ಕುಂದಾಪುರದ ಸೈoಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 29 ಜೂನ್ 2024 ರ ಶನಿವಾರದಂದು ಪ್ರಥಮ ಹಾಗೂ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ ಜರುಗಿತು..
ಕಾರ್ಯಕ್ರಮದಲ್ಲಿ ಸೈoಟ್ ಮೇರಿಸ್ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿರುವ ಅತಿ .ವಂ.ಫಾದರ್ ಪಾವ್ಲ್ ರೇಗೊ ರವರು ಅಧ್ಯಕ್ಷತೆ ವಹಿಸಿ ಎಲ್ಲಾ ಪಾಲಕರಿಗೂ ಹೃತ್ಪೂರ್ವಕ ಸ್ವಾಗವನ್ನು ಹೇಳಿದರು ..ತಾವೆಲ್ಲರೂ ತಮ್ಮ ಮಕ್ಕಳ ಆಗುಹೋಗುಗಳ ಕುರಿತು ನಿಗಾ ವಹಿಸಬೇಕು. ಅಪ್ಪ ಅಮ್ಮ ಗುರು ಹಿರಿಯರನ್ನು ಗೌರವಿಸಬೇಕು,ಎನ್ನುತ್ತಾ ಕಲಿಕೆಯಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಪ್ರೇರಿಪಿಸಬೇಕೆಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಣಿಪಾಲದ ನರ್ಸಿಂಗ್ ಕಾಲೇಜಿನಲ್ಲಿ ಪಿ ಎಚ್ ಡಿ ಪದವಿಯನ್ನು ಪ್ರಸ್ತುತ ಅಧ್ಯಯನ ಮಾಡುತ್ತಿರುವ, ಪ್ರಾಂಶುಪಾಲರಾಗಿ ಕೆಲವು ವರ್ಷಗಳ ಅನುಭವವಿರುವ ಶ್ರೀಮತಿ ಪ್ರತಿಭಾ ಲಿಡಿಯಾ ಬ್ರಾಗ್ಸ್ ರವರು ಪಾಲಕರಿಗೆ ಮಕ್ಕಳನ್ನು ಪಾಲನೆ ಮಾಡುವದರಲ್ಲಿ ಅವರ ಕರ್ತವ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು ತಾವು ಮಕ್ಕಳಿಗೆ ಎಂತಹ ಪ್ರೀತಿ ಕೊಡಬೇಕು, ಶಿಸ್ತು, ಸಮಯಪಾಲನೆ, ಇನ್ನೂ ಅನೇಕ ಮೌಲ್ಯಭರಿತ ಪದಗಳನ್ನು ಬಳಸಿ ಸ್ವತಃ ತಾವೇ ಪಾಲಕರಾಗಿ ನಿಂತು ಆಳವಾದ ಜ್ಞಾನ ಭಂಡಾರವನ್ನು ಪಾಲಕರಿಗೆ ಉಣ ಬಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಶ್ಮಾ ಫೆರ್ನಾಂಡಿಸ್ ರವರು ಎಲ್ಲಾ ಪಾಲಕರಿಗೆ ಶುಭ ಹಾರೈಸಿ, ಕಾಲೇಜಿನ ಕೆಲವು ಸಲಹೆ ಸೂಚನೆಗಳನ್ನು ತಿಳಿಸಿದರು.ಕನ್ನಡ ಉಪನ್ಯಾಸಕ ನಾಗರಾಜ ಶೆಟ್ಟಿ ಪ್ರಸ್ತುತ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು.
ಗಣಿತ ಉಪನ್ಯಾಸಕಿ ಶ್ರೀಮತಿ ಮಲ್ಲಿಕಾ ರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಪ್ರೀತಿ ಕ್ರಾಸ್ತಾ ರವರು ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶರ್ಮಿಳಾ ಮಿನೇಜಸ್ ರವರು ಕಾರ್ಯಕ್ರಮ ನಿರೂಪಿಸಿ, ಜೀವಶಾಸ್ತ್ರ ಉಪನ್ಯಾಸಕಿ ಪ್ರಫುಲ್ಲ ರವರು ಧನ್ಯವಾದ ಸಮರ್ಪಿಸಿದರು.