ಶ್ರೀನಿವಾಸಪುರ : ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು ನಮ್ಮ ನೆಲದ ಸಂಸ್ಕøತಿ ಆದರ್ಶ-ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆದರ್ಶಪ್ರಾಯರಾದ ತಂದೆ, ತಾಯಿ, ಸಮಾಜದಲ್ಲಿ ಅವರ ಸ್ಥಾನಮಾನ, ಸಹೋದರರ ಸಂಬಂಧ ಹೇಗಿರಬೇಕು. ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಹಾಗೂ ಘನತೆ ಮುಂತಾದ ವಿಷಯಗಳ ಬಗ್ಗೆ ಇದರಲ್ಲಿ ಮಹರ್ಷಿಗಳು ಬೆಳಕು ಚಲ್ಲಿದ್ದಾರೆ . ಸಮಾಜದ ಸುಧಾರಕರೂ ಮಾತ್ರ ಯೋಜಿಸಲು ಸಾಧ್ಯ ಎಂದರು.
ಕಳೆದ ಆರು ಏಳು ವರ್ಷಗಳಿಂದ ಈ ಸಮುದಾಯದ ರೈತವರ್ಗದವರಿಗೆ ಸರ್ಕಾರದಿಂದ ಉಚಿತ ಕೊಳವೆ ಬಾವಿಗಳು ವಿತರಣೆಯಾಗಿಲ್ಲ , ಈ ಭಾರಿ ಸರ್ಕಾರದೊಂದಿಗೆ ಚರ್ಚಿಸಿ ಈ ಸಮುದಾಯದ ರೈತವರ್ಗಗದ ಫಲಾನುಭವಿಗಳಿಗೆ 110 ಕೊಳವೆ ಬಾವಿಗಳನ್ನು ಉಚಿತವಾಗಿ ಪಕ್ಷಬೇದ ಮರೆತು ಸಮುದಾಯದವರಿಗೆ ಹಂಚಿಕೆ ಮಾಡುವುದಾಗಿ ಕರ್ತವ್ಯವಾಗಿದೆ ಎಂದರು .
ತಾಲೂಕಿನ ಸೋಮಯಾಜಪಲ್ಲಿ,ಮುದಿಮಡುಗು, ನೆಲವಂಕಿ, ಕೊಳತೂರು ಗ್ರಾಮಪಂಚಾಯಿತಿಗಳಲ್ಲಿ ಸಮುದಾಯದಲ್ಲಿ ಕಡುಬಡವರಿದ್ದು, ಸರ್ಕಾರಿ ಯೋಜನೆಗಳನ್ನು ಮನೆ ಬಾಗಿಲಿಗೆ ಸೇರಿಸುವ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ಕೈಗಾರಿಕ ವಲಯ ಸ್ಥಾಪಿಸುವುದರಿಂದ ಕ್ಷೇತ್ರದ ಜನತೆಗೆ ಅನುಕೂಲವಾಗಲಿದೆ ಹೊರತು ಅನಾನುಕೂಲವಾಗುವುದಿಲ್ಲ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ವಾಲ್ಮೀಕಿ ಮಹರ್ಷಿಗಳು ಒಬ್ಬ ವಿಜ್ಞಾನಿ, ಮಹಾಕವಿ, ಖಗೋಳಶಾಸ್ತ್ರಜ್ಞ ರವರು ತಪ್ಪಸ್ಸಿನ ಫಲದಿಂದ ಅನೇಕ ರೀತಿಯಾದ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡಿದ್ದರು. ಆದ್ದರಿಂದ ಇಂದು ನಾವೆಲ್ಲರೂ ಅವರ ಆದರ್ಶಗಳನ್ನು ಕಾರ್ಯಪ್ರವೃತ್ತಿಯನ್ನು ಜೀವನಕ್ಕೆ ಆಳವಡಿಸಿಕೊಳ್ಳಬೇಕು ಎಂದರು.
ಈ ಸಮಯದಲ್ಲಿ ತಹಶೀಲ್ದಾರ್ ಕಛೇರಿಯಲ್ಲಿ ವಾಲ್ಮೀಕಿ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಲಾಯಿತು. ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿ ಕೇಂದ್ರಗಳಿಂದ ಬೆಳ್ಳಿ ರಥದಲ್ಲಿ ಬಂದತಹ ಬೆಳ್ಳಿರಥಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆಯನ್ನ ಹಮ್ಮಿಕೊಳ್ಳಲಾಗಿತ್ತು. ಎಸ್ಸಿ, ಎಸ್ಟಿ ಸಮುದಾಯದ ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಬ್ರಾಹ್ಮಣರ ಸಂಘದ ತಾಲೂಕು ಅಧ್ಯಕ್ಷ ದಿವಾಕರ್ ಮಾತನಾಡಿದರು. ಆರ್.ಬಾಬು ವಿದ್ಯಾರ್ಥಿಗಳಿಗೆ ಪಾರಿತೋಷಕನ್ನು ವಿತರಿಸಿದರು. ಕೆ.ಇಒ ಎ.ಎನ್.ರವಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಪಿಎಸ್ಐ ಜಯರಾಮ್, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ರಾಜೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್,ಸಿಡಿಪಿಒ ನವೀನ್, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಜಿಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ವೇಣುಗೋಪಾಲ್, ಸಮುದಾಯದ ಮುಖಂಡರಾದ ರಮೇಶ್, ಗೌನಿಪಲ್ಲಿ ರಾಮಮೋಹನ, ಕೊರ್ನಹಳ್ಳಿ ಆಂಜಿ, ಹೊಗಳಗೆರೆ ಆಂಜಿ, ವಾಲ್ಮೀಕಿ ಗುರುಕುಲ ಪೀಠ ಜಿಲ್ಲಾಧ್ಯಕ್ಷ ಗುಮ್ಮಿರೆಡ್ಡಿಪುರ ಹರೀಶ್ನಾಯಕ್, ತಾಲೂಕು ಪ್ರದಾನ ಕಾರ್ಯದರ್ಶಿ ಗುಮ್ಮಿರೆಡ್ಡಿಪುರ ಪ್ರದೀಪ್, ಕೃಷ್ಣಪ್ಪ, ತಾಲೂಕು ಅಧ್ಯಕ್ಷ ನಾಗರಾಜ್, ಸಿ.ಎಸ್. ಆನಂದ್, ಸಿ.ಎನ್.ಕೃಷ್ಣಮೂರ್ತಿ, ಯಮ್ಮನೂರು ನಾಗರಾಜ್, ಅಂಬೇಡ್ಕರ್ ಪಾಳ್ಯ ನಹಸಿಂಹ, ಚಲ್ದಿಗಾನಹಳ್ಳಿ ಈರಪ್ಪ, ಹೂಹಳ್ಳಿ ಅಂಬರೀಶ್, ಮನು, ಶ್ರೀನಾಥ್ ಇದ್ದರು.