ಶ್ರೀನಿವಾಸಪುರ : ಮೊಬೈಲ್ ವೀಕ್ಷಣೆಯಿಂದ ಎಷ್ಟೋ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾಭ್ಯಾಸದಲ್ಲಿ ತಮ್ಮ ಜೀವನದ ಗುರಿಮಟ್ಟುವ ತನಕ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವಂತೆ ಎಂದು ಪಿಎಸ್ಐ ಎಚ್.ಜಯರಾಮ್ ಸಲಹೆ ನೀಡಿದರು.
ಪಟ್ಟಣದ ಎಸ್ಎಫ್ಎಸ್ ಶಾಲೆಯಲ್ಲಿ ಶುಕ್ರವಾರ ಪಟ್ಟಣ ಪೊಲೀಸ್ ಠಾಣೆಯ ವತಯಿಂದ ಅರಕ್ಷಕ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ತಂದೆ ತಾಯಿ ಎಷ್ಟು ಕಷ್ಟ ಬಿದ್ದು ಓದಿಸುತ್ತಾರೆ ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಗಮನದಲ್ಲಿ ಇಟ್ಟುಕೊಂಡು ವ್ಯಾಂಸಗ ಮಾಡಬೇಕು. ಪುಂಡ ಪೋಕರರು ಚುಡಾಯಿಸಲು ಬಂದಲ್ಲಿ. ಕೊಡಲೇ , ಶಾಲೆಯ ಮುಖ್ಯಶಿಕ್ಷಕರಿಗೆ ಅಥವಾ ಪೊಲೀಸರಿಗೆ ತಿಳಿಸಬೇಕು .
ಸಮಾಜದಲ್ಲಿ ಅನೇಕ ಸಮಾಜ ಘಾತಕ ಚಟುವಟಿಕೆಗಳು ನಡೆಯುತ್ತವೆ ಅದನ್ನ ತಡೆಹಿಡಿಯಬೇಕಾಗಿದೆ. ನೀವು ಒಳ್ಳೆಯ ವಿದ್ಯಾವಂತರಾಗಿ ಸಮಾಜಕ್ಕೆ, ತಂದೆತಾಯಿಗಳಿಗೆ ಗೌರವ ಹಾಗು ಒಳ್ಳೆಯ ಹೆಸರು ತರುವ ಕೆಲಸಗಳನ್ನು ಮಾಡುವಂತೆ ಸಲಹೆ ನೀಡಿದರು.
ನೀವು ಮನಸ್ಸು ಮಾಡಿದರೆ ಯಾವುದೇ ಕೆಲಸವನ್ನು ಮಾಡಬಹುದು ಆದ್ದರಿಂದ ನೀವು ಒಳ್ಳೆಯ ವಿದ್ಯಾವಂತರಾಗಿ ದೇಶ ಕಟ್ಟುವ ಕೆಲಸ ಮಾಡುವಂತೆ ಸಲಹೆ ನೀಡಿದರು. ನಿಮಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಾಂಶುಪಾಲ ಸ್ಯಾಂಡಿಕೊರೆನ್ , ಪಿಎಸ್ಐ ಎಚ್.ಜಯರಾಮ್, ಮುಖ್ಯ ಶಿಕ್ಷಕ ರೆಡ್ಡಮ್ಮ ಶಂಕರ್, ಪಿಸಿಗಳಾದ ರಾಮಚಂದ್ರ, ರವೀಂದ್ರ, ಸುಬಾನ್ ಇದ್ದರು.