ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವಾ ಕ್ಷೇತ್ರಗಳಲ್ಲಿ ಕಳೆದ ಏಳು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಮಾಜಿ ಶಾಸಕ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಸ್ರೂರು ಕ್ಷೇತ್ರದ ಆಡಳಿತ ಧರ್ಮದರ್ಶಿ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ (ರಿ.) ಧರ್ಮಸ್ಥಳದ ಉಡುಪಿ ಜಿಲ್ಲಾ ಸ್ಥಾಪಕ ಅಧ್ಯಕ್ಷ, ಬಸ್ರೂರು ಅಪ್ಪಣ್ಣ ಹೆಗ್ಡೆಯವರನ್ನು ‘ಕುಂದಪ್ರಭ’ ಸಂಸ್ಥೆಯಿಂದ ನೀಡಲಾಗುತ್ತಿರುವ ಕೋ. ಮ. ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕ ಕೋ. ಶಿವಾನಂದ ಕಾರಂತ ತಿಳಿಸಿದ್ದಾರೆ.
ಈ ತನಕ ಸ್ವಾತಂತ್ರ್ಯ ಹೋರಾಟಗಾರ, ಕೆ. ಎನ್. ರಾವ್ ದಾಂಡೇಲಿ, ಬಾಹ್ಯಾಕಾಶ ವಿಜ್ಞಾನಿ ಕರುಣಾಕರ ಕುಂದಾಪುರ, ಆಹಾರೋದ್ಯಮಿ ಡಾ| ಪಿ. ಸದಾನಂದ ಮಯ್ಯ, ಚಿತ್ರನಟಿ ವೈಶಾಲಿ ಕಾಸರವಳ್ಳಿ, ದಂತ ತಜ್ಞ ಡಾ| ಸುಭಾಶ್ಚಂದ್ರ ಶೆಟ್ಟಿ, ಚಿತ್ರ ನಿರ್ದೇಶಕ, ಪತ್ರಕರ್ತ ಲೆಸ್ಲಿ ಕಾರ್ವೆಲ್ಲೊ, ಹಿರಿಯ ಕವಿ ದುಂಡಿರಾಜ್, ಸಮಾಜ ಸುಧಾರಕ ಹರಿಕೃಷ್ಣ ಪುನರೂರು, ಖ್ಯಾತ ಹೋಟೆಲ್ ಉದ್ಯಮಿ ಸುರೇಶ ಪೂಜಾರಿ ಪಡುಕೋಣೆ, ಸೆಂಚೂರಿ ಗ್ರೂಪ್ ಚೆಯರ್ಮ್ಯಾನ್ ಡಾ| ಪಿ. ದಯಾನಂದ ಪೈ, ಹರಿಕೀರ್ತನಗಾರ ಭದ್ರಗಿರಿ ಅಚ್ಯುತದಾಸರು, ಇತಿಹಾಸ ಸಂಶೋಧಕ ಡಾ| ವಸಂತ ಮಾಧವ ಗುಜ್ಜಾಡಿ, ಭುವನಾಭಿರಾಮ ಉಡುಪ ಯುಗಪುರುಷ, ದಾನಿ, ಉದ್ಯಮಿ ದತ್ತಾನಂದ ಗಂಗೊಳ್ಳಿ, ಸೆಲ್ಕೋ ಮುಖ್ಯಸ್ಥ ಡಾ| ಹರೀಶ ಹಂದೆ, ಉದ್ಯಮಿ ಸುರೇಶ ಡಿ. ಪಡುಕೋಣೆ, ಶಿಕ್ಷಣ ತಜ್ಞ ಡಾ| ಎಚ್. ಶಾಂತಾರಾಮ್, ಸಾರ್ವಜನಿಕ ಸಂಪರ್ಕಾಧಿಕಾರಿ, ಲೇಖಕ ಜಯಪ್ರಕಾಶ ರಾವ್ ಮೈಸೂರು, ಮತ್ಸ್ಯೋದ್ಯಮಿ, ದಾನಿ, ಆನಂದ ಸಿ. ಕುಂದರ್, ಕಾಂಕ್ರೀಟ್ ತಜ್ಞ ಪ್ರೊ. ಎಂ. ಎಸ್. ಶೆಟ್ಟಿ, ಲೇಖಕಿ ಶಾರದಾ ಭಟ್, ಸಾಮಾಜಿಕ ಧುರೀಣ ಎ. ಜಿ. ಕೊಡ್ಗಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ರಂಗ ತಜ್ಞ, ಲೇಖಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕೋ. ಮ. ಕಾರಂತ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಬಸ್ರೂರ ಅಪ್ಪಣೆ ಹೆಗ್ಡೆಯವರ ವಿವಿಧ ಕ್ಷೇತ್ರಗಳ ಸಾಧನೆಯನ್ನು ಪರಿಗಣಿಸಿ ಈ 25ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ವಿಶೇಷವಾಗಿ ನಡೆಯಲಿದೆ ಎಂದು “ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ತಿಳಿಸಿದ್ದಾರೆ.