸೂರ್ ಸಾಹೇಬ್ ಹಾಗೂ ಸಂಘದ ಇನ್ನಿತರ ಸದಸ್ಯರ ಸಹಿತ ಸಾರ್ವಜನಿಕರು ಭಾಗವಹಿಸಿದ್ದರು. ಬಳಿಕ ಸಿಹಿ ತಿಂಡಿಯನ್ನು ವಿತರಿಸಲಾಯಿತು.