ಶ್ರೀನಿವಾಸಪುರ : ರೈತರು ಬ್ಯಾಂಕಿನಿಂದ ಪಡೆದುಕೊಂಡ ಕೃಷಿ ಸಾಲವನ್ನು ಸಕಾಲಕ್ಕೆ ಪಾವತಿಸಿಸಿದರೆ ಇನ್ನೂ ಹೆಚ್ಚಿನ ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತದ ಅಧ್ಯಕ್ಷರಾದ ದಿಂಬಾಲ್ ಅಶೋಕ್ ತಿಳಿಸಿದರು.
ಅವರು ಬ್ಯಾಂಕಿನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಾ, ಈ ಬ್ಯಾಂಕಿನ ಉದ್ದೇಶವೇ ರೈತರ ಕೃಷಿ ಅಭಿವೃದ್ದಿಗೆ ಸಾಲ ನೀಡುವುದು. ವಾಣಿಜ್ಯ ಬ್ಯಾಂಕುಗಳು ರೈತರಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಆದರೆ ನಮ್ಮ ಬ್ಯಾಂಕು ರೈತರ ಅಭಿವೃದ್ದಿಯ ದೃಷ್ಠಿಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದರಿಂದ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ವ್ಯವಸ್ಥಾಪಕಿ ಶೋಭ ಮಾತನಾಡಿ 2024-25 ನೇ ವಾರ್ಷಿಕ ವರಧಿಯನ್ನು ಸಲ್ಲಿಸಿದರು. ಈಗಾಗಲೇ ಬ್ಯಾಂಕ್ವತಿಯಿಂದ 14 ಲಕ್ಷ ಸಾಲವನ್ನು ನೀಡಲಾಗಿದೆ. 25 ಸಾವಿರ ರೂ ಪಾವತಿಯಾಗಿದೆ. ಇನ್ನು 6ಲಕ್ಷ 76 ಸಾವಿರ ಹಣ ಸಾಲಗಾರರಿಂದ ಬ್ಯಾಂಕಿಗೆ ಪಾವತಿಯಾಗಬೇಕಾಗಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಮಾಜಿ ವ್ಯವಸ್ಥಾಪಕ ಸಿ.ಎನ್.ಕೃಷ್ಣನ್ ಜಮಾಖರ್ಚುಗಳ ವರದಿಯನ್ನು ಮಂಡಿಸಿ 2024-25ನೇ ಸಾಲಿಗೆ 6.55.5000ರೂಗಳ ಬಜೆಟಿಗೆ ಅನುಮೋದನೆ ಪಡೆದುಕೊಂಡು 16 ಲಕ್ಷ ರೂಗಳ ಬ್ಯಾಂಕಿನ ಕಟ್ಟಡ ಕಾಮಗಾರಿಯ ಬಗ್ಗೆ ವಿವರಿಸಿದರು.
ಈ ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಿ.ಸುಬ್ಬಾರೆಡ್ಡಿ, ನಿರ್ದೇಶಕರಾದ ದಳಸನೂರು ಗೋಪಾಲಕೃಷ್ಣ, ಎಮ್.ಎನ್.ರಾಮಚಂದ್ರಾರೆಡ್ಡಿ, ಶ್ರೀಕಂಠರೆಡ್ಡಿ, ಕೆ.ನಾರಾಯಣಸ್ವಾಮಿ, ದೋಬಿ ಪಾಪನ್ನ, ಟಿ.ವಿ.ಗಂಗಿರೆಡ್ಡಿ, ಆವಲಪ್ಪ, ವೆಂಕಟಲಕ್ಷ್ಮಮ್ಮ, ಸುರೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಲ್.ಪ್ರಕಾಶ್, ತಾಪಂ ಮಾಜಿ ಸದಸ್ಯ ಕೆ.ಕೆ.ಮಂಜುನಾಥ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವೆಂಕಟರೆಡ್ಡಿ, ಲೆಕ್ಕಾಧಿಕಾರಿ ವಿ.ಶ್ರೀನಿವಾಸನ್, ಕ್ಷೇತ್ರಾಧಿಕಾರಿ ಎಸ್.ಎನ್.ಮಂಜುನಾಥಾಚಾರಿ, ಸಿಬ್ಬಂದಿ ಕೆ.ಬಿ.ನರೇಶ್, ಆರ್.ವಿ.ರವೀಂದ್ರ ಹಾಜರಿದ್ದರು.