ಶ್ರೀನಿವಾಸಪುರ : ಕ್ಷೇತ್ರದಲ್ಲಿ ಸಾವಿರಾರು ಜನ ಬಡವರಿದ್ದು, ಇದ್ದು ಅಂತಹವರಿಗೆ ನಿವೇಶನವನ್ನು ನೀಡುವ ಚಿಂತನೆ ಮಾಡಿದ್ದೇನೆ. ಅಧಿಕಾರಿಗಳು ಈ ನನ್ನ ಚಿಂತನೆಗೆ ಕೈಜೋಡಿಸಬೇಕು ಎಂದರು. ಸರ್ಕಾರದಿಂದ ಬರುವಂತಹ ವಸತಿ ಯೋಜನೆಯನ್ನು ಹಾಗೂ ಇತರೆ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಲಭಿಸುವ ವ್ಯವಸ್ಥೆ ಅಧಿಕಾರಿಗಳು ಶ್ರಮವಹಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಯಲ್ದೂರಿನ ನ್ಯಾಷನಲ್ ಹೈಸ್ಕೂಲ್ ಶಾಲಾವರಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಹೂಲ ಗದ್ದೆಗಳಿಗೆ ಹೋಗುವ ಕಾಲುದಾರಿ ರಸ್ತೆಗಳನ್ನು ,ಸ್ಮಶಾನಕ್ಕೆ ಹೋಗುವ ದಾರಿಗಳನ್ನು ನಕಾಶೆಯಲ್ಲಿ ಇದ್ದರು ಸಹ ಒತ್ತುವರಿ ಮಾಡಿಕೊಳ್ಳುತ್ತಿದ್ದು ದಯವಿಟ್ಟು ಕಾಲುದಾರಿ ರಸ್ತೆಗಳನ್ನು ಒತ್ತುವರಿ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ವಿಕಲೇಚತನರಿಗೆ ಕ್ಷೇತದಲ್ಲಿ ಸರ್ಕಾರದಿಂದ ಈಗಾಗಲೇ 28 ತ್ರಿಚಕ್ರವಾಹನಗಳನ್ನು ವಿತರಣೆ ಮಾಡಲಾಗಿದೆ. ಶಾಸಕರ ಅನುದಾನದಲ್ಲಿ 50 ತ್ರಿಚಕ್ರವಾಹನಗಳನ್ನು ವಿತರಣೆ ಮಾಡಲು ಅವಕಾಶವಿದ್ದು, ಈಗಾಗಲೇ 20 ತ್ರಿಚಕ್ರವಾಹನಗಳನ್ನು ವಿತರಣೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅತಿ ಶೀಘ್ರವಾಗಿ ಉಳಿದವುಗಳನ್ನ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕ್ಷೇತ್ರದಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಐದು ಸಾವಿರ ಎಕರೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು ಅದರಂತೆ ಯಲ್ದೂರು ಹೋಬಳಿಯಲ್ಲಿ 2000 ಎಕರೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ದೊರತಿದೆ ಅತಿ ಶೀಘ್ರವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದರು.ಅಲ್ಲದೆ ಮದನಪಲ್ಲಿ ರಸ್ತೆಗೆ ಸಂಬಂದಿಸಿದಂತೆ 3000 ಎಕರೆಯಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪಿಸಿಲಿದ್ದೇನೆ ಎಂದರು.
ರೈತರಿಗೆ ಹಾಗು ಸಾರ್ವಜನಿಕರಿಗೆ ಸಂಬಂದಿಸಿದಂತೆ ಇರುವ ಸಮಸ್ಯೆಗಳನ್ನು ಅತಿ ಶೀಘ್ರವಾಗಿ ಇತ್ಯರ್ಥ ಮಾಡಿಕೊಡುವಂತೆ ತಹಶೀಲ್ದಾರ್ರವರಿಗೆ ಸೂಚಿಸಿದರು. ಹಾಗೂ ಇ ಖಾತೆಗಳನ್ನು ಯಾವದೇ ರೀತಿಯಾಗಿ ದುರಪಯೋಗವಾಗದಂತೆ ಎಚ್ಚರವಹಿಸಿ ವಿಲೆವಾರಿ ಮಾಡುವಂತೆ ಇಒ ರವರಿಗೆ ಸೂಚಿಸಿದರು. ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಸಾರ್ವಜನಿಕರು ಮಾಹಿತಿ ಪಡೆದು ಸರ್ಕಾರ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ಸರ್ಕಾರದ ನಡೆ ಹಳ್ಳಿಗಳತ್ತಾ ಎನ್ನುವಂತೆ ಸಾರ್ವಜನಿಕರ ತಮ್ಮ ಅಹವಾಲುಗಳನ್ನು ಅತಿ ಶೀಘ್ರವಾಗಿ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಸಾರ್ವಜನಿಕರು ಈ ಕಾರ್ಯಕ್ರಮವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆಗಳ ಬಗ್ಗೆ ವಿವರಿಸಿದರು. ಇದೇ ಸಮಯದಲ್ಲಿ ಕೃಷಿ ಇಲಾಖೆವತಿಯಿಂದ ನಡೆದ ಜಾಗೃತಿ ಜಾಥಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಚಾಲನೆ ನೀಡಿದರು. ಎನ್ಎಫ್ಎಸ್ಎಂ ಯೋಜನೆ ಅಡಿಯಲ್ಲಿ ರೈತರಿಗೆ ರಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಯಿತು. ಬಳೆ ಪ್ರಾತ್ಯಕ್ಷತೆ ಬಗ್ಗೆ ವಿವರಿಸಿ , ಕೃಷಿ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.
ಅಪರಜಿಲ್ಲಾಧಿಕಾರಿ ಎಸ್.ಎಂ ಮಂಗಳ, ಪ್ರೋಬಿಷಿನಲ್ ತಹಶೀಲ್ದಾರ್ಗಳಾದ ಬಿ.ಕೆ.ಶ್ವೇತ, ಎನ್.ಗಂಗಾಸಿಂದು, ಇಒ ಎ.ಎನ್.ರವಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಪರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಉಪತಹಶೀಲ್ದಾರ್ ಕೆ.ಎಲ್.ಜಯರಾಮ್, ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಪೊಲೀಸ್ ನಿರೀಕ್ಷ ಜಯಾನಂದ್, ಅರಣ್ಯ ಇಲಾಖೆ ವಲಯ ಅರಣ್ಯಾಧಕಾರಿ ಮಹೇಶ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಸಿಡಿಪಿಒ ನವೀನ್, ಯಲ್ದೂರು ಕೃಷಿ ಅಧಿಕಾರಿ ಕೆ.ರಘು, ಯಲ್ದೂರು ಅರಣ್ಯ ಅಧಿಕಾರಿ ಸಿ.ಎನ್.ಅನಿಲ್ಕುಮಾರ್, ಮುಖಂಡರಾದ ಕೃಷ್ಣಾರೆಡ್ಡಿ, ಯಲ್ದೂರು ಮಣಿ, ಆರ್ಐಗಳಾದ ಎಸ್.ವಿ.ಜನಾರ್ಧನ್, ಮುನಿರೆಡ್ಡಿ, ಗುರುರಾಜರಾವ್,ವಿಎಗಳಾದ ಮೇಘನಾಯಕ್, ಎಂ.ಎನ್.ಶಂಕರರೆಡ್ಡಿ, ತಹಶೀಲ್ದಾರ್ ಕಚೇರಿ ಸಿಬ್ಬಂದಿ ಎಚ್.ಎಸ್.ಅಭಿಷೇಕ್, ಪಿಡಿಒ ಮಂಗಳಾಂಬ, ಕಾರ್ಯದರ್ಶಿ ಕೆ.ಪಿ.ಶ್ರೀನಿವಾಸರೆಡ್ಡಿ, ಇದ್ದರು.