ಕೋಲಾರ:- ಜಗತ್ತಿನಲ್ಲಿ ಮನುಕುಲ ಇರುವವರೆವಿಗೂ ರಾಮಾಯಣ ಇರುತ್ತದೆ, ರಾಮಾಯಣ ಇರುವವರೆವಿಗೂ ವಾಲ್ಮೀಕಿ ಮಹರ್ಷಿ ಚಿರಸ್ಮರಣೀಯವಾಗಿರುತ್ತಾರೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್. ಶ್ರೀನಾಥ್ ಹೇಳಿದರು.
ನಗರದ ಭಾರತ ಸೇವಾದಳ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಾನವೀಯ ಸಂಬಂಧಗಳ ಔನತ್ಯವನ್ನು ಎತ್ತಿ ಹಿಡಿದ ರಾಮಾಯಣ ಮಹಾಕಾವ್ಯವನ್ನು ವಾಲ್ಮೀಕಿ ಮಹರ್ಷಿ ರಚಿಸಿದ ನಂತರ ಕೇವಲ ಭಾರತ ಮಾತ್ರವಲ್ಲದೆ ಜಗತ್ತಿನ ಎಲ್ಲಾ ಭಾಷೆಗಳಿಗೆ ರಾಮಾಯಣ ಅನುವಾದಗೊಂಡು ವಿಶ್ವಕ್ಕೆ ಪರಿಚಯವಾಗಿದೆ ಎಂದು ವಿವರಿಸಿದರು.
ವಾಲ್ಮೀಕಿ ಮಹರ್ಷಿ ರಚಿಸಿದ 24 ಸಾವಿರ ಶ್ಲೋಕಗಳನ್ನೊಳಗೊಂಡ ರಾಮಾಯಣವನ್ನು ನಿತ್ಯ ಪಠಿಸುತ್ತಾ, ಅದರಲ್ಲಿನ ಆದರ್ಶಗಳನ್ನು ಪ್ರತಿಯೊಬ್ಬರೂ ನಿತ್ಯವೂ ಪಾಲಿಸಿದಲ್ಲಿ ನೆಮ್ಮದಿಯುತ ಬದುಕು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಶಿಕ್ಷಣ ಸಂಯೋಜಕ ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಆರ್.ಶ್ರೀನಿವಾಸನ್ ಮಾತನಾಡಿ, ಬುಡಕಟ್ಟು ಜನಾಂಗದಲ್ಲಿ ಜನಿಸಿ e್ಞÁನವಂತರಾಗಿ ರಾಮಾಯಣದಂತ ಮಹಾಕಾವ್ಯವನ್ನು ಸಂಸ್ಕøತದಲ್ಲಿ ರಚಿಸುವ ಮೂಲಕ ವಾಲ್ಮೀಕಿ ಮಹರ್ಷಿಗಳು ಮನುಷ್ಯ ಮನಸು ಮಾಡಿದರೆ ಎಂತದ್ದೇ ಸಾಧನೆ ಮಾಡಬಹುದು ಎಂಬುದಕ್ಕೆ ನಿದರ್ಶನವಾಗಿರುತ್ತದೆ, ಹಾಗೆಯೇ ರಾಮಾಯಣ ಕಥಾ ನಾಯಕ ಶ್ರೀರಾಮ ಮನುಷ್ಯನಾಗಿ ದೈವತ್ವಕ್ಕೇರಿದ ಸಂಕೇತವಾಗಿ ರೂಪುಗೊಂಡಿರುವುದು ಪ್ರತಿಯೊಬ್ಬರಿಗೂ ಪ್ರೇರಣೆ ಮತ್ತು ಆದರ್ಶವಾಗಿದೆ ಎಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಜಗತ್ತಿನ ಎಲ್ಲಾ ಕಥೆಗಳನ್ನೊಳಗೊಂಡ ಮಹಾಕಥೆಯಾಗಿ ರಾಮಾಯಣವು ಯಾವುದೇ ಕಾಲಘಟ್ಟದಲ್ಲಿ ಅಗ್ರಗಣ್ಯವಾಗಿ ನಿಲ್ಲುತ್ತದೆ, ಮನುಷ್ಯನ ಎಲ್ಲಾ ಸಂಬಂಧಗಳನ್ನು ಒಂದೇ ಕಥೆಯಲ್ಲಿ ಬರುವಂತೆ ಕೃತಿಯನ್ನು ರಚಿಸಿರುವುದು ವಾಲ್ಮೀಕಿ ಮಹರ್ಷಿಯ ಜಾಣ್ಮೆಗೆ ಸಾಕ್ಷಿಯಾಗಿದೆ, ರಾಮಾಯಣವು ಕೇವಲ ಹಿಂದುಗಳ ಕೃತಿಯಾಗದೆ ಜಗತ್ತಿನ ಸಮಸ್ತ ಮನುಕುಲದ ಕೃತಿಯಾಗಿ ಮಾದರಿಯಾಗಿದೆ, ಬುಡಕಟ್ಟು ಜನರು ವಿದ್ಯಾಭ್ಯಾಸ ಮಾಡಬಾರದು ಎಂಬ ಕಾಲಘಟ್ಟದಲ್ಲಿಯೇ ವಾಲ್ಮೀಕಿ ಮಹರ್ಷಿ ವಿದ್ಯೆ ಕಲಿತು ರಾಮಾಯಣದಂತ ಕೃತಿ ಬರೆಯುವ ಸಾಧನೆ ಮಾಡಿರುವುದು ಐತಿಹಾಸಿಕ ದಾಖಲೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಗಣ್ಯರು ಮತ್ತು ಅತಿಥಿಗಳಿಂದ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅದ್ಯಕ್ಷ ನಾರಾಯಣರೆಡ್ಡಿ, ಭಾರತ ಸೇವಾದಳ ತಾಲೂಕು ಅಧ್ಯಕ್ಷ ಶ್ರೀರಾಮ್, ಪದಾಧಿಕಾರಿಗಳಾದ ಕೆ.ಜಯದೇವ್, ಪಲ್ಗುಣ, ರಾಜೇಶ್ಸಿಂಗ್, ಗೋಕುಲ ಚಲಪತಿ, ಮುನಿವೆಂಕಟ್, ದನಂಜಯ್, ಚಾಂದ್ ಪಾಷಾ, ಚಾಮುಂಡೇಶ್ವರಿ ದೇವಿ, ಶಿಕ್ಷಕ ಸತೀಶ್, ನಯಾಜ್, ತಬ್ರೇಜ್ ಮತ್ತಿತರರು ಹಾಜರಿದ್ದರು.
ಭಾರತ ಸೇವಾದಳ ಸಂಘಟಕ ಕಾರ್ಯಕ್ರಮ ನಿರ್ವಹಿಸಿದರು. ಸರ್ವಧರ್ಮ ಪ್ರಾರ್ಥನೆ ಹಾಗೂ ರಾಷ್ಟ್ರಗೀತೆ ಗಾಯನ ನೆರವೇರಿತು.