ಕುಂದಾಪುರ, ಸೆ.9: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ, ಸಂತ ಜೋಸೆಫ್ ಪ್ರೌಢಶಾಲೆ ಇವರ ಆಶ್ರಯದಲ್ಲಿ ಕುಂದಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ನೆಡೆಯಿತು.
ಕಾರ್ಯಕ್ರಮವನ್ನು ಶಾಲೆಯ ಸಂಚಾಲಕರಾದ ಸಿಸ್ಟರ್ ಸುಪ್ರಿಯ, ಅಥಿತಿಗಳೊಂದಿಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ “ಮಕ್ಕಳು ಕಷ್ಟ ಪಟ್ಟು ಮುಂದೆ ಬರಬೇಕು, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳಿಗೆ ಹಲವು ರೀತಿಯಲ್ಲಿ ಬರುತ್ತಾ ಇರುತ್ತವೆ, ಅವುಗಳನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು, ಇಂದಿನ ಮಕ್ಕಳಾದ ನೀವು ಮುಂದೆ ನಮ್ಮ ದೇಶದ ನಾಯಕರು, ನೀವು ಉತ್ತಮ ಗುಣಗಳಿಂದ ನಾಯಕತ್ವವನ್ನು ಗುಣಗಳನ್ನು ಬೆಳೆಸಿಕೊಳ್ಳ ಕೊಳ್ಳಬೇಕೆಂದು’ ಎಂದು ಸಂದೇಶ ನೀಡಿದರು.
ಕುಂದಾಪುರ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ಕುಮಾರ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆರಂಭವಾಗಿ 22 ವರ್ಷಾಗಳಾಗಳಾಗಿವೆ, ವರ್ಷದಿಂದ ವರ್ಷಕ್ಕೆ ಅತ್ಯುತ್ತಮಗೊಳ್ಳುತ್ತಾ ಬಂದಿದೆ’ ಇದಕ್ಕೆ ಸಂತ ಜೋಸೆಫ್ ವಿಧ್ಯಾ ಸಂಸ್ಥೆ ಹಲವು ರೀತಿಯಿಂದ ಸಹಕಾರ ನೀಡುತ್ತಾ ಬಂದಿದೆ’ ಎಂದು ತಿಳಿಸಿದರು. ಕುಂದಾಪುರ ತಾಲೂಕು ಅನುದಾನಿತ ಪ್ರೌಢಶಾಲಾ ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಶುಭ ನುಡಿಗಳನ್ನಾಡಿದರು. ಕುಂದಾಪುರ ಚರ್ಚ್ರಸ್ತೆ ವಾರ್ಡ್ನ ಪುರಸಭಾ ಸದಸ್ಯೆ ಶ್ವೇತ ಸಂತೋಷ ಕುಂದಾಪುರ ತಾಲೂಕು ಅನುದಾನಿತ ಪ್ರೌಢಶಾಲಾ ಸಂಘದ ಅಧ್ಯಕ್ಷರು ಪ್ರದೀಪ್ ಶೆಟ್ಟಿ ಇನ್ನಿತರರು ಮಾತನಾಡಿದರು.
ಸಮೂಹ ಸಂಪನ್ಮೂಲ ಸಮನ್ವಯ ಅಧಿಕಾರಿ ಅಶೋಕ್ ನಾಯ್ಕ್ ಶಿಕ್ಷಣ ಸಂಯೋಜಕರು, ಪ್ರತಿಭಾ ಕಾರಂಜಿಯ ನೋಡಲ್ ಅಧಿಕಾರಿ ಶೇಖರ್ ಪೂಜಾರಿ, ಶಿಕ್ಷಣ ಸಂಯೋಜಕರಾದ ರಾಜೇಶ್ ಖಾರ್ವಿ, ಕುಂದಾಪುರ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಉಮ್ಮೆ ಸಲ್ಮಾ., ರೋಟರಿ ರಿವರ್ಸೈಡ್ನ ಕಾರ್ಯದರ್ಶಿ ರೋನಾಲ್ಡ್ ಡಿ’ಮೆಲ್ಲೋ, ಉಡುಪಿ ಜಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಕಿರಣ್ ಹೆಗ್ಡೆ, ಕುಂದಾಪುರ ತಾಲೂಕು ದೈಹಿಕ ಶಿಕ್ಷಣ. ಪರಿವೀಕ್ಷಣಾ ಅಧಿಕಾರಿ ಸತ್ಯನಾರಾಯಣ ಹೆಚ್, ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಭಗಿನಿ ಪ್ರೇಮಿಕ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಗ್ರೇಸಿ ಡಿ’ಸೋಜ.ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲೆ, ಸಂಗೀತ, ಹಾಡು, ನ್ರತ್ಯ ಹೀಗೆ ಹಲವಾರು ವಿಧದ ಸ್ಪರ್ಧೆಗಳಿಂದ ಕೂಡಿದ ಈ ಪ್ರತಿಭಾ ಕಾರಂಜಿಯ ಕಾರ್ಯಕ್ರಮದಲ್ಲಿ, ಉಸ್ತುವಾರಿ ಅಧಿಕಾರಿಗಳಿಗೆ, ತೀರ್ಪುದಾರಾಗಿ ಆಗಮಿಸಿದ ಶಿಕ್ಷಕರನ್ನು ಗೌರವಿಸಲಾಯಿತು.
ಸಂತ ಜೋಸೆಫ್ ಪ್ರೌಢಶಾಲೆಯ ಮುಖ್ಯಸ್ಥೆ ಸಿಸ್ಟರ್ ಐವಿ ಸ್ವಾಗತಿಸಿದರು, ಶಿಕ್ಷಕಿ ಸರಸ್ವತಿ ವಂದಿಸಿದರು, ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ ಕಾರ್ಯಕ್ರಮ ನಿರೂಪಿಸಿದರು.