ಬೆಳ್ಮಣ್ಣು: ಜೇಸಿಐ ಬೆಳ್ಮಣ್ಣು, ಯುವ ಜೇಸಿ ವಿಭಾಗ ಮತ್ತು ಮಹಿಳಾ ಜೇಸಿ ವಿಭಾಗದ ನೇತೃತ್ವದಲ್ಲಿ ಘಟಕಾಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಘಟಕದ 44ನೇ ವರ್ಷಾಚರಣೆ ಅಂಗವಾಗಿ ನಂದಳಿಕೆ ಬೋರ್ಡ್ ಶಾಲಾ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.
ಜೇಸಿಐ ವಲಯಾಧ್ಯಕ್ಷರಾದ ಗಿರೀಶ್ ಎಸ್.ಪಿ. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು ಬೆಳ್ಮಣ್ಣು ಜೇಸಿಐ ಸಂಸ್ಥೆ ಈ ವರ್ಷ ವಲಯದಾದ್ಯಂತ ಹಲವಾರು ಕಾರ್ಯಕ್ರಮಗಳ ಮೂಲಕ ಸಂಚಲನ ಮೂಡಿಸಿ ವಲಯದಲ್ಲೇ ಅಗ್ರ ಸ್ಥಾನ ಪಡೆದಿದೆ ಎಂದರು.
ಕಲಾವಿದರಾದ ವಿ.ಕೆ.ನಂದಳಿಕೆ ಅವರು ಮಾತನಾಡಿದವರು ತುಳುನಾಡಿನ ಆಟಿ ತಿಂಗಳಲ್ಲಿ ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯ, ಆಚಾರ-ವಿಚಾರ, ಇಂತಹ ಆಚರಣೆಯಿಂದ ಮಾತ್ರ ನಮ್ಮತನದ ಉಳಿವು ಸಾಧ್ಯ. ಎಂದರು.
ಕಾರ್ಯಕ್ರಮದಲ್ಲಿ ಜೆಎಸಿ ವಿಭಾಗದ ವ್ಯವಹಾರ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕರಾಗಿ ರಾಷ್ಟಿçÃಯ ಪ್ರಶಸ್ತಿ ಸ್ವೀಕರಿಸಿದ ಸತ್ಯನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು.
ಯುವ ಕೃಷಿಕರಾದ ಬೀರೊಟ್ಟು ದಿನೇಶ್ ಪೂಜಾರಿ ಅವರಿಗೆ ಪ್ರತಿಷ್ಠಿತ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜೇಸಿಐ ವಲಯದ ಪ್ರಥಮ ಮಹಿಳೆ ರಾಜೇಶ್ವರೀ ಗಿರೀಶ್, ನಂದಳಿಕೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ವೀಣಾ ಹರೀಶ್ ಪೂಜಾರಿ, ಬೆಳ್ಮಣ್ಣು ಜೇಸಿಐನ ನಿಕಟ ಪೂರ್ವಾಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ಸೌಜನ್ಯ ಕೋಟ್ಯಾನ್, ಕಾರ್ಯಕ್ರಮದ ನಿರ್ದೇಶಕಿ ಅನ್ನಪೂರ್ಣ ಕಾಮತ್, ಮಹಿಳಾ ಜೇಸಿ ಸಂಯೋಜಕಿ ಶ್ವೇತಾ ಆಚಾರ್ಯ, ಯುವ ಜೇಸಿ ವಿಭಾಗದ ಅಧ್ಯಕ್ಷೆ ಪೂರ್ವಿ ರಾವ್ ಮೊದಲಾದವರಿದ್ದರು.
ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ ಅವರು ಸ್ವಾಗತಿಸಿದರು, ಸಂಜೀವ ಪೂಜಾರಿ ಅವರು ವೇದಿಕೆಗೆ ಆಹ್ವಾನಿಸಿದರು, ಅನ್ನಪೂರ್ಣ ಕಾಮತ್ ಜೇಸಿವಾಣಿ ವಾಚಿಸಿದರು, ಪೂರ್ವಾಧ್ಯಕ್ಷರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಪ್ರಶಸ್ತಿ ಪುರಸ್ಕೃತರ ಪರಿಚಯ ವಾಚಿಸಿದರು. ಪೂರ್ವಾಧ್ಯಕ್ಷರಾದ ಸಾಂತೂರು ವೀಣೇಶ್ ಅಮೀನ್ ಸನ್ಮಾನಿತರ ಪರಿಚಯ ವಾಚಿಸಿದರು. ಕಾರ್ಯದರ್ಶಿ ಸೌಜನ್ಯ ಕೋಟ್ಯಾನ್ ವಂದಿಸಿದರು.
ಆಟಿ ತಿಂಗಳ 41 ಬಗೆಯ ತಿನಸುಗಳಿದ್ದವು, ನಂತರ ಸ್ಥಳೀಯ ಪ್ರತಿಭೆಗಳಿಂದ ಸಂಗೀತ ಕಾರ್ಯಕ್ರಮ ಜರಗಿತು.