ಶ್ರೀನಿವಾಸಪುರ 4 : ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ನಾಗರಪಂಚಮಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿ ಮಳೆ, ಬೆಳೆ, ಜೀವನ ಸಂವೃದ್ದಿಗೊಳಿಸುವಂತೆ ನಾಗದೇವರಿಗೆ ಪೂಜೆಯನ್ನು ಸಲ್ಲಿಸಿದರು.
ಪಟ್ಟಣದ ಪೊಲೀಸ್ ವಸತಿ ಗೃಹಗಳ ಅವರಣದಲ್ಲಿ ಶುಕ್ರವಾರ ಪ್ರತಿ ವರ್ಷದಂತೆ ಈ ವರ್ಷವು ಸಹ ಪಟ್ಟಣದ ಪೊಲೀಸ್ ವಸತಿ ಗೃಹಗಳ ಅವರಣದಲ್ಲಿ ನಾಗದೇವತೆ , ವಿದ್ಯಾಗಣಪತಿ ದೇವರುಗಳಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ನಾಡಿಗೆ ದೊಡ್ಡ ಹಬ್ಬ ಎಂದು ಖ್ಯಾತಿಪಡೆದ ನಾಗರಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಿ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬದಿಂದ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ನಾಗರಪಂಚಮಿ, ರಕ್ಷಾಬಂದನ, ಕೃಷ್ಟ ಜನ್ಮಾಷ್ಟಮಿ, ಗಣೇಶ ಚರ್ತುಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳ ಒಂದರೊಂದರಂತೆ ಹಬ್ಬಗಳು ಆರಂಭವಾಗುತ್ತವೆ. ಹೀಗಾಗಿ ತಾಲ್ಲೂಕಿನಾದಂತ್ಯ ನಾನಾ ಕಡೆಗಳಲ್ಲಿ ನಾಗರಪಂಚಮಿ ಹಬ್ಬದ ಪ್ರಯುಕ್ತ ನಾಗದೇವತೆ ವಿಗ್ರಹಕ್ಕೆ ಸುಮಂಗಲಿಯರು ಪೂಜೆಯನ್ನು ಸಲ್ಲಿಸಿ ಹಾಲನ್ನು ಎರೆದರು.
ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪುನಿತರಾದರು. ದೇವರ ದರ್ಶನಕ್ಕೆ ಬಂದಂತಹ ಭಕ್ತಾಧಿಗಳಿಗೆ ತೀರ್ಥಪ್ರಸಾದ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಪ್ರಧಾನ ಅರ್ಚಕರಾದ ಸದಾಶಿವ, ಹಾಗೂ ಅವರ ಸಂಗಡಗರಿಂದ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ಪೂಜಾ ಕಾರ್ಯಕ್ರಮದಲ್ಲಿ ಸಿಪಿಐ ಎಂ.ಬಿ. ಗೊರವನಕೊಳ್ಳಿ, ಪಿಎಸ್ಐ ಜಯರಾಮ್, ಮುಖಂಡರಾದ ಕೆ.ಕೆ. ಮಂಜುನಾಥ್, ಗಾಯಿತ್ರಿಮುತ್ತಪ್ಪ, ಪೊಲೀಸ್ ಪೇದೆಗಳಾದ ರಾಮಚಂದ್ರ, ವೆಂಕಟೇಶ್, ರಾಮಚಂದ್ರ, ಸಂಪತ್,ಹಾಗೂ ಪೊಲೀಸ್ ವಸತಿ ಗೃಹಗಳ ಕುಟುಂಬದವರು, ಪಟ್ಟಣದ ಜನತೆ ಭಾಗವಹಿಸಿದ್ದರು.