ಕುಂದಾಪುರ, ಜು.21: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. 20 ರಂದು ಭಕ್ತಿಪೂರ್ವಕವಾದ ದಿವ್ಯ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು.
ಹಬ್ಬದ ಬಲಿದಾನವನ್ನು ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಇವರ ನೇತ್ರತ್ವದಲ್ಲಿ ನಡೆಯಿತು. ಅವರು ಕಾರ್ಮೆಲ್ ಮಾತೆಯ ವಿಶೇಷತೆಯನ್ನು ತಿಳಿಸಿ “ಕಾರ್ಮೆಲ್ ಮಾತೆ, ಕಾರ್ಮೆಲ್ ಮೇಳದ ಧರ್ಮಗುರುಗಳಿಗೆ ಧರ್ಮಭಗಿನಿಯರಿಗೆ ಅವರು ಮೂಲ ಪ್ರೇರಣೆ, ಕಾರ್ಮೆಲ್ ಮಾತೆ ನಮ್ಮೆಲ್ಲರ ತಾಯಿ’ ಎಂದು ಕಾರ್ಮೆಲ್ ಮಾತೆಯ ವೀಷತೆಯನ್ನು ತಿಳಿಸಿ, ಹಬ್ಬದ ಶುಭಾಷಯನ್ನು ನೀಡಿದರು.
ಬಲಿದಾನದ ಸಂದರ್ಭದಲ್ಲಿ ಕಾರ್ಮೆಲ್ ಮೇಳದ ಧರ್ಮಗುರು ವಂ|ಕ್ಲಿಫರ್ಡ್ ರೊಡ್ರಿಗಸ್ “ಯೇಸು ಸಾಯುವ ಮುಂಚೆ ತನ್ನ ತಾಯಿಗೆ ತನ್ನ ಪ್ರೀತಿಯ ಶಿಸ್ಯನಿಗೆ ತೋರಿಸಿ ಇನ್ನೂ ಮುಂದೆ ಈತನೇ ನಿನ್ನ ಮಗ, ಹಾಗೇ ಆ ಪ್ರೀತಿಯ ಶಿಸ್ಯನಿಗೆ ತನ್ನ ತಾಯಿ ಮೇರಿ ಮಾತೆಯನ್ನು ತೋರಿಸಿ, ಇನ್ನು ಮುಂದೆ ಇವಳು ನಿನ್ನ ತಾಯಿ ಎಂದರು, ಅಂದಿನಿಂದ ಮೇರಿ ಮಾತೆ ನಮ್ಮೆಲ್ಲರ ತಾಯಿಯಾದಳು, ಕಾರ್ಮೆಲ್ ಮೇಳವು ಸಂಕಷ್ಟದಲ್ಲಿರುವಾಗ ಆ ಮೇಳದ ಸೈಮನ್ ಸ್ಟಾಕ್ ಗೆ ಕಾರ್ಮೆಲ್ ಮಾತೆಯ ರೂಪದಲ್ಲಿ ಸೈಮನ್ ಸ್ಟಾಕ್ ಅವರಿಗೆ ಬೆಂತಿಣ್ ಎಂಬ ಉಡುಗೆ ಕೊಟ್ಟು ಧರಿಸಲು ಹೇಳುತ್ತಾಳೆ, ಅದನ್ನು ಧರಿಸಿದರೆ ರಕ್ಷಣೆ ಲಭಿಸುವುದೆಂದು ಅಭಯ ನೀಡುತಾಳೆ, ಆದರೆ ಇದನ್ನು ಧರಿಸಿದ ಮಾತ್ರಕ್ಷಣ ನಮಗೆ ನಮ್ಮ ಜೀವಿತದಲ್ಲಿ ರಕ್ಷಣೆ ನೀಡುವುದಿಲ್ಲ, ಅದಕ್ಕೆ ನಮ್ಮ ಜೀವಿತದಲ್ಲಿ ಪ್ರಾರ್ಥನ ಭರಿತರಾಗಬೇಕು, ನೀತಿವಂತರಾಗಬೇಕು’ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು.
ಕುಂದಾಪುರದವರೇ ಆದ ರೋಮ್ ನಿಂದ ಬಂದತಹ ಕಾರ್ಮೆಲ್ ವಂ|ಧರ್ಮಗುರು ಮನೋಜ್ ಬ್ರಗಾಂಜಾ, ಸಂತ ಅಂತೋನಿ ಕೆರೆಕಟ್ಟೆ ಪುಣ್ಯ ಕ್ಷೇತ್ರದ ವಂ|ಧರ್ಮಗುರು ಸುನೀಲ್ ವೇಗಸ್, ಕಟ್ಕೆರೆ ಬಾಲ ಯೇಸುವಿನ ಕಾರ್ಮೆಲ್ ಆಶ್ರಮದ ಧರ್ಮಗುರುಗಳಾದ ವಂ|ಧರ್ಮಗುರು ಜೋನ್ ಸಿಕ್ವೇರಾ, ಉಡುಪಿ ಧರ್ಮಪ್ರಾಂತ್ಯದ ಪತ್ರಿಕೆ ಉಜ್ವಾಡ್ ಇದರ ಸಂಪಾದಕ ಆಲ್ವಿನ್ ಸಿಕ್ವೇರಾ, ವಂ|ಧರ್ಮಗುರು ಜೋ ತಾವ್ರೊ, ಕುಂದಾಪುರ ವಲಯದ ಧರ್ಮಗುರುಗಳು ಹಾಗೂ ಹಲವಾರು ಅತಿಥಿ ಧರ್ಮಗುರುಗಳು ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು.
ಕೊಟೇಶ್ವರ ಇಗರ್ಜಿ ಮತ್ತು ಕಟ್ಕರೆ ಬಾಲಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಪ್ರವೀಣ್ ಪಿಂಟೊ ಸ್ವಾಗತಿಸಿ, ವಂದಿಸಿದರು. ಕಟ್ಕೆರೆ ಬಾಲ ಯೇಸು ಆಶ್ರಮದ ಸಹಾಯಕ ವಂ|ಧರ್ಮಗುರು ಜೋ ಸಿದ್ದಕಟ್ಟೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಕುಂದಾಪುರ, ಕೋಟೆಶ್ವರ, ಬಸ್ರೂರು, ಪಿಯುಸ್ ನಗರ್ ಚರ್ಚಿನ ಗಾಯಕರನೊಳಗೊಂಡ ಗಾಯನ ಪಂಗಡ ದಿವ್ಯ ಬಲಿಪೂಜೆಗೆ ಭಕ್ತಿ ಗೀತೆ ಹಾಡಿ ಸಹಕರಿಸಿತು. ಈ ಕಾರ್ಮೆಲ್ ಮಾತೆಯ ಹಬ್ಬಕ್ಕೆ ಅನೇಕ ಧರ್ಮಭಗಿನಿಯಯರು ಹಾಜರಿದ್ದು, ಕುಂದಾಪುರ ವಲಯ ಹಾಗೂ ಇತರ ಕಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಹಬ್ಬದಲ್ಲಿ ಪಾಲ್ಗೊಂಡರು.