ಶ್ರೀನಿವಾಸಪುರ ಪಟ್ಟಣದ ಡಾ|ಜಾಕಿರ್ ಹುಸೇನ್ ಮೊಹಲ್ಲದಲ್ಲಿರುವ ಸರ್ಕಾರಿ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗೆ ಶ್ರೀನಿವಾಸಪುರ ಪಟ್ಟಣದ ಡಾ| ಎ ಪಿ ಜಿ ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಸುಮಾರು 200 ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಲೇಖಕಿಣಿ ಸಾಮಗ್ರಿಗಳು ನೀಡಿದರು.
ಡಾ| ಎಪಿಜಿ ಅಬ್ದುಲ್ ಕಲಾಂ ಟ್ರಸ್ಟ್ ನ ಅಧ್ಯಕ್ಷ ಅಬ್ದುಲ್ ಮಜೀದ್ ಎಮ್ ಪಿ ಫ್ರೂಟ್ಸ್ ಮಾತನಾಡಿ ನಮ್ಮ ಟ್ರಸ್ಟ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಇದೇ ರೀತಿಯಾಗಿ ಮುಂದೆ ಸಹ ಶೈಕ್ಷಣಿಕಕ್ಕೆ ಸಂಬಂಧಪಟ್ಟ ಸಾಮಾಗ್ರಿಗಳು ಹಾಗೂ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟನ್ನು ಹೆಚ್ಚಿಸಲು ವಿವಿಧ ರೀತಿಯ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಬೇಕಾಗಿರುವ ಸಾಮಗ್ರಿಗಳು ಹಾಗೂ ಶೈಕ್ಷಣಿಕ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಹಾಯವನ್ನು ಟ್ರಸ್ಟಿನ ಮೂಲಕ ನೀಡಲಾಗುವುದು.
ಅಬ್ದುಲ್ ಮಜೀದ್ ಮಾತನಾಡುತ್ತ ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯವನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಐಎಎಸ್ , ಐಪಿಎಸ್ ,ಕೆಎಎಸ್ , ಲಾಯರ್ಸ್ , ಡಾಕ್ಟರ್ಸ್ , ಇಂಜಿನಿಯರ್ಸ್ ಅಗಿ ತಮ್ಮ ಉಜ್ಜಲ ಜೀವನವನ್ನು ರೂಪಿಸಿಕೊಂಡು ಸಮಾಜಕ್ಕೆ ಮಾದರಿ ಆಗಬೇಕು .
ಪೋಷಕರು ಮಕ್ಕಳಿಗೆ ಶಿಕ್ಷಣ ಬಗ್ಗೆ ಗಮನ ಹರಸಿ ಉನ್ನತ ವಿದ್ಯಾಭ್ಯಾಸವನ್ನು ನೀಡುವ ಮೂಲಕ ಒಳ್ಳೆಯ ಪ್ರಜೆಗಳನ್ನಾಗಿ ಮಾಡಬೇಕು ಹಾಗೂ ಶಿಕ್ಷಕರು ಸಹ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿ ತಮ್ಮ ಮಕ್ಕಳಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಒಳಗೆ ಇರುವ ಪ್ರತಿಭಗಳನ್ನು ಗುರ್ತಿಸಿ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟಿನ ಉಪಾಧ್ಯಕ್ಷ ಇಲಿಯಾಸ್ ಅಹಮದ್ , ಕಾರ್ಯದರ್ಶಿ ಅಕ್ರಂ ಪಾಷ , ಖಜಾಂಚಿ ರಿಜ್ವಾನ್ ಪಾಷಾ ಎಟಿಎಸ್ , ಸಂಘಟನಾ ಕಾರ್ಯದರ್ಶಿ ಇಂತಿಯಾಸ್ , ಮುಖ್ಯ ಶಿಕ್ಷಕ ಮೊಹಮ್ಮದ್ ಸಾಧಿಕ್ ಶಿಕ್ಷಕರಾದ ನೂರ್ ಉನ್ನಿಸ್ಸಾ , ರಿಯಾನ ಖಾನಂ, ಅಮ್ಮ ಜಾನ್ ,ಸಲ್ಮಾ , ಎಸ್ಡಿಎಂಸಿ ಅಧ್ಯಕ್ಷ ಹಿದಾಯತ್ ಉಲ್ಲಾಖಾನ್ ಮತ್ತು ಸಮಿತಿಯ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.