ಶ್ರೀನಿವಾಸಪುರ : ಶ್ರೀನಿವಾಸಪುರ ಪಟ್ಟಣ, ರಾಯಲಪಾಡು ಹಾಗೂ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ಯುವಕರು ಹೆಚ್ಚು ಶಬ್ದ ಬರುವ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು, ಈಗಾಗಲೇ ಮುಳಬಾಗಿಲು ತಾಲೂಕಿನಲ್ಲಿ ಇಂತಹ ಬೈಕ್ಗಳ ಸುಮಾರು ೧೫೦ ಸೈಲೆನ್ಸರ್ಗಳನ್ನು ಪೊಲೀಸರು ಕಿತ್ತು ನಗರದ ಡಿವಿಜಿ ವೃತ್ತದಲ್ಲಿ ರೋಡ್ ರೋಲರ್ನಿಂದ ತುಳಿಸಿ ನಜ್ಜುಗುಜ್ಜು ಮಾಡಲಾಗಿದೆ ಎಂದು ಡಿವೈಎಸ್ಪಿ ಡಿ.ಸಿ.ನಂದಕುಮಾರ್ ಮಾಹಿತಿ ನೀಡಿದರು.
ಪಟ್ಟಣದ ನೌಕರರ ಭವನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಏರ್ಪಡಿಸಿದ್ದ ಜನ ಸಂಪರ್ಕಸಭೆಗೆ ಚಾಲನೆ ನೀಡಿ ಮಾತನಾಡಿದರು.
ಸುಮಾರು ದಿನಗಳಿಂದ ಕರ್ಕಶ ಶಬ್ದದಿಂದ ಸಾರ್ವಜನಿಕರು ಗಾಬರಿಗೊಳ್ಳುವಂತೆ ಅಥವಾ ಭಯ ಪಡುವಂತೆ ಮಾಡಿ ಬೈಕ್ ಸವಾರರು ಖುಷಿ ಪಡುತ್ತಿದ್ದರು. ಇದನ್ನು ಗಮನಿಸಿದ ಕರ್ಕಶ ಶಬ್ದ ಬರುವ ಸೈಲೆನ್ಸರ್ ವಶಕ್ಕೆ ಪಡೆಯಲು ಎಲ್ಲಾ ಠಾಣೆಗಳಿಗೆ ಸೂಚಿಸಲಾಗಿದೆ. ಅದರಂತೆ ಬುಧವಾರ ಆಯಾಯ ಠಾಣೆಯ ಪೊಲೀಸರು ಗೋಣಿ ಚೀಲದಲ್ಲಿ ಸೈಲೆನ್ಸರ್ ತುಂಬಿಕೊAಡು ಬಂದು ಸಾರ್ವಜನಿಕ ಸ್ಥಳದಲ್ಲಿ ರೋಡ್ ರೋಲರ್ ಮೂಲಕ ಸೈಲೆನ್ಸರ್ ನಾಶಪಡಿಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ.
ಜನ ಸಂಪರ್ಕ ಸಭೆಯಲ್ಲಿ ಶ್ರೀನಿವಾಸಪುರ ಅಥ್ಲೆಟಿಕ್ ಅಸೋಸಿಯೇಷನ್ ಪದಾಧಿಕಾರಿಗಳು ಮಾತನಾಡಿ, ತಾಲೂಕಿನಲ್ಲಿ ೧೮ ವರ್ಷ ಒಳಗಿನ ಯುವಕರು ಬೈಕ್ ಚಲಾಯಿಸುತ್ತಿದ್ದು ಅವರ ಮೇಲೆ ಕ್ರಮ ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀನಿವಾಸಪುರ ಅಥ್ಲೆಟಿಕ್ ಅಸೋಸಿಯೇಷನ್ ಪದಾಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇನ್ನು ಕೆಲವರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಕೂಡಲೇ ಪೊಲೀಸ್ ಅಧಿಕಾರಿಗಳು ತಾಲೂಕಿನಲ್ಲಿ ಕ್ರಿಕೇಟ್ ಬೆಟ್ಟಿಂಗ್ ಹಾಗೂ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಎಂ.ಬಿ.ಗೊರವನಕೊಳ್ಳ ಮಾತನಾಡಿ, ತಾಲೂಕಿನಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಯುವಕರ ಮೇಲೆ ಹಾಗೂ ರಾತ್ರಿ ಸಮಯದಲ್ಲಿ ವಾಹನಗಳಿಗೆ ಹೈ ಫೋಕಸ್ ಬಲ್ಬ್ ಅಳವಡಿಸಿರುವ ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು. ಹಾಗು ಇತರೆ ಅನೈತಿಕ ಚಟುವಟಿಕೆಗಳ ಬಗ್ಗೆ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದರು.
ಪಿಎಸ್ಐ ಜಯರಾಮ್, ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಎಂ.ಡಿ ನಾರಾಯಣಪ್ಪ, ಹಾಗೂ ಸಿಬ್ಬಂದಿ ರಾಮಚಂದ್ರ ,ಆನಂದ್, ಕುಮಾರ್ ,ಸಂಪತ್
ಮುಖAಡರಾದ ಈರಪ್ಪ, ಮುನಿ ವೆಂಕಟಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ, ರಾಮಾಂಜಮ್ಮ, ಉಮಾದೇವಿ, ಎನ್ಎನ್ಆರ್ ನಾಗರಾಜ್, ನಿಶಾಂತ್ ರೆಡ್ಡಿ, ಎಸ್ ವೇಣುಗೋಪಾಲ್, ವರ್ತನಹಳ್ಳಿ ವೆಂಕಟೇಶ್ ಇದ್ದರು.