ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಚೇರಿ ಯಲ್ಲಿ ಸಾಮಾನ್ಯ ಸಭೆಯನ್ನು ಗುರುವಾರ ಅಧ್ಯಕ್ಷರಾದ ಬಿ.ಆರ್ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿ ಹಲವು ಕಾಮಗಾರಿಗಳಿಗೆ ಅನುಮೋದನೆಯನ್ನು ಪಡೆಯಲಾಯಿತು.
ವಿಶೇಷವಾಗಿ ಪಟ್ಟಣದ ೧೦ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಕೆ ಮಾಡುವುದು, ಕೊಳ್ಳೂರು ಹೊಸ ಬಡಾವಣೆಯಲ್ಲಿ ಸ್ಮಶಾನ ಅಭಿವೃದ್ಧಿ, ಪುರಸಭಾ ವ್ಯಾಪ್ತಿಯ ಪುರಸಭೆಗೆ ಸೇರಿದ ಜಾಗಗಳನ್ನು ಗುರುತಿಸಿ ಕಾಂಪೌಂಡ್ ನಿರ್ಮಾಣ, ಸಿ ಎ ನಿವೇಶನಗಳಲ್ಲಿ ಶೆಟ್ಟಲ್ ಕಾಕ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಹಾಗೂ ಪಟ್ಟಣದ ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡುವ ವಿಚಾರವಾಗಿಯೂ ಸಹ ಚರ್ಚೆ ಮಾಡಿ ಅನುಮೋದನೆಗಳನ್ನು ಪಡೆಯಲಾಯಿತು.
ಇದೇ ಸಂದರ್ಭದಲ್ಲಿ ಕೆಲವು ಕಾಮಗಾರಿಗಳ ವಿಚಾರದಲ್ಲಿಯೂ ಸಹ ಪುರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ ೯ ಮುಳಬಾಗಲು ಮುಖ್ಯರಸ್ತೆಯ ಜೆಕೆ ಡಾಬಾ ದಿಂದ ನಲ್ಲಪಲ್ಲಿ ಗ್ರಾಮದವರಿಗೆ ಡಾಂಬರೀಕರಣ ರಸ್ತೆ ಮತ್ತು ಒಂದು ಬದಿ ಚರಂಡಿ ನಿರ್ಮಾಣ ಕಾಮಗಾರಿ ವಿಚಾರ ಪ್ರಸ್ತಾವನೆ ಯಾಗುತ್ತಿದ್ದಂತೆ ಈಗಾಗಲೇ ಪ್ರಮುಖ ರಸ್ತೆ ಇದ್ದರೂ ಸಹ ಯಾಕೆ ಆ ರಸ್ತೆಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕು ಬಹಳ ವ್ಯವಸ್ಥಿತವಾದಂತ ರಸ್ತೆ ಇದೆ ಆ ಹಣವನ್ನು ಪೋಲು ಮಾಡದೆ ಬೇರೆ ಕಡೆ ಬಳಕೆ ಮಾಡಿ ಅದೇ ರೀತಿಯಾಗಿ ವಾರ್ಡ್ ನಂಬರ್ ೧೮ ಮದನಪಲ್ಲಿ ಮುಖ್ಯರಸ್ತೆಯಿಂದ ಮಿಲ್ ಗೋವಿಂದಪ್ಪ ರಸ್ತೆಯ ಮಾಜಿ ಪುರಸಭಾ ಅಧ್ಯಕ್ಷರು ಶ್ರೀನಿವಾಸಪ್ಪ ರವರ ನಿವೇಶನದ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ವಿಚಾರವಾಗಿಯೂ ಸಹ ವಿರೋಧ ವ್ಯಕ್ತಪಡಿಸಿ ತುಂಬಾ ಅತ್ಯವಶ್ಯಕತೆ ಇರುವಂತಹ ಕಡೆ ಕೆಲಸಗಳನ್ನು ಮಾಡಿಯೆಂದು ಕೆಲವು ಸದಸ್ಯರು ಸೂಚನೆ ನೀಡಿದರು.
ಪುರಸಭೆ ಮೊದಲ ಅವಧಿಗೆ ಅಧ್ಯಕ್ಷರಾಗಿದ್ದಂತಹ ಲಲಿತಾ ಶ್ರೀನಿವಾಸರವರು ರಾಜೀನಾಮೆ ನೀಡಿ ತೆರವಾದ ನಂತರ ಆಡಳಿತ ಅಧಿಕಾರಿಯನ್ನಾಗಿ ತಾಲೂಕು ದಂಡಾಧಿಕಾರಿಗಳನ್ನು ನೇಮಿಸಲಾಗಿತ್ತು ಆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗೆ ಹಲವು ವಾಹನಗಳನ್ನು ಖರೀದಿ ಮಾಡಲಾಗಿದೆ ಹಾಗೂ ಹಲವು ಕಾಮಗಾರಿಗಳನ್ನು ಮಾಡಲಾಗಿದೆ ಅದರ ಬಗ್ಗೆ ನಮಗೆ ಬಹಳಷ್ಟು ಅನುಮಾನಗಳಿದ್ದು ಲೋಕಾಯುಕ್ತಗೆ ನೀಡಿ ತನಿಖೆ ನಡೆಸಬೇಕು ಎಂದು ಸಹ ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಬಿ.ಆರ್. ಭಾಸ್ಕರ್,ಉಪಾಧ್ಯಕ್ಷರಾದ ಸುನೀತಾ, ಆರೋಗ್ಯ ನಿರೀಕ್ಷಿಕ ಕೆ.ಜಿ.ರಮೇಶ್, ವ್ಯವಸ್ಥಾಪಕ ನವೀನ್ ಚಂದ್ರ, ಕಂದಾಯ ಅಧಿಕಾರಿ ವಿ ನಾಗರಾಜ್, ಕಂದಾಯ ನಿರೀಕ್ಷಕ ಎನ್ ಶಂಕರ್, ಪರಿಸರ ಅಭಿಯಂತರರು ಲಕ್ಷ್ಮೀಶ್, ಎಫ್ ಡಿ ಎ ನಾಗೇಶ್, ಸಂತೋಷ್, ಸುರೇಶ್ ಹಾಗೂ ಎಲ್ಲಾ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.