ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಪ್ರಾಥಮಿಕ (3&4ನೇ) ತರಗತಿ ಮಕ್ಕಳಿಗೆ ಒಂದು ದಿನದ ಅಬಾಕಸ್ ಸ್ಪರ್ಧೆ ಆಯೋಜಿಸಲಾಗಿತ್ತು
ಅತಿಕಡಿಮೆ ಸಮಯದಲ್ಲಿ ವಿವಿಧ ರೀತಿಯ ಮನೋಗಣಿತ ಲೆಕ್ಕಗಳನ್ನು ಮಾಡುವ ಮೂಲಕ ಸುಮಾರು 150 ಮಕ್ಕಳು ತಮ್ಮ ಪಾಲಕರ ಉಪಸ್ಥಿತಿಯಲ್ಲಿ ಎಲ್ಲರಿಂದ ಪ್ರಶಂಸೆಗೆ ಒಳಗಾದರೂ
ಅತ್ಯಂತ ಕ್ರಿಯಾಶೀಲತೆಯಿಂದ ಆರಂಭಗೊಂಡ ಈ ಸ್ಪರ್ಧೆಯು ಎಲ್ಲರಿಂದ ಮೆಚ್ಚುಗೆಗಳಿಸಿತು
ಶಿಕ್ಷಣದಲ್ಲಿ ಸದಾ ನವೀನತೆಯನ್ನು ಪರಿಚಯಿಸುತ್ತಿರುವ ಆಡಳಿತಮಂಡಳಿಯ ಕ್ರಿಯಾಶೀಲತೆಯನ್ನು ಪೋಷಕರು ಕೊಂಡಾಡಿದರು
ತಮ್ಮ ಮಕ್ಕಳ ಮನೋಗಣಿತದ ಬುದ್ಧಿಮತ್ತೆಯನ್ನು ಕಣ್ಣಾರೆ ಕಂಡ ಎಲ್ಲಾ ಪಾಲಕರು ಅತೀವ ಸಂತಸಪಟ್ಟರು
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಚಾಲನೆಗೊಂಡಿತು
ಅಬಾಕಸ್ ತರಬೇತುದಾರರಾದ ಗೀತಾ (ಉಪನ್ಯಾಸಕರು ಮದರ್ ತೆರೇಸಾಸ್ ಪಿ ಯು ಕಾಲೇಜು, ವೇದಗಣಿತ ಮತ್ತು ಅಬಾಕಸ್ ತರಬೇತುದಾರರು ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತರು) ಇವರು ಪೂರ್ಣದಿನ ವಿದ್ಯಾರ್ಥಿಗಳಿಗೆ ಮನೋಗಣಿತದ ವಿವಿಧ ಹಂತದ ಲೆಕ್ಕಗಳನ್ನು ಲಿಖಿತ ಮತ್ತು ಮೌಖಿಕವಾಗಿ ನಡೆಸಿದರು ಆಡಳಿತಮಂಡಳಿಯ
ಅಧಿಕಾರಿಧ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಬೊ, ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಗೌರವ ಉಪಸ್ಥಿತಿ ಕುಮಾರಿ ಅಲಿಟಾ ಡೇಸ್ ಆಂಗ್ಲಭಾಷಾ ಉಪನ್ಯಾಸಕರು ಸೈoಟ್ ಅಲೋಸಿಯಸ್ ಡಿಮಡ್ ಟು ಬಿ ಯೂನಿವರ್ಸಿಟಿ ಮಂಗಳೂರು ಪಾಲಕರು, ಮತ್ತು ಉಪನ್ಯಾಸಕರಾದ ರಸಿಕ, ರತ್ನಕುಮಾರ್, ಶಿಕ್ಷಕರು ಉಪಸ್ಥಿತರಿದ್ದರು
ಶಿಕ್ಷಕಿ ದಿವ್ಯಾ ಸ್ವಾಗತಿಸಿ, ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ವಂದಿಸಿ ಶಿಕ್ಷಕಿ ರೇಷ್ಮಾ ನಿರೂಪಿಸಿದರು.