ಉಡುಪಿ ಕಥೋಲಿಕ ಧರ್ಮ ಕ್ಷೇತ್ರವು ಪ್ರತಿ ವರ್ಷ ತನ್ನ ಪ್ರತಿ ವಲಯದಲ್ಲಿ 10 ನೇ ತರಗತಿಯಲ್ಲಿ ಕಲಿಯುವ ಕಥೋಲಿಕ್ ವಿದ್ಯಾರ್ಥಿಗಳಿಗೆ ಸಂಘಟಿಸುವ ‘ಜೀವನ್ ಜ್ಯೋತಿ ‘ಶಿಬಿರವು ಕುಂದಾಪುರ ವಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ತಲ್ಲೂರಿನ ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದ ಸಭಾಂಗಣದಲ್ಲಿ ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾ. ಎಡ್ವಿನ್ ಡಿಸೋಜಾರವರ ನೇತೃತ್ವದಲ್ಲಿ ಅಕ್ಟೋಬರ್ 10 ರಿಂದ 12 ರ ವರೆಗೆ ಮೂರು ದಿನದ ಶಿಬಿರವು ಬಹಳ ಅದ್ದೂರಿಯಾಗಿ ಜರುಗಿತು.
ಅಕ್ಟೋಬರ್ 10 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ತ್ರಾಸಿ ಕ್ರೈಸ್ಟ್ ಕಿಂಗ್ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ.ರೋಸಾರಿಯೊ ಫೆರ್ನಾಂಡಿಸ್ ರ ವರು ಶಿಬಿರಾರ್ಥಿಗಳೊಂದಿಗೆ ದೀಪವನ್ನು ಬೆಳಗಿಸಿ, ಪವಿತ್ರ ಬೈಬಲನ್ನು ಗೌರವಿಸುವುದರೊಂದಿಗೆ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಂದೇಶವನ್ನು ನೀಡಿದರು.
ಶಿಬಿರದ ಮೊದಲ ದಿನ ಸಂಪನ್ಮೂಲ ವ್ಯಕ್ತಿಗಳಾಗಿ, ಉಡುಪಿ ಅನುಗ್ರಹದ ಧರ್ಮಾಚರಣೆ ಆಯೋಗದ ವಂದನೀಯ ಫಾ. ವಿಲ್ಸನ್ ಡಿಸೋಜಾ, ಪಡುಕೋಣೆ ಸಂತ ಅಂತೋನಿ ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾ. ಫ್ರಾನ್ಸಿಸ್ ಕರ್ನೇಲಿಯೋ, ಗಂಗೊಳ್ಳಿ ಚರ್ಚಿನ 20 ಆಯೋಗಗಳ ಸಂಚಾಲಕಿ ಶ್ರೀಮತಿ ರೆನಿಟಾ ಬಾರ್ನೆಸ್ ಹಾಗೂ ಬೈಂದೂರು ಹೋಲಿ ಕ್ರಾಸ್ ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾ. ವಿನ್ಸೆಂಟ್ ಕುವೆಲ್ಲೋ ಹಾಜರಿದ್ದು ವಿದ್ಯಾರ್ಥಿಗಳಿಗೆ,ಪ್ರಾರ್ಥನಾ ವಿಧಿ, ನಮ್ಮ ಜೀವನದಲ್ಲಿ ಮಾತೆ ಮರಿಯಳ ಪಾತ್ರ,, ಚರ್ಚಿನಲ್ಲಿ ನನ್ನ ಜವಾಬ್ದಾರಿ ಹಾಗೂ ಸಂಸ್ಕಾರಗಳ ಬಗ್ಗೆ ತಿಳುವಳಿಕೆ ನೀಡಿದರು.
ಎರಡನೇ ದಿನ, ಬಸ್ರೂರು ಸಂತ ಫಿಲಿಪ್ ನೇರಿ ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾ. ರೊಯ್ ಲೋಬೊ, MCC ಬ್ಯಾಂಕಿನ ಉದ್ಯೋಗಿಯಾದ ಎಲ್ಡ್ರಿನ್ ಡಿಸೋಜಾ, ಕುಂದಾಪುರ ಸಂತ ಜೋಸೆಫ್ ವಾಜ್ ವಲಯದ ಪ್ರಧಾನ ಗುರುಗಳು ಹಾಗೂ ಹೊಲಿ ರೋಜರಿ ದೇವಾಲಯದ ಧರ್ಮ ಗುರುಗಳಾದ ಅತೀ ವಂದನೀಯ ಫಾ. ಪೌಲ್ ರೇಗೊ, ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ಮುಖ್ಯಾಧಿಕಾರಿಯಾದ ವಂದನೀಯ ಫಾ. ಸುನಿಲ್ ವೇಗಸ್ ಸಂಪನ್ಮೂಲ ವ್ಯಕ್ತಿಗಳಾಗಿ ಹಾಜರಿದ್ದು, ಭಾನುವಾರದ ನಿರ್ಬಂಧಗಳು, ನಂಬಿಕೆ, ವೈಯಕ್ತಿಕ ಪ್ರಾರ್ಥನೆ ಹಾಗೂ ಸಂತರನ್ನು ಗೌರವಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.
ಶಿಬಿರದ ಕೊನೆಯ ದಿನದಂದು,ಬ್ರಹ್ಮಾವರ ಕಾಪುಚಿನ್ ಗುರುಗಳಾದ ವಂದನೀಯ ಫಾ. ಜೋಕಿಮ್, ಬೆಳ್ವೆ ಚರ್ಚಿನ ವಂದನೀಯ ಅನಿಲ್ ಕರ್ನೇಲಿಯೋ, ಉಡುಪಿ ಸಂಪದ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ರಿಜಿನಾಲ್ಡ್ ಪಿಂಟೊ ಹಾಗೂ ವಂದನೀಯ ಫಾ.ಜೊಸ್ವಿ ಸಿದ್ದಕಟ್ಟೆ ಹಾಜರಿದ್ದು, ಪರಿಸರ ವಿಜ್ಞಾನ ಹಾಗೂ ಚರ್ಚ್,ನನ್ನ ಕರೆ, ಪುನರುಥ್ಥಾನ, ದುಷ್ಟ ಅಸ್ತಿತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಮೂರೂ ದಿನದಲ್ಲಿ ಶಿಬಿರಾರ್ಥಿಗಳಿಗೆ, ಸ್ವಾಗತ ಕೋರಲು,ಧನ್ಯವಾದ ಸಮರ್ಪಿಸಲು ಹಾಗೂ ದಿನದ ಕಾರ್ಯಕ್ರಮ ಮತ್ತು ಚಟುವಟಿಕೆಗಳ ವರದಿಯನ್ನು ತಯಾರಿಸಿ ಮಂಡಿಸಲು ತರಭೇತಿ ನೀಡಿ, ಅವರೇ ಸ್ವತಹ ಸಂಪನ್ಮೂಲ ವ್ಯಕ್ತಿಗಳಿಗೆ ಸ್ವಾಗತ ಕೋರಿ, ಪರಿಚಯಿಸಿ , ಧನ್ಯವಾದ ನೀಡಲು ಹಾಗೂ ವರದಿ ಮಂಡಿಸಲು ಮಾರ್ಗದರ್ಶನ ನೀಡಲಾಯಿತು.
ಪ್ರತಿ ದಿನ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆ,ಗುಂಪು ಚಟುವಟಿಕೆ, ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು YCS ಹಾಗೂ ICYM ವಿದ್ಯಾರ್ಥಿಗಳು ನಡೆಸಿ ಸಹಕರಿಸಿದರು.
ಶಿಬಿರದ ಕೊನೆಯಲ್ಲಿ ಮೂರೂ ದಿನದ ಕಾರ್ಯ ಚಟುವಟಿಕೆಗಳ ಮೌಲ್ಯಮಾಪನವನ್ನು ವಂದನೀಯ ಫಾ. ಎಡ್ವಿನ್ ಡಿಸೋಜಾರವರು ನಡೆಸಿ, ಶಿಬಿರಾರ್ಥಿಗಳಿಗೆ, ಶಿಬಿರದ ಯಶಸ್ವಿಗೆ ಸಹಕರಿಸಿದ ಸರ್ವರಿಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಮೂರೂ ದಿನದ ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ, 20 ಆಯೋಗಗಳ ಸಂಚಾಲಕಿ,ಕ್ರೈಸ್ತ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು.ಕುಂದಾಪುರ ವಲಯದ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.
Kundapur St. Joseph Vaz Zone – ‘Jeevan Jyoti Camp’ endowment
The ‘Jeevan Jyoti’ camp is organized by the Udupi Diocese every year for the Catholic students studying in class 10 in each Deanery. Like every year, in the Kundapura Deanery, this year’s camp was also conducted in the church hall at St. Francis of Assisi church, Tallur like the previous year. The three-day camp was held from 10th to 12th October 2024, under the leadership of Rev. Fr. Edwin D’Souza.
On October 10th at 9.30 am, Rev. Fr. Rosario Fernandes, the parish priest of Christ the King church, Trasi lit the lamp with the campers and opened the camp by honouring the Holy Bible. He also gave his message to the students.
The resource people on the first day of the camp were Rev. Fr. Wilson D’Souza, Rev. Fr. Francis Cornelio the parish priest of St. Anthony Church- Padukone, Mrs. Renita Barnes the Convenor of 20 Commissions of the Church in Gangolli and the parish priest of Holy Cross church, Byndoor – Rev. Fr. Vincent Coelho were present. They informed the students about the ‘Liturgy, signs and symbols’, the Role of Mother Mary in my live, My Role in my Parish and Sacraments in General.
On the second day, the parish priest of St. Philip Neri church, Basrur – Rev. Fr. Roy Lobo, Mr. Aldrin D’Souza an employee of MCC Bank-Kundapur, the Dean of St. Joseph Vas Deanery-Kundapur and the parish priest of Holy Rosary Church, Kundapur – Very Rev. Fr. Paul Rego, the parish priest of St. Antony’s shrine, Kerekatte – Rev. Fr. Sunil Veigas were present as the resource people. They gave guidance to the students on Sunday Obligations, Witnessing My Faith, Personal Prayer and Honouring Saints and Images.
On the last day of the camp, the Capuchin priest from Brahmavar – Fr. Joachim D’souza, the parish priest of St. Joseph’s church, Belve – Rev. Fr. Anil Cornelio, Rev. Fr. Reginald Pinto – the director of ‘Sampada’ a socio-economic organization in Udupi and Rev. Fr. Jossi Siddakatte OCD – a member of the clergy in Infant Jesus Shrine, Koteshwar, were present.
They guided the students about Ecology And The Church, My Vocation, the Resurrection Of The Dead And Eternal Life and the Existence Of Evil.
During these three days, the campers were trained to welcome, offer thanks and prepare to present a report on the previous day’s program and activities.
Every day the YCS and ICYM students organized fun games, group activities, and other kinds of various entertainment for the students.
At the end of the camp, the evaluation of the activities of the past three days was done by Rev. Fr. Edwin D’Souza. The campers were felicitated by giving mementos to all those who contributed to the success of the camp. In these three days of program, the Vice-President of the Board of Trustees, the Secretary, 20 commission coordinators and the Catechism teachers were also presented with a memento for their cooperation towards the camp. More than 80 students from the Kundapur Deanery participated and learnt many things in the camp.