

ಶ್ರೀನಿವಾಸಪುರ : ಪರಿಸರವನ್ನು ಉಳಿಸಿಲು ಕೇವಲ ಸರ್ಕಾರ, ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸದರೆ ಸಾಲದು , ಇವುಗಳ ಜೊತೆಗೆ ನಾಗರೀಕರು ಕೈಜೋಡಿಸಬೇಕಾಗಿದೆ ಎಂದರು. ಸ್ವಚ್ಚತೆ, ನೈರ್ಮಲ್ಯತೆ , ಆರೋಗ್ಯವನ್ನು ಯಾವರೀತಿಯಾಗಿ ಕಾಪಡಿಕೊಳ್ಳುವುದರ ಬಗ್ಗೆ ನಾಗರೀಕರಿಗೆ ತಿಳಿಸಿಕೊಡಬೇಕು ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ತಿಳಿಸಿದರು.
ಪಟ್ಟಣದ ಪುರಸಭೆ ಹಾಗು ವಿವಿಧ ಸರ್ಕಾರಿ ಶಾಲೆಗಳ ಸಹಯೋಗದಲ್ಲಿ ಬುಧವಾರ ಸ್ವಚ್ಚತ್ತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಿನ ವಿದ್ಯಾರ್ಥಿಗಳು ಮುಂದೊಂದು ದಿನ ಜಗತ್ತಿನ ಸತ್ಪ್ರಜೆಗಳು ಆಗುತ್ತಾರೆ ವಿದ್ಯಾರ್ಥಿಗಳು ಪರಿಸರವನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಪ್ರಾರಂಭದ ಹಂತದಲ್ಲೇ ಪರಿಸರ ಕಾಳಜಿ ವಹಿಸಬೇಕಾಗಿದೆ. ವಿದ್ಯಾರ್ಥಿಗಳು ಮರಗಳನ್ನು ಕಡಿಯುವ ಬದಲು ಗಿಡಮರಗಳನ್ನು ನೆಟ್ಟರೆ, ನಾವು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಒಂದು ಗಿಡ ನಾಶವಾದಲ್ಲಿನ ಜಾಗದ ಅನುಕೂಲ ನೋಡಿಕೊಂಡು ನಾಲ್ಕು ಗಿಡ ನೆಡಬೇಕು. ಅವು ಹತ್ತುವರ್ಷವಾದಾಗ ನಮಗೆ ನಲವತ್ತು ವರ್ಷಗಳಲ್ಲಿ ಆಗುವ ಬೆಳವಣಿಗೆಯ ಅನುಕೂಲ ಪಡೆಯಬಹುದು ಎಂದರು.
ಘನ ಸರ್ಕಾರದ ಮಾರ್ಗಸೂಚಿಗಳನ್ವಯ ಶ್ರೀನಿವಾಸಪುರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ನಮಸ್ತೆ ಶ್ರೀನಿವಾಸಪುರ ಪ್ಲಾಸ್ಟಿಕ್ ತ್ಯಜಿಸಿ ಎಂಬ ಘೋಷವಾಕ್ಯದೊಂದಿಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನ ಪಟ್ಟಣದ ಚಿಂತಾಮಣಿ ವೃತ್ತದಿಂದ ಪುರಸಭಾ ಕಛೇರಿವರೆಗೆ ಸ್ವಚ್ಚತ್ತಾ ಅಭಿಯಾನ ಜಾಥಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಈ ಜಾಥ ಕಾರ್ಯಕ್ರಮದಲ್ಲಿ ತ್ಯಾಗರಾಜ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆ, ಉರ್ದುಬಾಲಕರ, ಬಾಲಕೀಯರ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗುಂಡಿದ್ದರು.
ಪುರಸಭೆ ಸದಸ್ಯ ಸಂಜಯ್ಸಿಂಗ್, ಆರೋಗ್ಯ ಅಧಿಕಾರಿ ಕೆ.ಜೆ.ರಮೇಶ್, ಪರಿಸರ ಅಭಿಯಂತರ ಕೆ.ಎಸ್.ಲಕ್ಷ್ಮೀಶ್, ಸಿಬ್ಬಂದಿಗಳಾದ ನಾಗೇಶ್, ಸುರೇಶ್, ಶಿವಪ್ರಸಾದ್, ಗೌತಮ್, ಇಸಿಒ ಅಹಮ್ಮದ್ಸಾದಿಕ್, ಬಿಐಆರ್ಟಿಐ ಜಿ.ವಿ.ಚಂದ್ರಪ್ಪ, ಸಿಆರ್ಪಿಗಳಾದ ರಾಧಕೃಷ್ಣ, ಲಾಜಿಮಾ ಬೇಗಂ, ಮುಖ್ಯ ಶಿಕ್ಷಕಿ ಶಕೀಲಾಬೀ, ಶಿಕ್ಷಕರಾದ ಎನ್.ವೀಣಾ ಇದ್ದರು.