ಶ್ರೀನಿವಾಸಪುರ : ಜನಸಂಖ್ಯಾ ಸ್ಪೋಟದಿಂದಾಗುವ ಅಪಾಯಗಳ ಬಗ್ಗೆ ವಿವಿರವಾಗಿ ಮಾಹಿತಿ ನೀಡಿದರು. ಸಾಮಾನ್ಯವಾಗಿ ಮಳೆಗಾಲದಲ್ಲಿ ಡೆಂಘ್ಯು ರೋಗವು ಹರಡುವುದು ಸಾಮಾನ್ಯ ಆದರೆ ಸಾರ್ವಜನಿಕರು ಮನೆಗಳ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಟಿಎಚ್ಒ ಮಹ್ಮಮದ್ ಷರೀಫ್ ಸಲಹೆ ನೀಡಿದರು.
ಪಟ್ಟಣದ ಎಂಜಿ ರಸ್ತೆಯಲ್ಲಿ ಗುರುವಾರ ಎಸ್ವಿ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಂದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಹಾಗು ಡೆಂಘ್ಯು ರೋಗ ತಡೆಗಟ್ಟಲು ಹಮ್ಮಿಕೊಳ್ಳಲಾದ ಜಾಗೃತಿ ಜಾಥಗೆ ಚಾಲನೆ ನೀಡಿ ಮಾತನಾಡಿದರು.
ಎಸ್ವಿ ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಸೀನಪ್ಪ, ಆರೋಗ್ಯ ಸಿಬ್ಬಂದಿಗಳಾದ ಎಂ.ಆಂಜಲಮ್ಮ, ಪಿ.ಬಿ.ಧರ್ಮರಾಜು, ನಾಗಮಣಿ, ಶೈಲಜ, ಸಿ.ಗೋವಿಂದಮ್ಮ ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.