ಕೋಣಿ : ಕೋಣಿ ಗ್ರಾಮದ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ, ನಿಯಮಿತ ಕೋಣಿ ಶಾಖೆಯ ಮೇಲ್ಗಡೆ ಎಂ.ಪಿ.ವಿ. ಪೂರ್ವ ಪ್ರಾಥಮಿಕ ಶಾಲೆ ಮತ್ತು ಓಖಿಖಿ ಅಕಾಡಮೆಯನ್ನು ಉದ್ಘಾಟಿಸಿದ ಕಾಮಧೇನು ಕೊಕನೇಟ್ ಇಂಡಸ್ಟ್ರೀಯ ಮಾಲೀಕರಾದ ನಾಗರಾಜ ಕಾಮಧೇನುರವರು ಈ ಪ್ರಾಂತ್ಯದಲ್ಲಿ ಉತ್ತಮವಾದ ಸಂಸ್ಕøತದೊಂದಿಗೆ ಇತರ ಎಲ್ಲಾ ಶಿಕ್ಷಣವನ್ನು ನೀಡುವ ಸಂಸ್ಥೆಯ ಅವಶ್ಯಕತೆ ಇದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆ. ವಿಕಾಸ ಹೆಗ್ಡೆ ಉಪಾಧ್ಯಕ್ಷರು ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ ಬಸ್ರೂರು, ಗೌತಮ್ ಕೆ. ಂಉಒ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ ಬಸ್ರೂರು, ಊ. ಪ್ರವೀಣ್ ಕುಮಾರ್ ಶೆಟ್ಟಿ ಶಾಖಾ ವ್ಯವಸ್ಥಾಪಕರು ಕೋಣಿ ಶಾಖೆ, ಕಿರಣ್ ಕುಮಾರ್ ಅಡಿಟರ್ ಕುಂದಾಪುರ, ಅಶೋಕ ಭಂಡಾರಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಣಿ, ಸತೀಶ ಗೋಪಾಲಾಡಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹಂಗಳೂರು ಇವರು ಉಪಸ್ಥಿತರಿದ್ದರು.
ಸುಧೀಂದ್ರ ಕಾರ್ಯದರ್ಶಿ ಹಾಗೂ ಮಮತಾ ಮ್ಯಾನೇಜಿಂಗ್ ಟ್ರಸ್ಟಿಯವರು ಉಪಸ್ಥಿತರಿದ್ದು, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಶ್ರೀಮತಿ ಸುಮಿತ್ರಾರವರು ಸ್ವಾಗತಿಸಿ, ನಿರೂಪಣೆ ಮಾಡಿದರು. ಶ್ರೀಮತಿ ಶಿಲ್ಪಾರವರು ವಂದಿಸಿದರು.