ನೇಜಿಗುರಿ ಅಂಗನವಾಡಿ ಕೇಂದ್ರ, ನೇಜಿಗುರಿ ಗುಂಪು ಹಾಗೂ ಇತರ ಸಂಘಟನೆಗಳ ವತಿಯಿಂದ ನಡೆದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಅತಿಥಿಗಳಾಗಿ ನಾರಪ್ಪ KB (ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ), ಶೃತಿ KM (ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ), ಭಗಿನಿ ಹೆಲೆನ್ ಫರ್ನಾಂಡಿಸ್(ಜಿಪ್ಪು ಸ್ಪಂದನ ಸಂಸ್ಥೆಯ ಆಡಳಿತ ಅಧಿಕಾರಿ), ಜಯಪ್ರಕಾಶ್ ಗಟ್ಟಿ (ದೀಪ ಫ್ರೆಂಡ್ಸ್ ಕ್ಲಬ್ ಹಾಗೂ ಗಣೇಶೋತ್ಸವ ಸಮಿತಿ KHB ಬೋಂದೇಲ್ ಇದರ ಅಧ್ಯಕ್ಷರು), ಭಗಿನಿ ಲೀನಾ (ಜಿಪ್ಪು ಸ್ಪಂದನ ಸಂಸ್ಥೆ), ವಿಕ್ಟರ್ ವಾಸ್ (ಜಿಪ್ಪು ಸ್ಪಂದನ ಸಂಸ್ಥೆಯ ಕಾರ್ಯ ಸಂಯೋಜಕರು), ತೀರ್ಥ ಟೀಚರ್ (ಸಮಾಜ ಸೇವಕರು), ಪವನ್ (ಶಿವಶಕ್ತಿ ಇದರ ಅಧ್ಯಕ್ಷರು), ಸಚಿನ್ (ಆದಿಶಕ್ತಿ ಗೇಮ್ಸ್ ಟೀಮ್ ಇದರ ಅಧ್ಯಕ್ಷರು), ಗೋಪಾಲ್ ಮುಗ್ರೋಡಿ ( ಸಮಾಜ ಸೇವಕರು ), ಪ್ರಾಣೇಶ್ (ಮೊಸರು ಕುಡಿಕೆ ಸೇವಾ ಸಮಿತಿಯ ಕಾರ್ಯದರ್ಶಿ), ಚಂದ್ರಿಕಾ (ಆಶಾ ಕಾರ್ಯಕರ್ತೆ), ಶುಭಕರ್ ಮುಗ್ರೋಡಿ ( ಸಮಾಜ ಸೇವಕರು ), ಹರಿಣಾಕ್ಷಿ ಟೀಚರ್ (ನೇಜಿಗುರಿ ಅಂಗನವಾಡಿ ಕೇಂದ್ರ), ಶ್ಯಾಮಲ (ನೇಜಿಗುರಿ ಅಂಗನವಾಡಿ ಕೇಂದ್ರ), ಶ್ರೀಮತಿ ಗೋಪಿ (ನೇಜಿಗುರಿ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷರು), ಅರುಣ್ ಡಿಸೋಜ (ನೇಜಿಗುರಿ ಗುಂಪಿನ ಅಧ್ಯಕ್ಷರು) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೃತಿ KM, ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ ಇವರು ಧ್ವಜಾರೋಹಣಗೈದರು.
ಭಗಿನಿ ಹೆಲೆನ್ ಫರ್ನಾಂಡಿಸ್, ಜಿಪ್ಪು ಸ್ಪಂದನ ಸಂಸ್ಥೆಯ ಆಡಳಿತ ಅಧಿಕಾರಿ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಾಗೂ ಸ್ವಾತಂತ್ರ್ಯೋತ್ಸವದ ಶುಭಹಾರೈಸಿದರು.
ನಾರಪ್ಪ KB ,ಪೋಲಿಸ್ ಕಾನ್ಸ್ಟೇಬಲ್ ಕದ್ರಿ ಪೊಲೀಸ್ ಠಾಣೆ, ಶೃತಿ KM ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ ಇವರುಗಳ ಸೇವೆಯನ್ನು ಪರಿಗಣಿಸಿ ಗಣ್ಯರ ಸಮ್ಮುಖದಲ್ಲಿ ಸಮಾಜ ಸೇವಕರಾದ ಶುಭಕರ್ ಮುಗ್ರೋಡಿ ಇವರಿಂದ ಗೌರವಿಸಲಾಯಿತು.
ಸನ್ಮಾನ ಕಾರ್ಯಕ್ರಮ ಚೈತ್ರ ರವರು ನಡೆಸಿಕೊಟ್ಟರು.
ಅಂಗನವಾಡಿಯ ಶ್ಯಾಮಲ ಅಂಗನವಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ರಾಕೇಶ್ ನೇಜಿಗುರಿ ರವರು ಕಾರ್ಯಕ್ರಮ ನಿರೂಪಿಸಿದರು.
ಅರುಣ್ ಡಿಸೋಜ,ನೇಜಿಗುರಿ ಗುಂಪಿನ ಅಧ್ಯಕ್ಷರು ಸ್ವಾಗತಿಸಿ, ಅಂಗನವಾಡಿಯ ಟೀಚರ್ ಹರಿಣಾಕ್ಷಿ ವಂದಿಸಿದರು. ನೆರೆದವರೆಲ್ಲರಿಗೂ ತಿಂಡಿ ಹಾಗೂ ಸಿಹಿಹಂಚಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಲಾಯಿತು.