ಅನುದಾನ ರಹಿತ ಶಾಲೆಗಳ ಸಂಘ (ರುಪ್ಪಾ) ನೀಡುವ 2024-25ನೇ ಸಾಲಿನ, ರಾಜ್ಯ ಮಟ್ಟದ ಉತ್ತಮ ಆಡಳಿತ ಮಂಡಳಿ (ಆಡಳಿತಗಾರ) ಪ್ರಶಸ್ತಿ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಉತ್ತಮ ಆಡಳಿತಗಾರ. ಪ್ರಶಸ್ತಿಗೆ ಶಕ್ತಿನಗರದ ಶಕ್ತಿ ರೆಸಿಡೆನ್ನಿಯಲ್ ಶಾಲೆಯ ಅಧ್ಯಕ್ಷರಾದ ಡಾ:ಕೆ.ಸಿ.ನ್ಭಾಕ್, ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅದ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಸವಣೂರು ವಿದ್ಯಾರಶ್ಚಿ ಸಮೂಹ. ವಿದ್ಯಾಸಂಸ್ಥೆಗಳ ಸಂಚಾಲಕ. ಸವಣೂರು ಸೀತಾರಾಮ ರೈ, ಬಂಟ್ವಾಳ ತಾಲೂಕಿನ ವಿಠಲ್. ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಚಾಲಕರಾದ ಎಲ್. ಎನ್. ಕುಡೂರು, ಕಣಚೂರ್ ಪಬ್ಲಿಕ್ ಸ್ಕೂಲ್ನ ಚೇರ್ಮೆನ್ ಯು.ಕೆ. ಮೋನು, ಎಕ್ಸ್ ಲೆಂಟ್ ಶಾಲೆ ಮೂಡುಬಿದಿರೆಯ ಅಧ್ಯಕ್ಷ ಯುವರಾಜ್ ಜೈನ್, ಕಟೀಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ ಸನತ್ ಕುಮಾರ್ ಶೆಟ್ಟಿ, ವೇಣೂರು ಕುಂಭಶ್ರೀ ರೆಸಿಡೆನ್ಶಿಯಲ್ ಸ್ಕೂಲ್ನ ಚೇರ್ಮ್ಯಾನ್ ಗಿರೀಶ್ ಕೆ.ಎಚ್. ಸುಳ್ಯ ಬೀರಮಂಗಲ, ಸಂತ ಜೋಸೆಫ್ ಇಂಗ್ಲಿಷ ಮೀಡಿಯಂ ಸ್ಕೂಲ್ನ ಫಾ. ವಿಕ್ಟರ್ ಡಿಸೋಜ, ಉಡುಪಿ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ ಅಧ್ಯಕ್ಷ ಟಿ. ಅಶೋಕ್ ಪೈ, ಬ್ರಹ್ಮಾವರ ನಿರ್ಮಲ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಫಾ. ಜಾನ್ ಫರ್ನಾಂಡಿಸ್, ಉಡುಪಿ ಕುಂಜಾರುಗಿರಿ. ಪಾಜಕ ಆನಂದತೀರ್ಥ ವಿದ್ಯಾಲಯ ಅಧ್ಯಕ್ಷ ಎನ್. ನಾಗರಾಜ್ ಬಳ್ಳಾಲ್ ಉತ್ತಮ ಆಡಳಿತಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉತ್ತಮ ಶಿಕ್ಷಕರ ವಿಭಾಗದಲ್ಲಿ . ಉಡುಪಿ ಜಿಲ್ಲೆಯ ಕುಂದಾಪುರ ಹೋಲಿ ರೋಸರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ತೆರೆಸೆ ಶಾಂತಿ ಡಿಸೋಜ, ಅಮಾಸೆಬೈಲು ಡ್ಯುಯಲ್ ಸ್ಟಾರ್ ಎಜುಕೇಶನ್ ಇನ್ಸ್ಟಿಟ್ಯೂಷನ್ ವಿಫ್ಲೇಶ್, ಕುಕ್ಕುಂದೂರು ಸಂತ ಮರಿಯಾ ಗೊರೆಟ್ಟಿ ಶಾಲೆಯ ಆರತಿ, ಸಾಸ್ತಾನ ಸಂತ ಅಂತೋನಿ ಇಂಗ್ಲಿಷ್ ಮೀಡಿಯಂಶಾಲೆಯ ಸ್ಯ ಹ ವಿವೇಕ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನ ವಿನಿತಾ, ಸಂತ ಕ್ಷೇವಿಯರ್ ಇಂಗ್ಲಿಷ್ ಮೀಡಿಯಂ ಶಾಲೆಯ ಅನಿಲ್ ಕುಮಾರ್, ಪಡುಬಿದ್ರಿ ಸಾಗರ್ ವಿದ್ಯಾಮಂದಿರ್ ಇಂಗ್ಲಿಷ ಮೀಡಿಯಂಶಾಲೆಯ ವಿನುತಾ ಶೆಡ್ತಿ, ಹೆಜಮಾಡಿ ವಿದ್ಯಾಪ್ರಸಾರ ಇಂಗ್ಲಿಷ್ ಮೀಡಿಯಂ. ಸ್ಕೂಲ್ನ ರಾಜೇಶ್ವರಿ ಎಸ್. ಕರ್ಕೇರ, ಕಾಪು ದಂಡತೀರ್ಥ ಪಿಯು. ಕಾಲೇಜಿನ ನೀಲಾನಂದ ನಾಯ್ಕ್ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇವರುಗಳಿಗೆ ಅ.21ರಂದು ಬೆಂಗಳೂರಿನ ಜುದ್ದಿ ಅಂತಾರಾಷ್ಟ್ರೀಯ ಶಾಲಾ ಅಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.