ಉಡುಪಿ; ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ - ಬಾರಕೂರನಲ್ಲಿ ಎಲ್. ಕೆ. ಜಿ ಮತ್ತು ಯು. ಕೆ. ಜಿ ವಿದ್ಯಾರ್ಥಿಗಳ ಅಜ್ಜ - ಅಜ್ಜಿಯಂದಿರ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮ ವನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಕಿತಾ ಕೊಠಾರಿ ರವರು ದೀಪ ಬೆಳಗಿಸಿ "ಊರಿಗೆ ಒಂದು ವನ ಬೇಕು , ಮನೆಯಲ್ಲಿ ಮಕ್ಕಳ ಖುಷಿಗೆ ಅಜ್ಜ - ಅಜ್ಜಿ ಬೇಕು " ಎಂದು ಅಜ್ಜ - ಅಜ್ಜಿಯ ಪ್ರೀತಿ , ಬ್ಯಾಂಕ್ ನಲ್ಲಿ ಇಟ್ಟ ಹಣಕ್ಕೆ ಎರಡು ಪಟ್ಟು ಬಡ್ಡಿ ಸಿಗತ್ತೋ ಹಾಗೆ ಅಜ್ಜ ಅಜ್ಜಿಯರು ಮಕ್ಕಳಿಗೆ ಪ್ರೀತಿ ಕೊಡುತ್ತಾರೆಂದು ಅಜ್ಜ ಅಜ್ಜಿಯ ಪ್ರೀತಿಯ ಮಹತ್ವ ವನ್ನು ಹಂಚಿ ಕೊಂಡರು.
ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಸುಜಾತಾ ಎಲ್. ರೈ ರವರು ಈ ಕಾರ್ಯಕ್ರಮದ ಕುರಿತು ಅಜ್ಜ - ಅಜ್ಜಿ ಅಂದ್ರೆ ಪ್ರೀತಿ ಯ ಸಂಭ್ರಮ " ಎಂದು ಅಜ್ಜ ಅಜ್ಜಿಯ ಜೊತೆಗೆ ಮಕ್ಕಳು ಸಮಯ ಕಳೆಯುವುದನ್ನು ತಮ್ಮ ಮಾತುಗಳಲ್ಲಿ ನುಡಿದರು.
ಈ ಸಂದರ್ಭದಲ್ಲಿ ಎಲ್. ಕೆ. ಜಿ ಮತ್ತು ಯು. ಕೆ. ಜಿ ವಿದ್ಯಾರ್ಥಿ ಗಳು ಸಾಮೂಹಿಕ ವಾಗಿ ಅಜ್ಜ ಅಜ್ಜಿಯ ರ ಮಹತ್ವ ದ ಕುರಿತಾದ ಗೀತೆ ಯನ್ನು ಹಾಡಿದರು.
ಆಗಮಿಸಿರುವ ವಿದ್ಯಾರ್ಥಿ ಗಳ ಅಜ್ಜ ಅಜ್ಜಿಯರಿಗೆ ಖುಷಿ ಕೊಡುವ ಆಟ ವನ್ನು ಮಕ್ಕಳೊಂದಿಗೆ ಆಡಿಸಲಾಯಿತು.
ಮಕ್ಕಳು ತಮ್ಮ ಅಜ್ಜ ಅಜ್ಜಿಯ ಜೊತೆಗೆ ತುಂಬಾ ಸಂತೋಷ ದಿಂದ ದಿನ ಕಳೆದರು.
ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಶುಭ ರಾವ್ ಶ್ರೀಮತಿ ಕುಸುಮ, ಶ್ರೀಮತಿ ಚಂದ್ರ ಕಲಾ ಸಂಯೋಜನೆ ಮಾಡಿದರು. ಶಾಲೆಯ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.