ಕೋಲಾರ,ಅ.07: ಅಸಂಘಟಿತ ಕಾರ್ಮಿಕರ ಹಾಗೂ ಕಲಾವಿದರ ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಕರ್ನಾಟಕ ಕಲಾ ಸಂಘ, ತಿರುಮಲ ಟ್ರಸ್ಟ್ ಕೋಲಾರ, ಸಂಜೀವಿನಿ ಜಾನಪದ ಕಲಾ ಸಂಸ್ಥೆ ಐತರಾಸನಹಳ್ಳಿ ಜ್ಞಾನ ಪ್ರಚಾರ ಶೈಕ್ಷಣಿಕ ಹಾಗೂ ಕ್ರೀಡಾ ಸಂಸ್ಥೆ ವೇಮಗಲ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಿವೃತ್ತ ಶಿಕ್ಷಕ ಹಾಗೂ ಕಲಾವಿದ ಬೀರಮಾನಹಳ್ಳಿ ಡಾ.ಬಿ.ವಿ.ವೆಂಕಟಗಿರಿಯಪ್ಪರಿಗೆ ಅಭಿನಂದನೆ ಹಾಗೂ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಅಕ್ರಂಪಾಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗಡಿನಾಡು ಕೊಲಾರ ಜಿಲ್ಲೆ ಸಂಸ್ಕøತಿ ಮತ್ತು ಹೈನುಗಾರಿಕೆಯಲ್ಲಿ ಮತ್ತು ತರಕಾರಿ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಯಲ್ಲಿ ಎಲೆಮರೆಯಕಾಯಂತೆ ಸಾಂಸ್ಕøತಿಕ ಮತ್ತು ಸಮಾಜ ಸೇವೆಯಲ್ಲಿ ಉತ್ತಮ ಸಾಧನೆ ಮಾಡಿರುವ ಡಾ.ಬಿ.ವಿ.ವೆಂಕಟಗಿರಿಯಪ್ಪರನ್ನು ಗುರುತಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿರುವುದು ಸಂತಸದ ವಿಷಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಎಂ.ಚಂದ್ರಶೇಖರ್, ಬಿ.ವಿ.ವೆಂಕಟಗಿರಿಯಪ್ಪ ನನಗೆ 40 ವರ್ಷಗಳ ಮೇಲ್ಪಟ್ಟು ಪರಿಚಯ ಹಾಗೂ ನನ್ನ ಗೆಳೆಯರು. ಇವರ ನಾಟಕಗಳಲ್ಲಿ ನಾನು ಸಹ ಅಭಿನಯಿಸಿರುವೆ. ಸಾಹಿತಿ, ನಾಟಕಕಾರರಾದ ಬಿ.ವಿ.ವಿ.ಗಿರಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗಲಿ ಎಂದು ಆಶಿಸಿದರು.
ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಬಿ.ವಿ.ವಿ.ಗಿರಿ ಸದಾ ಹಸನ್ಮುಖಿಯಾಗಿ ಒಳ್ಳೆಯ ಉತ್ತಮ ಕಲಾವಿದರಾಗಿ ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಅಸಂಘಟಿತ ಕಲಾವಿದರನ್ನು ಸೇರಿಸಿ ಅವರಿಗೆ ಸಾಮಾಜಿಕ, ಐತಿಹಾಸಿಕ ನಾಟಕಗಳನ್ನು ತರಬೇತಿ ನೀಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತೇಜನ ನೀಡಿ ಪ್ರೇರೇಪಿಸಿರುತ್ತಾರೆ. ಕಲೆ ಹಾಗೂ ಸಮಾಜಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿ ನೀಡಿರುವುದು ಶ್ಲಾಘನೀಯ. ಜಿಲ್ಲೆಯ ಒಬ್ಬ ನಿಷ್ಟಾವಂತ ಪ್ರಾಮಾಣಿಕ ಕಲಾವಿದನಿಗೆ ಸಿಕ್ಕ ಗೌರವ, ಇವರ ಸೇವೆ ಜಿಲ್ಲೆಗ ಅಗತ್ಯ. ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ, ಎಸ್.ಆರ್.ಯಲ್ಲಪ್ಪ, ಮಹಮದ್ ಆಲಿ, ಕೆ.ವಿ.ಮಹೇಶ, ವಿ.ಸಂಜೀವಯ್ಯ, ಭಾರ್ಗವರಾಮ್ ಬಿ.ವಿ ಉಪಸ್ಥಿತರಿದ್ದರು.
ಲಕ್ಷ್ಮಣ್ ಭಗತ್ ಬಿ.ವಿ ಸ್ವಾಗತಿಸಿ, ಮಾಗೇರಿ ವೆಂಕಟೇಶ್ ನಿರೂಪಿಸಿ, ನಂಜುಂಡಪ್ಪ ವಂದಿಸಿದರು.
ಕೋಲಾರ ಜಿಲ್ಲೆಯ ಎಲ್ಲಾ ಸಾಂಸ್ಕøತಿಕ ಕಲಾ ತಂಡಗಳು ಹಾಗೂ ಕಲಾವಿದರು ಸಕಾಲಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಮೇಲ್ಕಂಡ ಸಂಸ್ಥೆಗಳಿಂದ ಭಾಗವಹಿಸಿದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಮಗೆ ಸಹಕಾರ ನೀಡಿದ ಅಸಂಘಟಿತ ಕಾರ್ಮಿಕ ಹಾಗೂ ಕಲಾವಿದರ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷ ಐತರಾಸನಹಳ್ಳಿ ವಿ.ಸಂಜೀವಯ್ಯ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.