ಶ್ರೀನಿವಾಸಪುರ : ವಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಇಂದು (ಗುರುವಾರ) ಆಚರಿಸಲು ಕಳೆದ ಎರಡು ದಿನಗಳ ಹಿಂದೆ ಶಾಸಕರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸದರಿ ಸಭೆಯಲ್ಲಿ ವಕ್ಕಲಿಗ ಸಂಘದ ಒಂದು ಬಣವನ್ನು ಮಾತ್ರ ಹಾಜರುಪಡಿಸಿಕೊಂಡು ಮತ್ತ್ತೊಂದು ಬಣವನ್ನು ಕಡೆಗಣಿಸಿ ಹಾಜರಿದ್ದ ಒಂದು ಬಣದಿಂದ, ಶಾಸಕರಿಂದ ಹಾಗೂ ಅಧಿಕಾರಿಗಳ ಮತ್ತು ಹಲವು ವಕ್ಕಲಿಗ ಮುಖಂಡರ ಸಲಹೆ ಸೂಚನೆಯಂತೆ 27-06-24 ರ ಗುರುವಾರ ಕೆಂಪೇಗೌಡ ಜಯಂತಿಯನ್ನು ಆಚರಿಸಲು ನಿರ್ಧಾರಿಸಲಾಗಿತ್ತು.
ಆದ್ರೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಕ್ಕಲಿಗರ ಸಂಘದಲ್ಲಿ ಎರಡು ಬಣಗಳಿದ್ದು ಅದರಲ್ಲಿ ಒಂದಾದ ವಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ತಾಲ್ಲೂಕು ಆಡಳಿತದ ನಿರ್ಲಕ್ಷತೆಯ ನಡೆಯನ್ನು ಖಂಡಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಪೂರ್ವಭಾವಿ ಸಭೆಗೆ ವಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಯಾವೊಬ್ಬ ಸದಸ್ಯನನ್ನು ಆಹ್ವಾನಿಸದೆ ಸಭೆ ನಡೆಸಿರುವುದು ಖಂಡನೀಯ, ವಕ್ಕಲಿಗ ಸಂಘದ ಜೊತೆ ಹೊಂದಾಣಿಕೆ ಆಗದೆ ಇಲ್ಲಿನ ಸಮುದಾಯ ಬೇರೊಂದು ಸಂಘ ಕಟ್ಟಿಕೊಂಡು ಸ್ಥಿರವಾಗಿದೆ. ಕೆಂಪೇಗೌಡ್ರ ಜಯಂತಿಗೆ ನಮ್ಮ ಸಲಹೆ ಸೂಚನೆ ಬೇಕಿಲ್ಲವೇ ಎಂದು ತಹಶೀಲ್ದಾರ್ರವರನ್ನ ಪ್ರಶ್ನಿಸಿದರು. ನಮಗೂ ಸಭೆಗೆ ಅಹ್ವಾನವಿದ್ದಿದ್ದಾರೆ ಕೆಂಪೇಗೌಡ್ರ ಜಯಂತಿ ಇನ್ನಷ್ಟು ವಿಜೃಂಭಣೆಯಿಂದ ಮಾಡಲು ಸಹಕಾರಿಯಾಗುತ್ತಿತ್ತು ಆದ್ರೆ ತಾಲ್ಲೂಕು ಆಡಳಿತ ನಮ್ಮ ಬಣವನ್ನು ಕಡೆಗಣಿಸಿರುವುದು ನಿಮ್ಮ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಂಘದ ಅಧ್ಯಕ್ಷರು,ಸದಸ್ಯರು ಗುಡುಗಿದರು.
ತಾಲ್ಲೂಕು ದಂಡಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಜಿ.ಎನ್.ಸುದೀಂದ್ರ ಮಾತನಾಡಿ ಪೂರ್ವಭಾವಿ ಸಭೆಗೆ ಆಹ್ವಾನಿಸುವಲ್ಲಿ ಸ್ವಲ್ಪ ಗೊಂದಲವಾಗಿದೆಯೇ ಹೊರೆತು ಉದ್ದೇಶಪೂರ್ವಕವಾಗಿ ನಡೆದಿದ್ದಲ್ಲ. ಈ ಮುಂದೆ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ವ್ಯವಹಾರಿಸುವುದಾಗಿ ತಿಳಿಸಿದರು.
ಸಮುದಾಯದ ಮುಖಂಡರಾದ ಸಂಜಯ್ರೆಡ್ಡಿ, ಕೆ.ಕೆ.ಮಂಜುನಾಥ್, ಕೂಡಿಪಲ್ಲಿ ಸುಬ್ಬಿರೆಡ್ಡಿ, ವೆಂಕಟಶಿವಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ನಾಗೇದನಹಳ್ಳಿ ಸೀತಾರಾಮರೆಡ್ಡಿ, ಮಂಜು, ಸೋಮಯಾಜಲಪಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥರೆಡ್ಡಿ ಇತರರು .