ಕೋಲಾರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೋಲಾರ ಜಿಲ್ಲಾ ಛಾಯಗ್ರಾಹಕ ಸಂಘದ ಸಂಯುಕ್ತಾಶ್ರಯದಲ್ಲಿ ಹಿರಿಯ ಪತ್ರಿಕಾ ಛಾಯಗ್ರಾಹಕರಾದ ದಿವಂಗತ ಜಿ.ಸೋಮಶೇಖರ್ (ಶೇಖರ್ ಸ್ಟುಡಿಯೋ) ರವರ ನೆನಪಿನಲ್ಲಿ ಆಯೋಜಿಸಲಾದ ಕೋಲಾರ ಜಿಲ್ಲಾ ಮಟ್ಟದ ಛಾಯಾಚಿತ್ರ ಸ್ವರ್ಧೆಯಲ್ಲಿ ಗ್ರಾಮೀಣ ಜನಜೀವನ ಮತ್ತು ಕುಲಕಸುಬು ಸಂಬಧಿಸಿದಂತೆ ಕುರಿ ಕಾಯುವ ಮಹಿಳೆಯೊಬ್ಬರು ಸಂಜೆ ಸಮಯದಲ್ಲಿ ಕುರಿಗಳನ್ನು ದೊಡ್ಡಿಗೆ ಕರೆದೊಯುವ ಅತ್ಯೂತ್ತಮ ಚಿತ್ರಕ್ಕೆ ಪತ್ರಿಕಾ ಛಾಯಗ್ರಾಹಕ ಕೆ.ಎನ್.ಚಂದ್ರಶೇಖರ್ (ಕೋಲಾರ್ ನ್ಯೂಸ್ ಚಂದ್ರು) ಪ್ರಥಮ ಬಹುಮಾನ ಪಡೆದು ಕೊಂಡರು ಜೊತೆಗೆ 5000 ನಗದು ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಭತ್ತದ ಗದ್ದೆಯಲ್ಲಿ ಕೆಲಸಮಾಡುತ್ತಿರುವ ಮಹಿಳೆಯರ ಚಿತ್ರಕ್ಕೆ ದೇವೇಂದ್ರ ದ್ವಿತೀಯ ಬಹುಮಾನ 3000 ನಗದು ಮತ್ತು ಪ್ರಶಸ್ತಿಪತ್ರ ಹಾಗೂ ಬಿದಿರಿನ ಬುಟ್ಟಿ ಎಣೆಯುವ ಚಿತ್ರಕ್ಕೆ ಕೃಷ್ಣ ತೃತೀಯ ಬಹುಮಾನ 2000 ನಗದು ಮತ್ತು ಪ್ರಶಸ್ತಿಪತ್ರವನ್ನು ಪಡೆದುಕೊಂಡರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ರವರು ಎಲ್ಲಾ ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಹಿರಿಯ ಪತ್ರಕರ್ತ ಜಗನ್ನಾಥ್ ಪ್ರಕಾಶ್, ರಾಜ್ಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಚ್.ಎಲ್.ನಾಗೇಶ್, ನಿದೇರ್ಶಕರಾದ ಉಮಾಶಂಕರ್, ಕೋಲಾರ ಜಿಲ್ಲಾ ಅಧ್ಯಕ್ಷ ವಿ.ಕೃಷ್ಣ, ತಾಲೂಕು ಅಧ್ಯಕ್ಷ ಸ್ಪಂದನ ರಂಗನಾಥ್, ಪತ್ರಕರ್ತರು ಮತ್ತು ಛಾಯಗ್ರಾಹಕರು ಉಪಸ್ಥಿತರಿದ್ದರು.