ಕುಂದಾಪುರ ಅ.31 ಜಗತ್ತಿನಲ್ಲಿ ಅತಿ ದೊಡ್ಡ ಬಹು ಸಂಸ್ಕೃತಿಯನ್ನು ಒಳಗೊಂಡು , ಏಕತೆಯನ್ನು ಪಸರಿಸುವ ದೇಶ ಭಾರತ. ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ದೃಢ ನಿರ್ಧಾರ ಇತಿಹಾಸದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮಂಚೂಣಿ ಸ್ಥಾನಕ್ಕೆ ತರುವಂತಾಯಿತು ಎಂದು ನಾಯಕರಾದ ದಿನೇಶ್ ಹೆಗ್ಡೆ ಯವರು ನುಡಿದರು.
ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಮಾತನಾಡಿ ,ಬ್ಯಾಂಕ್ ರಾಷ್ಟ್ರೀಕರಣ , ಭೂ ಸುಧಾರಣಾ ಮಸೂದೆಯಂತಹ ಹಲವು ಜನಪರ ಕಾರ್ಯಕ್ರಮಗಳ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದ ಕೀರ್ತಿ ಇಂದಿರಾಗಾಂಧಿಯವರಿಗೆ ಸಲ್ಲಬೇಕು. ಗೃಹ ಸಚಿವರಾಗಿ ಪಟೇಲರು ತೆಗೆದುಕೊಂಡ ಹಲವು ನಿರ್ಧಾರಗಳು ಇಂದಿನ ಭಾರತೀಯ ಪ್ರಜೆಗಳು ನೆಮ್ಮದಿಯ ಬದುಕಿಗೆ ಅಡಿಪಾಯವಾಯಿತು ಎಂದರು.
ಸಭೆಯಲ್ಲಿ ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಮತ್ತು ಹಿರಿಯರಾದ ಅಬ್ದುಲ್ಲಾ ಕೊಡಿಯವರು ಮಾತನಾಡಿದರು.
ಹಿರಿಯ ಕಾಂಗ್ರೆಸ್ಸಿಗರಾದ ಶಂಕರ್ ಪೂಜಾರಿ, ಸೋಶಿಯಲ್ ಮೀಡಿಯಾ ಜಿಲ್ಲಾಧ್ಯಕ್ಷ ರೋಶನ್ ಶೆಟ್ಟಿ, ಪುರಸಭಾ ಸದಸ್ಯೆ ಪ್ರಭಾವತಿ ಶೆಟ್ಟಿ ,ಪಂಚಾಯತ್ ಸದಸ್ಯರಾದ ಗಣಪತಿ ಶೇಟ್, ರಮೇಶ್ ಶೆಟ್ಟಿ, ನಾರಾಯಣ ಆಚಾರಿ ಕೋಣಿ, ಅಭಿಜಿತ್ ಪೂಜಾರಿ ,ಜ್ಯೋತಿ ನಾಯಕ್, ಸದಾನಂದ ಖಾರ್ವಿ,ಕೆ ಶಿವಕುಮಾರ್ ,ವೇಲಾ ಬ್ರಗಾಂಜ ,ಸುಭಾಷ್ ಪೂಜಾರಿ, ದಿನೇಶ್ ಬೆಟ್ಟ ,ಜೋಸೆಫ್ ರೆಬೆಲ್ಲೊ, ಶಶಿಧರ್ ಕಲ್ಲಾಗರ ,ಕುಮಾರ ಖಾರ್ವಿ ,ಸವಿತಾ ಸಿಕ್ವೇರಾ, ಸುನಿಲ್ ಪೂಜಾರಿ ,ಪ್ರೇಮ ಡಿಕುನ್ಹಾ, ಕೆ ಸುರೇಶ್ ,ಅರೀಶ್ ಹುಸೇನ್ , ಎಡೊಲ್ಫ್ ದಿಕೊಸ್ಟಾ, ವೇಣುಗೋಪಾಲ, ಲೋಕೇಶ್, ಪ್ರವೇಶ್ ,ಇನ್ನಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಅರುಣ್ ಪಟೇಲ್ ಸ್ವಾಗತಿಸಿ, ಅಶೋಕ್ ಸುವರ್ಣ ವಂದಿಸಿದರು.