ಕುಂದಾಪುರ;ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ದಿನಾಂಕ :30/10/2024 ರಂದು ಶಾಲಾ ಸಭಾಂಗಣದಲ್ಲಿ ವಿಜ್ರಂಬಣೆಯಿಂದ ಕನ್ನಡರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ನೃತ್ಯ, ನಾಟಕ, ಕೆ.ಎಸ್. ನಿಸಾರ್ ಅಹಮದ್ರವರ ನಿತ್ಯೋತ್ಸವ ಗೀತೆಗೆ ಧ್ವನಿಯನ್ನು ನೀಡಿದರು ಹಾಗೂ ಕರ್ನಾಟಕದ ವಿವಿಧ ಸಂಸ್ಕೃತಿಯ ವೇಷ ಭೂಷಣವನ್ನು ವಿದ್ಯಾರ್ಥಿಗಳು ಪದರ್ಶಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿ ಎ.ಸಿ.ಯವರಿಗೆ ಕರ್ನಾಟಕರಾಜ್ಯ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ರುಪ್ಸಾ ಇವರಿಂದ ಕೊಡಲ್ಪಡುವ ರಾಜ್ಯ ಮಟ್ಟದ ‘ವಿದ್ಯಾರತ್ನ’ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿ ಎ.ಸಿ ಇವರನ್ನು ಶಾಲಾ ವತಿಯಿಂದಗೌರವಿಸಲಾಯಿತು.
ಗೌರವಾನ್ವಿತರು ತಮ್ಮ ಸಂದೇಶದಲ್ಲಿ ಈ ಪ್ರಶಸ್ತಿ ಎಲ್ಲಾ ಶಿಕ್ಷಕ-ಶಿಕ್ಷಕೇತರ ವೃಂದದವರಿಂದ ಹಾಗೂ ಶಾಲಾ ಮುದ್ದು ಮಕ್ಕಳಿಂದ ದೊರೆಕಿರುವುದು ಆದ್ದರಿಂದ ಶಾಲೆಗೆ ನಾನು ಚಿರಋಣಿ ಆಗಿರುತ್ತೆನೆ ಂದು ಹರ್ಷ ವ್ಯಕ್ತಪಡಿಸಿದರು. ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಗುರುಗಳು ತಮ್ಮಅಧ್ಯಕ್ಷಿಯ ನುಡಿಯಲ್ಲಿ ದೀಪಾವಳಿ ಎನ್ನುವುದು ದೀಪಗಳ ಹಬ್ಬ, ಅಜ್ಞಾನವನ್ನು ಕಳೆದು ಸುಜ್ಞಾನವನ್ನು ನೀಡುವ ಹಬ್ಬ, ಕತ್ತಲೆಯನ್ನು ಕಳೆದು ಬೆಳಕನ್ನು ನೀಡುವ ಹಬ್ಬವೆಂದು ದೀಪಾವಳಿಯ ಮಹತ್ವವನ್ನು ತಿಳಿಸಿ ಸರ್ಕಾರದ ನಿಯಮದಂತೆ ಹಸಿರು ಸಿಡಿಮದ್ದು ಉಪಯೋಗಿಸಿ. ನಿಮ್ಮಜೀವನ ದೀಪದಂತೆ ಬೆಳಗಲಿ “ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳಸಿ” ಹಾಗೂ ಹಿಂದೆ ನಡೆದ ಕರಕುಶಲ ವಸ್ತುಗಳ ಪ್ರದರ್ಶನದ ಬಗ್ಗೆ ತಮ್ಮಅಧ್ಯಕ್ಷೀಯ ನುಡಿಯಲ್ಲಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ರೊಹಿಣಿ ನಿರೂಪಿಸಿ, ನಿಸರ್ಗ ಸ್ವಾಗತಿಸಿ, ವರ್ಷಧನ್ಯವಾದ ಸಮರ್ಪಿಸಿದರು.