

ಶ್ರೀನಿವಾಸಪುರ : ಗೌನಿಪಲ್ಲಿ ದೊಡ್ಡ ಪ್ರಮಾಣದ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಸಿ. ಈರಪ್ಪರೆಡ್ಡಿ ತಿಳಿಸಿದರು.
ತಾಲ್ಲೂಕಿನ ಗೌನಿಪಲ್ಲಿಯ ದೊಡ್ಡ ಪ್ರಮಾಣದ ವ್ಯವಸಾಯ ಸೇವ ಸಹಕಾರ ಸಂಘಕ್ಕೆ ಸಂಬಂದಿಸಿದ ಬಿ.ಕೊತ್ತಕೋಟ ರಸ್ತೆಯಲ್ಲಿರುವ 24 ವಾಣಿಜ್ಯ ಮಳಿಗೆಗಳ ಹರಾಜು ಪಕ್ರಿಯೆ ಸುಸೂತ್ರವಾಗಿ ನಡೆಯಿತು. ಹರಾಜಿನಲ್ಲಿ ಅಂಗಡಿ ಮಳಿಗೆಯನ್ನು ಹರಾಜಿಗೆ ಪಡೆದವರು ಸಂಘದ ಷರತ್ತು / ಸೂಚನೆಗಳಿಗೆ ಬದ್ದರಾಗಿ ನಡೆದುಕೊಳ್ಳತಕ್ಕದ್ದು. ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 34 ಜನ ಬಿಡ್ದಾರರು ಭಾಗವಹಿಸಿ, ಐವತ್ತು ಸಾವಿರ ಠೇವಣಿ ಕಟ್ಟಿ ಹರಾಜು ಪಕ್ರಿಯೆಯಲ್ಲಿ ಭಾಗವಹಿಸಿದ್ದರು. ವಾಣಿಜ್ಯ ಮಳಿಗೆಯ 7 ನಂಬರ್ನ ಮಳಿಗೆಯನ್ನ ರಘುನಂದನ್ರವರು 3ಲಕ್ಷ ರೂಗೆ ಅತಿ ಹೆಚ್ಚು ಹರಾಜುನ್ನು ಕೂಗಿ 3 ವರ್ಷಕ್ಕೆ ಮಳಿಗೆಯನ್ನ ತಮ್ಮದಾಗಿಸಿಕೊಂಡರು.
24 ಅಂಗಡಿಗಳ ನೆಲ ಮಹಡಿ ಪ್ರತಿ ತಿಂಗಳು ಆರುಸಾವಿರ, 1 ನೇ ಮಹಡಿ ನಾಲ್ಕು ಸಾವಿರ ಬಾಡಿಗೆ ನಿಗದಿಪಡಿಸಲಾಗಿದ್ದು, ಪ್ರತಿ ತಿಂಗಳು ವಿದ್ಯುತ್ ಶುಲ್ಕವನ್ನ ಸಂಬಂದಪಟ್ಟ ಅಂಗಡಿ ಮಾಲೀಕರೆ ಪಾವತಿಸತಕ್ಕದ್ದು ಎಂದು ತಿಳಿಸಿದರು. ಒಟ್ಟು 24 ವಾಣಿಜ್ಯ ಮಳಿಗೆಗೆಳ ಪೈಕಿ 12 ಮಳಿಗೆಗೆಳು ಬಿಡ್ದಾರರು ಹರಾಜಿನಲ್ಲಿ ಪಡೆದುಕೊಂಡರು ಉಳಿದ 12 ಅಂಗಡಿಗಳ ಬಿಡ್ದಾರರು ಹರಾಜಿನಲ್ಲಿ ಕೂಗದೆ ಹಾಗಯೇ ಉಳಿದಿದೆ ಎಂದು ಮಾಹಿತಿ ನೀಡಿದರು.
ಈ ಸಮಯದಲ್ಲಿ ನೋಡಲ್ ಅಧಿಕಾರಿ ಅಬೀದ್ಹುಸೇನ್, ಗೌನಿಪಲ್ಲಿ ಎಲ್ಎಸ್ಸಿಎಸ್ನ ಸಂಘದ ಅಧ್ಯಕ್ಷ ಶಂಕರ್ಪ್ರಸಾದ್, ನಿರ್ದೇಶಕರಾದ ಜಿ.ಆರ್.ಸತ್ಯನಾರಾಯಣ, ಕೋಡಿಪಲ್ಲಿ ಕೆ.ವಿ.ಸುಬ್ಬಿರೆಡ್ಡಿ, ಕೆ.ಆರ್.ಮೋಹನ್ಕುಮಾರ್, ಹೆಚ್.ರಹಮತ್ತುಲ್ಲಾ, ರತ್ನಪ್ಪ, ಪೂಜಾರಿ ನಾರಾಯಣಸ್ವಾಮಿ, ಗ್ರಾ.ಪಂ. ಸದಸ್ಯ ಬಕ್ಷುಸಾಬ್, ಶ್ರೀನಿವಾಸಪು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್, ಹಾಗೂ ಬಿಡ್ದಾರರು ಹಾಜರಿದ್ದರು.