ಶ್ರೀನಿವಾಸಪುರ : ಕೂರಿಗೇಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಜುಲೈ 26 ರಂದು ಚುನಾವಣೆ ನಡೆದಿದ್ದು ಕಾಂಗ್ರೇಸ್ ಬೆಂಬಲಿತ ಅಧ್ಯಕ್ಷರಾಗಿ ಯಲ್ಲಮ್ಮ ಜಯರಾಮ್ ರವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಕೂರಿಗೇಪಲ್ಲಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 12 ಸದಸ್ಯರಿದ್ದು ಕಾಂಗ್ರೇಸ್ ಬೆಂಬಲಿತ 11 ಜೆಡಿಎಸ್ ಬೆಂಬಲಿತ ಒಬ್ಬರು ಮಾತ್ರ ಸದಸ್ಯರಾಗಿರುವ ಕಾರಣ ಅಧ್ಯಕ್ಷರ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು ಚುನಾವಣಾಧಿಕಾರಿ ನಾರಾಯಣಸ್ವಾಮಿ ಅವಿರೋಧವಾಗಿ ಯಲ್ಲಮ್ಮ ಜಯರಾಮ್ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು ಉಪಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡದ ಕಾರಣದಿಂದಾಗೂ ಉಪಾಧ್ಯಕ್ಷರಾಗಿ ಶ್ರೀರಾಮರೆಡ್ಡಿಯವರೇ ಮುಂದುವರಿಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ಕೆ ಕೆ ಮಂಜುನಾಥ್ ಮಾತನಾಡಿ ನೂತನ ಅಧ್ಯಕ್ಷರಿಗೆ ಶುಭಾಶಯಗಳು ಕೋರಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಅರ್ಹ ಪಲಾನುಭವಿಗಳಿಗೆ ಸರ್ಕಾರ ದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿ ಗ್ರಾಮಗಳಲ್ಲಿನ ಮೂಲ ಭೂತ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು ನಂತರ ಮಾತನಾಡಿದ ದೊರಸ್ವಾಮಿರೆಡ್ಡಿ ಮಾತನಾಡಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾರ್ಗದರ್ಶನದಂತೆ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದೇವೆ ಎಲ್ಲಾ ಸದಸ್ಯರು ಯಾವುದೇ ಭಿನ್ನಮತ ಇಲ್ಲದೆ ಎಲ್ಲರ ಒಪ್ಪಿಗೆ ಪಡೆದು ಅವಿರೋಧವಾಗಿ ಆಯ್ಕೆಮಾಡಲಾಗಿದೆಯೆಂದರು.
ಈ ಸಂದರ್ಭದಲ್ಲಿ ಕೆ ಕೆ ಮಂಜುನಾಥ್, ದೊರಸ್ವಾಮಿ ರೆಡ್ಡಿ, ರವೀಂದ್ರಾರೆಡ್ಡಿ ಪಾತೂರು,ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ವಿಶ್ವನಾಥರೆಡ್ಡಿ,ಶಂಕರ, ನಾಗರಾಜ್,ರೆಡ್ದೆಪ್ಪ, ಬಿ ವಿ ರೆಡ್ದೆಪ್ಪ,ನಾಗರಾಜ್ ರೆಡ್ಡಿ,ಸದಸ್ಯರಾದ ನಾಗೇಶ್,ಶ್ರೀನಿವಾಸ್ ಆರ್,ಲಕ್ಷ್ಮಿದೇವಿ,ಶ್ರೀರಂಗಪ್ಪ,ಅನಿತಮ್ಮ,ವಿಜಯಲಕ್ಷ್ಮಿ, ನಾಗರಾಜ್,ಆದಿಲಕ್ಷ್ಮಮ್ಮ, ವೆಂಕಟಲಕ್ಷ್ಮಮ್ಮ, ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ್ ಕುಮಾರ್, ಡೇಟಾ ಆಪರೇಟರ್ ಸುಧಾಕರ್ ಚುನಾವಣಾ ಅಧಿಕಾರಿ ನಾರಾಯಣಸ್ವಾಮಿ, ರಾಯಲ್ಪಾಡು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಯೋಗೇಶ್ ಯೋಗೇಶ್ ಹಾಗೂ ಸಾರ್ವಜನಿಕರು ಹಾಜರಿದ್ದರು.