ಶ್ರೀನಿವಾಸಪುರ: ದೇಶಕ್ಕೆ ಬೆನ್ನೆಲುಬಾದ ಆರೋಗ್ಯವಂತ ಯುವಕರೇ ದೇಶದ ಆಸ್ತಿ , ದೇಶವು ಪ್ರಗತಿಯತ್ತಾ ಸಾಗಲು ಯುವ ಜನತೆ ಸತ್ಪ್ರಜೆಗಳಾದರೇ ಮಾತ್ರ ಸಾಧ್ಯ . ಆದ್ದರಿಂದ ಆರೋಗ್ಯವಂತ ಸಮಾಜಕ್ಕೆ ಯುವ ಸಮುದಾಯ ಇರಲೇಬೇಕು ಎಂದು ಇಒ ಎ.ಎನ್.ರವಿ ಅಭಿಪ್ರಾಯ ಪಟ್ಟರು.
ಪಟ್ಟಣದ ಅಮಾನಿಕೆರೆ ಕ್ರೀಡಾಂಗಣದಲ್ಲಿ ಬುಧವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಾಗು ತಾಲೂಕು ಆಡಳಿತ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಜನತೆಯಲ್ಲಿ ಮಾನಸಿಕ ಹಾಗು ದೈಹಿಕವಾಗಿ ಉತ್ಸಾಹ ತುಂಬಿದರೆ , ಭವಿಷ್ಯದಲ್ಲಿ ಆರೋಗ್ಯವಂತ ಸಮಾಜ ಕಟ್ಟಲು ಸ್ಪೂರ್ತಿ ತುಂಬಲಿದೆ. ಪ್ರಸ್ತುತ ಯುವ ಜನತೆಯ ಅದ್ಯತೆ ಮೊಬೈಲ್ , ಟಿವಿ, ಹಾಗೂ ಮಾದಕ ವ್ಯಸನಿಗಳಾಗುತ್ತಿದ್ದು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಕಳೆದುಕೊಳ್ಳುತ್ತಿದ್ದು , ದೇಶದ ಅಭಿವೃದ್ದಿಗೆ ಯುವ ಜನತೆಯ ಪಾಳುದಾರಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತ ಕಂಡುಬರುತ್ತಿದೆ ಎಂದು ಅಂತಕ ವ್ಯಕ್ತಪಡಿಸಿದರು.
ಬಿಇಒ ಕಚೇರಿ ವ್ಯವಸ್ಥಾಪಕ ಮಂಜುನಾಥ್, ಟಿಪಿಒ ವೆಂಕಟಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಣ್ಣ, ನಿರ್ದೇಶಕ ರಘುನಾಥರೆಡ್ಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಶಿವಬಸಪ್ಪ, ಹಿಂದುಳಿದ ವರ್ಗಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ವೇಣುಗೋಪಾಲ್, ಶಿಕ್ಷಕ ಕಿಟ್ಟಣ್ಣ, ಹಿರಿಯ ದೈಹಿಕ ಶಿಕ್ಷಕ ಕೃಷ್ಣಯ್ಯ, ಉಪನ್ಯಾಸಕರಾದ ಜಿ.ಕೆ.ನಾರಾಯಣಸ್ವಾಮಿ, ರಾಯಲ್ಪಾಡು ಪದವಿ ಪೂರ್ವ ಕಾಲೇಜಿನ ಗಿರೀಶ್, ಹಾಗು ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.