ಶ್ರೀನಿವಾಸಪುರ : ರೈತರು ಬೆಳೆದ ಅನ್ನ ತಿಂದು ರೈತರಿಗೆ ದ್ರೋಹ ಮಾಡುವ ಅಧಿಕಾರಿಗಳು, ಸಚಿವರು ಕಂಡಲ್ಲಿ ರಾಜ್ಯದಾದ್ಯಂತ ತರಕಾರಿಗಳಿಂದ ಹೊಡೆಯುವ.ಚಳುವಳಿ ಮಾಡುವ ಮೂಲಕ ರೈತರ ಆಕ್ರೋಶ ವ್ಯಕ್ತಪಡಿಸಬೇಕೆಂದು ರಾಜ್ಯ ಮುಖಂಡ ಬಂಗಾವದಿ ನಾಗರಾಜ ಸಲಹೆ ನೀಡಿದರು.
ತಾಲೂಕಿನ ಬಳಗೆರೆ ರಂಗೇಗೌಡರ ಟಮೋಟೋ ತೋಟಕ್ಕೆ ಗುರುವಾರ ರೈತ ಸಂಘ ವತಿಯಿಂದ ತೋಟಕ್ಕೆ ಬೇಟಿ ನೀಡಿ ಪಸಲು ಪರಿಶೀಲಿಸಿ ಮಾತನಾಡಿದರು.
ರೈತರಾದ ಬಳಗೆರೆ ರಂಗೇಗೌಡ ಮಾತನಾಡಿ ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ಸ್ಥಳೀಯ ವ್ಯಕ್ತಿಯಾದ ಅರಿಕೆರೆ ರಾಮನಾಥ್ ರವರ ಮಾತು ಕೇಳಿ 11 ಎಕರೆ ಜಮೀನಿನಲ್ಲಿ 22 ಲಕ್ಷ ಬಂಡವಾಳ ಹಾಕಿ ಇಷ್ಯುವುಡ್ – 101 ಹೊಸ ತಳಿಯನ್ನು ನಾಟಿ ಮಾಡಿ 90 ದಿನ ಕಳೆದರೂ ತೋಟದಲ್ಲಿ ಟೊಮಾಟೋ ಗಾತ್ರ ಗೋಲಿ ಆಕಾರದಲ್ಲಿ ಫಸಲು ಬಿಟ್ಟಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ ನಮ್ಮ ಟೊಮಾಟೋವನ್ನು ಕೇಳುವವರು ಇಲ್ಲದಂತಾಗಿದ್ದಾರೆಂದು ನಕಲಿ ಭಿತ್ತನೆ ಬೀಜಗಳನ್ನು ನಿಯಂತ್ರಣ ಮಾಡದ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ 6 ವರ್ಷಗಳಿಂದ ಜಿಲ್ಲೆಯ ಟೊಮಾಟೋ ಬೆಳೆಗಾರರ ಜೀವ ಹಿಂಡುತ್ತಿರುವ ನಕಲಿ ಭಿತ್ತನೆ ಬೀಜ, ಕೀಟನಾಶಕ ನಿಯಂತ್ರಣವಿಲ್ಲದೆ ಲಕ್ಷಾಂತರ ರೂಪಾಯಿ ನೀಡಿ ಖರೀದಿ ಮಾಡುವ ಔಷಧಿಗಳಿಂದ ಟೊಮೋಟೋಗೆ ಬಾದಿಸುತ್ತಿರುವ ರೋಗಗಳು ನಿಯಂತ್ರಣಕ್ಕೆ ಬಾರದೆ ಹಾಕಿದ ಬಂಡವಾಳ ಕೈಗೆ ಸಿಗದೇ ಸಂಕಷ್ಟದಲ್ಲಿರುವ ರೈತರಿಗೆ ವರದಾನವಾಗಬೇಕಾದ ತೋಟಗಾರಿಕೆ ಕೃಷಿ ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ರೈತರು ದೂರು ನೀಡಿದರೆ ನೆಪ ಮಾತ್ರಕ್ಕೆ ತೋಟಕ್ಕೆ ಭೇಟಿ ನೀಡಿ ಬಾಗಲುಕೋಟೆಯ ವಿಜ್ಞಾನಿಗಳನ್ನು ಕರೆಸಿ ಪರಿಶೀಲನೆ ಮಾಡಿ ವರದಿ ಬಂದ ನಂತರ ಕ್ರಮಕೈಗೊಳ್ಳುವ ಬೇಜವಾಬ್ದಾರಿ ಮಾತುಗಳಿಂದ ರೈತರು ರಚ್ಚಿಗೇಳುವ ಪರಿಸ್ಥಿತಿ ಇದ್ದರೂ ಸಮಸ್ಯೆಯನ್ನು ಗಂಭಿರವಾಗಿ ಸರ್ಕಾರ ಪರಿಗಣಿಸುತ್ತಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ ಇನ್ನು ಜನಪ್ರತಿನಿಧಿಗಳನ್ನು ಕೇಳಿದರೆ ಉತ್ತರವಿಲ್ಲ. ಒಟ್ಟಾರೆಯಾಗಿ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷೆ ಮಾಡುತ್ತಿರುವ ಜನಪ್ರತಿನಿಧಿಗಳ ಹಾಗೂ ನಕಲಿ ಭಿತ್ತನೆ ಟೊಮಾಟೋ ಬೀಜ ವಿತರಣೆ ಮಾಡಿರುವ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದೊಮ್ಮೆ ದಾಖಲು ಮಾಡಿ ರೈತರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನಷ್ಟವಾಗಿರುವ ರೈತರ ಪ್ರತಿ ಎಕರೆ ಟೊಮೊಟೋಗೆ ಮೂರು ಲಕ್ಷ ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸಿ ಆ-27 ರ ಮಂಗಳವಾರ ಜಾನುವಾರುಗಳು ಹಾಗೂ ನಷ್ಟ ಬೆಳೆ ಸಮೇತ ರಾಜ್ಯ ಹೆದ್ದಾರಿ ಕೋಲಾರ, ಶ್ರೀನಿವಾಸಪುರ ಮುಖ್ಯ ರಸ್ತೆ, ರೋಜಾರನಹಳ್ಳಿ ಗೇಟ್ ಬಂದ್ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ತೀರ್ಮಾನವನ್ನು ನಷ್ಟ ಬೆಳೆ ತೋಟದಲ್ಲಿಯೇ ಕೈಗೊಳ್ಳಲಾಯಿತೆಂದರು.
ತೋಟಕ್ಕೆ ಭೇಟಿ ನೀಡಿದಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಜರ್ನಾಧನ್, ವೆಂಕಟಸ್ವಾಮಿ, ನಾಗರಾಜ್ ಮುಂತಾದವರಿದ್ದರು