ಶ್ರೀನಿವಾಸಪುರ : ಸರ್ಕಾರಿ ಸೇವೆ ಸೇರಿದಾಗ ವರ್ಗಾವಣೆ ಹಾಗು ನಿವೃತ್ತಿ ಎಂಬ ಈ ಎರೆಡು ವಿಷಯಗಳು ಗ್ಯಾರಂಟಿ . ಆದರೆ ಇವೆರಡರ ನಡುವಿನ ಅವಧಿಯಲ್ಲೆ ಹೇಗೆ ಕಾರ್ಯನಿರ್ವಹಿಸಿದ್ದೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಎಂದು ಸನ್ಮಾನವನ್ನು ಸ್ವೀಕರಿಸಿ ಪ್ರಧಾನ ನ್ಯಾಯಾಯದೀಶ ಬಿ.ಕೆ.ಮನು ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಯಲದ ಆವರಣಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಮಂಗಳವಾರ ನಡೆದ ಬೀಳ್ಕೊಡಿಗೆ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಕೆಲವೊಮ್ಮೆ ನ್ಯಾಯಾಧೀಶರು ವಕೀಲರ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಿರುತ್ತೇವೆ. ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ಸಿಗಬೇಕು ಎನ್ನುವದೇ ಅದಕ್ಕೆ ಕಾರಣವಾಗಿರುತ್ತದೆ. ಪ್ರಕರಣಗಳ ಕಲಾಪದ ಸಂದರ್ಭದಲ್ಲಿ ನ್ಯಾಯದ ವಿಚಾರವಾಗಿ ನಿಷ್ಠುರವಾಗಿರಬೇಕಾಗುತ್ತದೆ. ಅಂತಹ ಸಂಧರ್ಭಗಳಲ್ಲಿ ವಕೀಲರ ಮನಸ್ಸಿಗೆ ಬೇಸರ ಮೂಡಿದ್ದಲ್ಲಿ ಈಗ ಕ್ಷಮೆಯಾಚಿಸುತ್ತೇನೆ .ಇಲ್ಲಿಂದ ವರ್ಗಾವಣೆಗೊಳ್ಳುತ್ತಿರುವುದಕ್ಕೆ ಬೇಸರವಿದ್ದರೂ ಸಹ ವರ್ಗಾವಣೆ ಅನಿವಾರ್ಯ ಎಂದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಜಯರಾಮೇಗೌಡ ಮಾತನಾಡಿ 2ವರ್ಷ 2 ತಿಂಗಳು ಈ ನ್ಯಾಯಾಲಯದರಲ್ಲಿ ಉತ್ತಮ ಸೇವೆ ಸಲ್ಲಿಸುವುದರ ಮೂಲಕ ಎಲ್ಲರ ಗಮನ ಸೆಳಿದಿದ್ದರು. ವಕೀಲರಿಗೆ ಹಾಗು ಕಿರಿಯ ವಕೀಲರಿಗೆ ಸಲಹೆ ಹಾಗು ಮಾರ್ಗದರ್ಶನವನ್ನು ನೀಡಿ, ಪ್ರಕಕರಣಗಳನ್ನು ಕಾನೂನು ರೀತ್ಯ ಅತಿ ಶೀಘ್ರವಾಗಿ ಇತ್ಯಾರ್ಥಗೊಳಿಸುತ್ತಿದ್ದರು ಅಲ್ಲದೆ ವಕೀಲರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದರು ಎಂದರು.
ಅಪರ ನ್ಯಾಯಾಯದೀಶ ಹೆಚ್.ಎನ್.ಸಚಿನ್, ಸರ್ಕಾರಿ ಅಭಿಯೋಜಕ ಮುಕಂದ, ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ವೆಂಕಟೇಶ್, ವಕೀಲರಾದ ಮುರಳಿಧರ್, ರಾಜಗೋಪಾಲರೆಡ್ಡಿ, ಪಿ.ಸಿ.ನಾರಾಯಣಸ್ವಾಮಿ, ನಾಗರಾಜು, ಕೆ.ನಾರಾಯಣಸ್ವಾಮಿ, ಶ್ರೀನಿವಾಸಶೆಟ್ಟಿ, ಕೆ.ವಿ.ನಾರಾಯಣಸ್ವಾಮಿ, ಟಿ.ವೆಂಕಟರಮಣ, ಕೆ.ಎನ್.ವೆಂಕಟರಮಣ, ವೆಂಕಟಾಚಲಪತಿ, ಎಂ.ಪಿ.ಶಿವಶಂಕರ್, ಸೌಭಾಗ್ಯಮ್ಮ, ತೇಜ್ವನಿ, ಇಶ್ರಾಥ್ಫಾತೀಮ ಇದ್ದರು.