ಕುಂದಾಪುರಃ ಕುಂದಾಪುರ ಎಂ ಐ ಟಿ ಯಲ್ಲಿ 17ನೇ ಬ್ಯಾಚ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೇ ಸೆಪ್ಟೆಂಬರ್ 9 ರಂದು ಪದವಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಮಿರಾಪ್ರ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಹಾರ್ಡ್ವೇರ್ ಇಂಜಿನಿಯರಿಂಗ್ ಉಪಾಧ್ಯಕ್ಷರಾದ ಶ್ರೀ ವಿನೋದ್ ಜಾನ್ ಮುಖ್ಯ ಅತಿಥಿಯಾಗಿದ್ದರು. ಶ್ರೀ ವಿನೋದ್ ಜಾನ್ ಅವರು ತಮ್ಮ ಪದವಿ ಪ್ರಧಾನ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಗುರಿಗಳನ್ನು ಹೊಂದಲು ಸಲಹೆ ನೀಡಿದರು ಮತ್ತು ಪ್ರಾಮಾಣಿಕತೆ, ವಿನಮ್ರತೆ ಮತ್ತು ಕಠಿಣ ಪರಿಶ್ರಮವು ಯಶಸ್ಸಿಗೆ ಪ್ರಮುಖವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ನಿಮ್ಮ ಭವಿಷ್ಯದ ಸಾಧನೆಗಳು ನಿಮ್ಮ ಜೀವನದಲ್ಲಿ ನೀವು ಮಾಡುವ ಆಯ್ಕೆಗಳ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ ಒರ್ಡ್ರಿಯೋ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸುಮಂತ್ ಶೆಟ್ಟಿ ಮಾತನಾಡಿ, ಪದವೀಧರರು ತಮ್ಮ ಗುರಿಗಳನ್ನು ತಲುಪಲು ಇನ್ನೂ ಕೆಲವು ವರ್ಷಗಳವರೆಗೆ ಕಲಿಯಬೇಕು ಎಂದು ಸಲಹೆ ನೀಡಿದರು. ತಮ್ಮ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಎಂ ಐ ಟಿ ಕುಂದಾಪುರದ ವಿದ್ಯಾರ್ಥಿಗಳ ಕಾರ್ಯವೈಖರಿಯನ್ನ ಹೊಗಳಿದರು. ವೇದಿಕೆಯಲ್ಲಿರುವ ಗೌರವಾನ್ವಿತರು ವಿದ್ಯಾರ್ಥಿ ಗಳಿಗೆ ಪದವಿ ಪ್ರಮಾಣ ಪತ್ರ ಹಾಗೂ ವಿವಿಧ ವಿಭಾಗಳಲ್ಲಿ ಉನ್ನತ ಅಂಕ ಪಡೆದವರಿಗೆ ಪದಕಗಳನ್ನು ವಿತರಿಸಿದರು. ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಅವರು ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶ್ರಮವಹಿಸಿ ದುಡಿದು ತಮ್ಮ ಪಾಲಕರಿಗೆ, ಶಿಕ್ಷಕರಿಗೆ ಹಾಗೂ ವಿದ್ಯಾಸಂಸ್ಥೆಗೆ ಕೀರ್ತಿ ತರುವಂತೆ ತಿಳಿಸಿದರು. ದೂರದೃಷ್ಟಿಯುಳ್ಳ, ಸ್ಥಾಪಕ ಅಧ್ಯಕ್ಷ, ದಿವಂಗತ ಶ್ರೀ ಐ ಎಂ ಜಯರಾಮ ಶೆಟ್ಟಿ ಮತ್ತು ಪ್ರಸ್ತುತ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡಲು ಅದ್ಭುತ ಅವಕಾಶ ಒದಗಿಸಿದ್ದಕ್ಕೆ ಶ್ಲಾಘಿಸಿದರು. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲದೆ ಹೊರ ರಾಜ್ಯಗಳ ವಿದ್ಯಾರ್ಥಿಗಳು ಓದುತ್ತಿದ್ದಾರೆಂದು ತಿಳಿಸಿದರು. ಎಂಐಟಿಕೆ ಯ ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ ಅವರು ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಐಎಂಜೆ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಕಾರ್ಯಕ್ರಮ ಸಂಯೋಜಕರಾದ ಪ್ಲೇಸ್ಮೆಂಟ್ ಡೀನ್ ಪ್ರೊಫೆಸರ್ ಅಮೃತಮಾಲ ಎಲ್ಲಾ ವಿಭಾಗ ಮುಖ್ಯಸ್ಥರು, ಸಿಬ್ಬಂದಿಗಳು, ಪದವೀಧರರು ಮತ್ತು ಅವರ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರೊ. ಫರಾನಾ ಸಮಾರಂಭ ನಡೆಸಿಕೊಟ್ಟರು. ಪ್ರಾಧ್ಯಾಪಕಿ ಶ್ರೀನಿಧಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕಿ ತಿಲಕಲಕ್ಷ್ಮಿ ಸ್ವಾಗತಿಸಿ, ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
MIT Kundapura 17th Graduation Day
MIT Kundapura Conducted graduation Ceremony for the 17th Batch of Engineering students on 9th September 2024. The programme was inaugurated by lighting the lamp. Mr. Vinod John, Vice President Hardware Engineering, Mirafra Technology Pvt.Ltd, was the chief guest. Mr. Vinod John in his Graduation Day Address advised the students to have smart goals and he opined that being Honest, humble and hardworking is the key for the success. He told the students, your future accomplishments depend only on choices you make in the course of your life. Speaking on the occasion,Guest of honour, Mr. Sumanth Shetty, Founder and CEO of Odrio, advised the Graduates to keep learning a few more years to reach their goals. He whole heartedly appreciated the commitment and hardwork of MITK students employed in his company. Dignitaries distributed the graduation certificates to the students and medals to the academic toppers in various branches. Principal, Dr. Abdul Kareem congratulated the students for obtaining the degree and told them to work hard and bring laurels to their parents, teachers and their Alma matter. He also lauded the efforts done by the visionary, Founder, Chairman, Late Sri I M Jayaram Shetty and the present Chairman Sri Siddhartha J Shetty for providing wonderful opportunity to study quality higher education to the students of rural area who are from a very humble background. He also said that students from all the districts of Karnataka and students of other states are also pursuing their education at MITK. Graduates administered the oath by the Vice Principal of MITK, Prof. Melwin D’Souza. Director, Brand Building, IMJ Institutions, Dr. Ramakrishna Hegde, Convener of the Programme and Dean Placement, Professor Amruthamala, all the HOD’s, Staff members, Graduates and their parents were present on the occasion. Professor Farana was the Master of Ceremony. Professor Shrinidhi N Introduced the Guests. Professor Tilakalaxmi welcomed and proposed the vote of thanks. The programme ended with the National Anthem.