ಸೇಂಟ್ ಜೋಸೆಫ್ಸ್ ಇಂಡಿಯನ್ ಪ್ರೌಢಶಾಲೆಯಲ್ಲಿ 2024-25ರ ಶೈಕ್ಷಣಿಕ ಸಾಲಿನ 120 ನೇಯ ವಾರ್ಷಿಕ ಕ್ರೀಡೋತ್ಸವವನ್ನು ಅಕ್ಟೋಬರ್ 30 ರಂದು ಆಚರಿಸಲಾಯಿತು.
ಕ್ರೀಡಾಕೂಟವು ಚರ್ತುವರ್ಣಧಾರಿಗಳಾದ ಬಾಬಾ ,ಲೊಯೋಲಾ, ನೆಹರು, ಟಾಗೋರ್ ಎಂದು ನಾಮಾಂಕಿತಗೊಂಡ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡಗಳು ಹಾಗು ಎನ್.ಸಿ ಸಿ , ಭಾರತ್ ಸ್ಕೌಟ್ಸ್, ಮತ್ತುಹಿಂದೂಸ್ಥಾನ ಸ್ಕೌಟ್ಸ್, ನೇವಲ್ ಮತ್ತು ಏರ್ ವಿಂಗ್ ಇವರ ಆಕರ್ಷಕ ಪಥ ಸಂಚಲನದ ಮೂಲಕ ಈ ವರ್ಣರಂಜಿತ ಕಾರ್ಯಕ್ರಮವು ಅದ್ಧೂರಿಯಾಗಿ ಆರಂಭವಾಯಿತು .
ಈ ವಿಶೇಷ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಕ್ರೀಡಾಪಟು ಹಾಗೂ ಅಂತರರಾಷ್ಟ್ರೀಯ ಮಟ್ಟದ ಈಜುಗಾರ ಎಂಬ ಪ್ರಶಸ್ತಿ ವಿಜೇತರಾದ ಶ್ರೀಯುತ ಸುರೇಶ್ ಎಸ್ ಸಿದ್ದಿ ಯವರು ಧ್ವಜಾರೋಹಣವನ್ನು ನೆರವೇರಿಸಿದರು.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಅವರು 120ನೆಯ ವಾರ್ಷಿಕ ಕ್ರೀಡಾಕೂಟದ ಕ್ರೀಡಾಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕ್ರೀಡೋತ್ಸವಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಶಾಲಾವತಿಯಿಂದ ಸನ್ಮಾನಿಸಲಾಯಿತು .ಅವರು ವಿದ್ಯಾರ್ಥಿಗಳನ್ನುದೇಶಿಸಿ “ತಮ್ಮ ಅವಿರತ ಸಾಧನೆಯ ಯಶಸ್ಸಿಗೆ ತಂದೆ ತಾಯಿ ಹಾಗೂ ಗುರುಗಳು , ಈ ಸಂಸ್ಥೆಯು ಕಲಿಸಿದ ಶಿಸ್ತು ಹಾಗೂ ನೀಡಿದ ಪ್ರೇರಣೆಯೂ ಆಧಾರವಾಯಿತು ” ಎಂದು ನುಡಿದರು . ಅವರೊಂದಿಗೆ ಸಂಸ್ಥೆಯ ರೆಕ್ಟರ್ ಪೂಜ್ಯ ವಂದನೀಯ ಫಾದರ್ ಜೋಸೆಫ್ ಡಿಸೋಜಾ ಎಸ್ ಜೆ, ಶಾಲೆಯ ಪ್ರಾಂಶುಪಾಲರಾದ ಪೂಜ್ಯ ವಂದನೀಯ ಫಾದರ್ ಸಿರಿಲ್ ಮೆನೇಜಸ್ ಎಸ್ ಜೆ, ಉಪಪ್ರಾಂಶುಪಾಲರಾದ ಶ್ರೀಮತಿ.ಸವಿತಾ ,ಪೋಷಕ ಶಿಕ್ಷಕ ಸಂಘದ ಉಪಾಧ್ಯಕ್ಷರು- ಕಾರ್ಯನಿರ್ವಾಹಕ ಸಮಿತಿಯ ಸದಸ್ಯರು ,ಹಿರಿಯ ವಿದ್ಯಾರ್ಥಿಗಳು, ಹಾಗೂ ಪೋಷಕರು ಉಪಸ್ಥಿತರಿದ್ದರು.
ಈ ಕ್ರೀಡೋತ್ಸವದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆಯನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಹಾಗು ಪೋಷಕರಿಂದ ಪ್ರದಾನ ಮಾಡಿಸಲಾಯಿತು.
ಅಪರಾಹ್ನದಲ್ಲಿ ಈ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಅಂತರರಾಷ್ಟ್ರೀಯ ಫುಟ್ ಬಾಲ್ ಆಟಗಾರರಾಗಿ ಪ್ರಸಿದ್ಧಿ ಪಡೆದ ಶ್ರೀಯುತ ಎ. ಡೆನ್ನಿಸ್ ಕ್ರಿಸ್ಟೋಫರ್ ರವರು ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು ಅವರನ್ನು ಅದರ ಪೂರ್ವಕವಾಗಿ ಗೌರವಿಸಿ ಸ್ವಾಗತಿಸಲಾಯಿತು. ಅವರು ಅಭಿನಂದನೆಯನ್ನು ಸಲ್ಲಿಸಿ “ಕ್ರೀಡೆ ಎಂದರೆ ಕೇವಲ ಸ್ಪರ್ಧೆ ಮತ್ತು ಜಯವಲ್ಲ ಇದು ಸಹಕಾರ ಮತ್ತು ಶಿಸ್ತನ್ನು ಬೆಳೆಸುವ ಒಂದು ವೇದಿಕೆಯಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಶ್ರೀಯುತ ಜೋಶುವಾ ಸೈಮನ್ ರವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕ್ರೀಡಾ ಇತಿಹಾಸವನ್ನು ಪ್ರತಿನಿಧಿಸುವ ಕವಾಯತನ್ನು ಪ್ರದರ್ಶಿಸಿದರು. ವಂದನಾರ್ಪಣೆಯೊಂದಿಗೆ ಕ್ರೀಡೋತ್ಸವವನ್ನು ಸಂಪನ್ನಗೊಳಿಸಲಾಯಿತು.