ಶ್ರೀನಿವಾಸಪುರ : ತಾಲೂಕಿನ ಆರಿಕುಂಟೆ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಬುಧವಾರ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನವಾಣೆಯಲ್ಲಿ ಕಂಬಾಲಪಲ್ಲಿ ಮುನಿರತ್ನಮ್ಮರಾಮಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮಪಂಚಾಯಿತಿಗೆ ಸೇರಿದಂತೆ ಒಟ್ಟು 19 ಸದಸ್ಯರಿದ್ದು, ಅದರಲ್ಲಿ ಜೆಡಿಎಸ್ ಬೆಂಬಲಿತ 14, ಕಾಂಗ್ರೆಸ್ ಬೆಂಬಲಿತ 05 ಸದ್ಯರಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ವೆಂಕಟಲಕ್ಷಮ್ಮ ರವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿದ ಹಿನ್ನೆಲೆಯಲ್ಲಿ ಬುಧವಾರ ನಡೆದ ಚುನವಾಣೆಯಲ್ಲಿ ಕುಂಬಾಲಪಲ್ಲಿ ಮುನಿರತ್ನಮ್ಮರಾಮಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ರವಿಚಂದ್ರ ಮಾಹಿತಿ ನೀಡದರು.
ಈ ಸಂದರ್ಭದಲ್ಲಿ ಪಿಡಿಒ ಮಂಗಳಾಂಬ, ಲೆಕ್ಕಪರಿಶೋದಕ ಶ್ರೀನಿವಾಸ್ ಸದಸ್ಯರಾದ ನಾಗೇದನಹಳ್ಳಿ ಚೌಡರೆಡ್ಡಿ, ಡಿಎಸ್ಆರ್ ಶ್ರೀನಾಥರೆಡ್ಡಿ, ಮುನಿರಾಜು, ಬಿ.ವಿ.ವೆಂಕಟರೆಡ್ಡಿ, ಅಶ್ವನಿ, ಮುನಿವೆಂಕಟಮ್ಮ, ಸತೀಶ್, ವೆಂಕಲಕ್ಷ್ಮಮ್ಮ, ಸೈಯದ್ಶರೀಫ್, ಅಮ್ರರಾನ್ತಾಜ್, ಮುನಿರೆಡ್ಡಿ, ಹರೀಶ್, ಸರಸ್ವತಮ್ಮ, ಮುಖಂಡರಾದ ಟಿಪಿಎಸ್ ಲಕ್ಷ್ಮಣರೆಡ್ಡಿ, ನೀಲಟೂರು ಚಂದ್ರಶೇಖರ ರೆಡ್ಡಿ, ಆನಂದ್, ಆರಿಕುಂಟೆ ಯಶ್ವಂತರೆಡ್ಡಿ, ಕಂಬಾಲಪಲ್ಲಿ ಅರ್.ಕೆ.ಸೀನ, ರವಿ, ನರಸಿಂಹರೆಡ್ಡಿ, ಬೈರೆಡ್ಡಿ, ಗಜೇಂದ್ರ ಇದ್ದರು.