ಕುಂದಾಪುರ, ದಿನಾಂಕ :12ನೇ ತಾರೀಖಿನಂದು ಹೋಲಿ ರೋಜರಿಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಡಿಯನ್ ರೆಡ್ಕ್ರಾಸ್ ಸಂಸ್ಥೆ ಕುಂದಾಪುರ ಇದರ ವತಿಯಿಂದ ದೀಪ ಬೆಳಗುವುದರೊಂದಿಗೆ ಸಾಂಕೇತಿಕ ಉದ್ಘಾಟನೆ ಹಾಗೂ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಕಾರ್ಯಕ್ರಮವು ಜರುಗಿತು.
ಸಮಾರಂಭದಲ್ಲಿ ಹೋಲಿ ರೋಜರಿ ಶಾಲೆಯ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ಯವರು ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ರೆಡ್ಕ್ರಾಸ್ ಸಂಸ್ಥೆಯಕಾರ್ಯ ಸಾಧನೆ ಶ್ಲಾಘಿಸಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಶ್ರೀ ಜಯಕರ ಶೆಟ್ಟಿಯವರು ರೆಡ್ಕ್ರಾಸ್ ಸಂಸ್ಥೆ ಬೆಳೆದು ಬಂದ ಬಗೆ, ಉದ್ದೇಶ ಹಾಗೂ ಅದರಕಾರ್ಯ ಕಲಾಪಗಳ ವಿವರ ತಿಳಿಸಿ ತಾರತಮ್ಯವಿಲ್ಲದೆ ಒಗಟ್ಟು, ಮಾನವೀಯ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ರೆಡ್ಕ್ರಾಸ್ ಸಂಸ್ಥೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ್ದ ಡಾ| ಸೋನಿ ಡಿ’ಕೋಸ್ತಾರವರು ವಿದ್ಯಾರ್ಥಿಗಳಿಗೆ ಆರೋಗ್ಯ ಎಂದರೆ ಮಾನಸಿಕ ಮತ್ತು ಶಾರೀರಿಕವಾಗಿ ಸದೃಡವಾಗಿರುವುದುಎಂದು ವಿದ್ಯಾರ್ಥಿಗಳಿಂದ ಉತ್ತರವನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ದಿನಕ್ಕೆ 6 ಲೋಟ ನೀರನ್ನು ಕುಡಿದು ಉತ್ತಮ ಆಹಾರವನ್ನು ಸೇವಿಸಿ, ಹಾಗೂ ಕರ್ನಾಟಕದಲ್ಲಿ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದ್ದು ಇದಕ್ಕೆ ಕಾರಣವೇನು ಅದನ್ನು ಹೇಗೆ ತಡೆಗಟ್ಟುವುದುಇದರ ಲಕ್ಷಣವೇನು ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು. ರೆಡ್ಕ್ರಾಸ್ನ ಖಜಾಂಚಿಯಾಗಿರುವ ಶಿವರಾಮ ಶೆಟ್ಟಿಯವರು ರೆಡ್ಕ್ರಾಸ್ನ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಶಾಲಾ ರೆಡ್ಕ್ರಾಸ್ ಸಂಯೋಜಕಿ ನಿಖಿತಾ ಶೆಟ್ಟಿ , ಶಾಲಾ ರೆಡ್ಕ್ರಾಸ್ ಅಧ್ಯಕ್ಷೆ ನಿಸರ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೋಶಿನಿ ದಾಸ್ಕಾರ್ಯಕ್ರಮ ನಿರೂಪಿಸಿ ವಿದ್ಯಾರ್ಥಿನಿ ಸಾನ್ವಿ ಎಸ್ ವಂದಿಸಿದರು.