ಕೋಲಾರ: ಶೋಷಿತ ಸಮುದಾಯಗಳ ಜನನಾಯಕರಾದ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಸ್ ನೋಟಿಸ್ ನೀಡಿದ್ದು ರಾಜ್ಯಪಾಲರ ಈ ನಡೆಯನ್ನು ಖಂಡಿಸಿ ಕೋಲಾರ ಜಿಲ್ಲಾ ಕುರುಬರ ಸಂಘದ ವತಿಯಿಂದ ನಗರದ ಕೆಎಸ್ಆರ್ಟಸಿ ಬಸ್ ನಿಲ್ದಾಣದ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅದ್ಯಕ್ಷ ತಂಬಳ್ಳಿ ಮುನಿಯಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ರಾಜ್ಯದ ಅಹಿಂದ ಹಾಗೂ ದೀನದಲಿತರು, ಶೋಷಿತ ಸಮುದಾಯಗಳ ನಾಯಕರಾಗಿದ್ದಾರೆ. ರಾಜ್ಯಪಾಲರು ನೀಡಿರುವ ಶೋಕಸ್ ನೋಟಿಸ್ನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಮತ್ತು ಕೆಲವು ಪಕ್ಷಗಳ ರಾಜ್ಯ ನಾಯಕರು ಕುತಂತ್ರದಿಂದ ಸಿದ್ದರಾಮಯ್ಯನವರ ತೇಜೋವಧೆ ಮಾಡುತ್ತಿರುವುದನ್ನು ಖಂಡಿಸಿ ಅಗಸ್ಟ್ 7 ರಂದು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಜಿಲ್ಲೆಯಿಂದ ನೂರಾರು ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಂಜನಿ ಸೋಮಣ್ಣ, ಕೆ.ಎನ್.ಸರಸ್ವತಿ, ಕನಕ ಭವನ ಹಾಗೂ ಕನಕದಾಸ ವಿದ್ಯಾರ್ಥಿ ನಿಲಯ ಅಧ್ಯಕ್ಷ ಡಿ.ಮುನಿಯಪ್ಪ, ಜಿಲ್ಲಾ ಉಪಾಧ್ಯಕ್ಷ ಸಿ.ಸೋಮಶೇಖರ್, ಕಾರ್ಯಧ್ಯಕ್ಷ ಜೆ.ಕೆ.ಜಯರಾಮ್, ಆರ್.ವೆಂಕಟೇಶ್ಮೂರ್ತಿ, ಕುರುಬರ ಸಂಘದ ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಸುಬ್ರಮಣಿ, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ವೇಮಣ್ಣ, ಕೋಲಾರ ತಾಲ್ಲೂಕು ಅಧ್ಯಕ್ಷ ಮುನಿಸ್ವಾಮಿ, ಮಹಿಳಾ ಅಧ್ಯಕ್ಷೆ ಶಾಂತಮ್ಮ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಮಾಲೂರು ತಾಲ್ಲೂಕು ಅಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ಆನಂದ ಮೂರ್ತಿ, ಪದಾಧಿಕಾರಿಗಳಾದ ಪರಮೇಶ್, ಕೆ.ಎನ್.ಎನ್.ಪ್ರಕಾಶ್, ಬೆಗ್ಲಿ ಶ್ರೀನಿವಾಸ್, ನಗರಸಭಾ ಸದಸ್ಯರಾದ ವಿ.ಮಂಜುನಾಥ್, ಪ್ರಸಾದ್ಬಾಬು, ಕುರಿಗಳ ರಮೇಶ್, ಗೋವಿಂದಣ್ಣ, ಕೋಡಿರಾಮಸಂದ್ರ ಮುನಿರಾಜು, ವೆಂಕಟೇಶ್, ಮಾಲೂರು ದೇವರಾಜು ಮತ್ತಿತರರಿದ್ದರು.