ಕೋಲಾರ:- ರಾಜ್ಯದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಲು ಕಾಂಗ್ರೆಸ್ ವರಿಷ್ಠರಿಗೆ ರಾಜ್ಯ ಆಹಾರ ಸಚಿವ ಕೆಹೆಚ್.ಮುನಿಯಪ್ಪ ಮನವಿ ಮಾಡಿದರು.
ಈ ಸಂಬಂಧ ದೆಹಲಿಯಲ್ಲಿ ಅವರನ್ನು ಭೇಟಿ ಮಾಡಿದ ಅವರು, ದೇಶದಲ್ಲಿ ನಡೆದ 30 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಸೇರಿ ಏಳು ಜನ ನ್ಯಾಯಾಧೀಶರ ಒಳಗೊಂಡ ಪೀಠ ಮಹತ್ವದ ತೀರ್ಪು ನೀಡಿದ್ದು ಎಸ್ಸಿ ಎಸ್ಟಿ ಒಳಮೀಸಲಾತಿ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಆರ್ಥಿಕ, ಶೈಕ್ಷಣಿಕ,ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯಗಳು ಸುಮಾರು 30 ವರ್ಷಗಳಿಂದ ಹೋರಾಟ ಮಾಡುತ್ತಿತ್ತು ಎಸ್ಸಿ ಸಮುದಾಯದ 101 ಉಪಜಾತಿಗಳು ಪರಿಶಿಷ್ಟ ಜಾತಿಯಲ್ಲಿ ಬರುತ್ತದೆ ಇವರಿಗೆ ಸಮಾನವಾಗಿ ಮೀಸಲಾತಿಯನ್ನು ಹಂಚಲು ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ.
ಜನಸಂಖ್ಯೆ ಆಧಾರದ ಮೇಲೆ ವರ್ಗೀಕರಣ ಮಾಡಿ ಎಲ್ಲರಿಗೂ ಸಮಾನ ಅವಕಾಶ ನೀಡಬಹುದಾಗಿದೆ ಒಳ ಮೀಸಲಾತಿಗಾಗಿ ಎಲ್ಲ ರಾಜ್ಯಗಳಲ್ಲೂ ಸಾಕಷ್ಟು ಹೋರಾಟ ಮಾಡಿದ್ದಾರೆ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಕೂಡ ಸಾಮಾಜಿಕವಾಗಿ ,ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದರು ಎಂದರು.
ಪಂಜಾಬ್ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ವಾಲ್ಮೀಕಿ ದೋಬಿ ಸಮುದಾಯ ಬರುತ್ತದೆ ಧರ್ಮ ಯಾವುದೇ ಇರಲಿ ಜಾತಿ ಯಾವುದೇ ಇರಲಿ ಉಪಜಾತಿ ಯಾವುದೇ ಇರಲಿ ಅವರೆಲ್ಲರೂ ಸಮಾನರು ಅದೇ ಸಂವಿಧಾನ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮಾನತೆಗೆ ದೇಶಾದ್ಯಂತ ಹೋರಾಟ ನಡೆಸಲಾಯಿತು ಎಂದರು.
ಸರ್ವೋಚ್ಚ ನ್ಯಾಯಾಲಯವು ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ಅಧಿಕಾರ ಕೊಟ್ಟಿದೆ ರಾಜ್ಯದಲ್ಲಿ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳನ್ನು ಮಾಡಿಕೊಡಿ ಎಂದು ಹೇಳಿದೆ ಈ ಹಿನ್ನಲೆಯಲ್ಲಿ ಇದನ್ನು ಜಾರಿ ಮಾಡಬೇಕೆಂದು ರಾಜ್ಯ ಸರ್ಕಾರದಲ್ಲಿ ಮನವಿ ಮಾಡಿದ್ದೇನೆ ಎಂದರು.
ಸಮಾನತೆ ಕಾಣಬೇಕಾದರೆ ಒಳ ಮೀಸಲಾತಿಯು ಅನಿವಾರ್ಯವಾಗಿ ಜಾರಿಯಾಗಬೇಕು ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಅವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.
ಎಸ್ಸಿ ಎಸ್ಟಿ ಉಪ ವರ್ಗಗಳನ್ನು ವರ್ಗೀಕರಣ ಮಾಡುವುದರಿಂದ ಯಾವುದೇ ರಾಜ್ಯದಲ್ಲಿರುವ ಎಸ್ಟಿ ವರ್ಗದವರಿಗೆ ಅನ್ಯಾಯವಾಗುವುದಿಲ್ಲ ಎಂದು ವರಿಷ್ಠರಿಗೆ ಮನವಿ ಮಾಡಲಾಗುವುದು, ಆಯಾ ಜನಸಂಖ್ಯೆ ಆಧಾರದ ಮೇಲೆ ಕೊಡುವುದರಿಂದ ಇದನ್ನು ತೀರ್ಮಾನ ಕೈಗೊಂಡರೆ ಬಹಳಷ್ಟು ದಿನಗಳ ಹೋರಾಟಕ್ಕೆ ಪರಿಹಾರ ಸಿಗುತ್ತದೆ ಮತ್ತು ಸಮಾಜದಲ್ಲಿ ಸಮಾನತೆ ಕಾಣಬಹುದು ಎಂದು ಗಾಂಧೀಜಿ, ಬಸವಣ್ಣ ,ಅಂಬೇಡ್ಕರ್, ಅವರು ಹೇಳಿದ್ದಾರೆ ಆದ್ದರಿಂದ ಕಟ್ಟ ಕಡೆ ವ್ಯಕ್ತಿಗೆ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂದರು.
ಇದರ ಭಾಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ ಅದರ ಕನಸು ನನಸಾಗಲು ಸಹಕಾರಿಯಾಗುತ್ತದೆ ಎಂದರು. ಜನಸಂಖ್ಯೆ ಆದಾರದ ಮೇಲೆ ವರ್ಗೀಕರಣದಿಂದ ಸಮ ಸಮಾಜದ ಅಭಿವೃದ್ಧಿಗೆ ಸಹಕಾರಿ ಎಂದು ತಿಳಿಸಿದ್ದಾರೆ.
ಒಳ ಮೀಸಲಾತಿ ಜಾರಿಯಿಂದ ಬೇರೆ ಯವ ವರ್ಗದವರಿಗೂ ಅನ್ಯಾಯವಾಗುವುದಿಲ್ಲಾ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಶೀಘ್ರದಲ್ಲಿ ಜಾರಿಗೊಳಿಸುವ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.