ಕೋಲಾರ:- ತಮ್ಮ ಅವಧಿಯಲ್ಲಿ ರಾಜ್ಯಕ್ಕೆ ಮಂಜೂರು ಮಾಡಿದ್ದ ರೈಲ್ವೆ ಕೋಚ್ ಫ್ಯಾಕ್ಟರಿ ಸೇರಿದಂತೆ ವಿವಿಧ ರೈಲು ಮಾರ್ಗಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಹಾಲಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮಾಜಿ ರೈಲ್ವೆ ಸಚಿವ ಹಾಗೂ ಹಾಗೂ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದರು.
ದೆಹಲಿಯಲ್ಲಿ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಿದ ಕೆ.ಎಚ್.ಮುನಿಯಪ್ಪ, ದಕ್ಷಿಣ ಭಾರತದಲ್ಲಿಯೇ ಎರಡನೇ ಅತಿ ದೊಡ್ಡ ರೈಲ್ವೆ ಕೋಚ್ ಪ್ಯಾಕ್ಟರಿ ಶ್ರೀನಿವಾಸಪುರದಲ್ಲಿ ಕಾರ್ಯಾರಂಭ ಮಾಡಬೇಕಾಗಿತ್ತು. ಅದನ್ನು ಶೀಘ್ರ ಪೂರ್ಣಗೊಳಿಸಲು ರೈಲ್ವೆ ಸಚಿವ ಸೋಮಣ್ಣ ಅವರಿಗೆ ಒತ್ತಾಯಿಸಿದರು.
ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ರೈಲ್ವೆ ಸಚಿವರಾಗಿದ್ದ ತಾವು ರಾಜ್ಯದ ಪ್ರಮುಖ ಯೋಜನೆಗಳು ಮಂಜೂರು ಮಾಡಿದ್ದು, ಇದೀಗ ನೀವು ರಾಜ್ಯದವರಾಗಿ ಅಧಿಕಾರ ಹೊಂದಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲು ಸೋಮಣ್ಣ ಅವರಿಗೆ ಮನವಿ ಮಾಡಿದರು.
ತಮ್ಮ ಅವಧಿಯಲ್ಲಿ ಮಂಜೂರು ಮಾಡಿದ್ದ ವೈಟ್ ಪೀಲ್ಡ್ನಿಂದ-ಕೋಲಾರ ರೈಲು ಮಾರ್ಗ, ಕಡಪದಿಂದ – ಕೆಜಿಎಫ್ ಮಾರ್ಗ,
ಚಿಕ್ಕಮಂಗಳೂರು ನಿಂದ ಸಕಲೇಶಪುರದ ಮಾರ್ಗ, ಬೆಂಗಳೂರು ನಿಂದ ಕೊಳ್ಳೇಗಾಲ ಮಾರ್ಗ, ಚಿಕ್ಕಬಳ್ಳಾಪುರ ದಿಂದ ಪ್ರಶಾಂತನಗರ (ಪುಟ್ಟಪರ್ತಿ) ಮಾರ್ಗ, ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಮಾರ್ಗ, ಮೈಸೂರು ನಿಂದ ಕುಶಾಲನಗರಮಾರ್ಗ,
ದಾವಣಗೆರೆ ಯಿಂದ ತುಮಕೂರು,ಚಿತ್ರದುರ್ಗ ಮಾರ್ಗ, ರಾಯದುರ್ಗದಿಂದ ತುಮಕೂರು ರೈಲು ಮಾರ್ಗಗಳನ್ನು ತಮ್ಮ ಅವಧಿಯಲ್ಲಿ ಪೂರ್ಣಗೊಳಿಸಿ ಎಂದು ಸೋಮಣ್ಣ ಅವರನ್ನು ಒತ್ತಾಯಿಸಿದರು.
ಅಂದು ಸಚಿವನಿದ್ದಾಗ ಕಾರ್ಯಾರಂಭ ಮಾಡಿದ್ದು ಇವುಗಳನ್ನು ಅತಿ ಶೀಘ್ರದಲ್ಲಿ ನಮ್ಮ ರಾಜ್ಯದ ಜನಾನುರಾಗಿ ರೈಲ್ವೆ ಸಚಿವರಾದ ಸೋಮಣ್ಣನವರು ಪ್ರಾರಂಭಿಸಿ ಪೂರ್ಣಗೊಳಿಸಲು ಮನವಿ ಮಾಡಿದರು. ಹಾಗೆಯೇ ವಿಶೇಷವಾಗಿ ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ರೈಲ್ವೆ ಕೋಚ್ ಫ್ಯಾಕ್ಟರಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಮತ್ತು ಮತ್ತು ಎರಡನೇ ಕೋಚ್ ಫ್ಯಾಕ್ಟರಿ ಕೋಲಾರ ಮತ್ತು ಶ್ರೀನಿವಾಸಪುರದಲ್ಲಿದಲ್ಲಿ ಪ್ರಾರಂಭಿಸಿದ್ದು ಇದಕ್ಕೆ ಸುಮಾರು 1200 ಎಕರೆ ಪ್ರದೇಶವನ್ನು ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆಗೆ ಮೀಸಲಿಟ್ಟಿದ್ದು ಅಂದಿನ ಕೇಂದ್ರ ರೈಲ್ವೆ ಸಚಿವರಾದ ಪಿಯೂಶ್ ಗೋಯಲ್ ಹಾಗೂ ಡಿವಿಷನಲ್ ರೈಲ್ವೆ ಮ್ಯಾನೇಜರ್ ರವರು ಉದ್ಘಾಟನೆ ಮಾಡಿ ಆಶ್ವಾಸನೆ ನೀಡಿದ್ದು ಇದನ್ನು ಕಾರ್ಯಾರಂಭ ಮಾಡಿ ಪೂರ್ಣಗೊಳಿಸಲು ಸೋಮಣ್ಣ ಅವರಲ್ಲಿ ಮನವಿ ಮಾಡಿದರು.