ಶ್ರೀನಿವಾಸಪುರ: ರೋಟರಿ ಸಂಸ್ಥೆಯು ಸೇವಾ ಮನೋಭಾವನೆಯನ್ನು ಹೊಂದಿದ್ದು, ಶಿಕ್ಷಣ ಮತ್ತುಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆಎಂದುರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಅಧ್ಯಕ್ಷರಾದ ಎಸ್.ಎನ್. ಮಂಜುನಾಥರೆಡ್ಡಿ ತಿಳಿಸಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಹಾಗೂ ಬೆಂಗಳೂರಿನ ರೋಟರಿ ಸೌತ್ಕ್ಲಬ್ನ ಸಹಭಾಗಿತ್ವದಲ್ಲಿತಾಲ್ಲೂಕಿನ ಯಲ್ದೂರಿನಲ್ಲಿರುವ ಶ್ರೀ ಶ್ರೀನಿವಾಸ ಪಬ್ಲಿಕ್ ಶಾಲೆಯಲ್ಲಿ1 ರಿಂದ 10ನೇ ತರಗತಿಯ ಸುಮಾರು 150 ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದಎಸ್.ಎನ್. ಮಂಜುನಾಥರೆಡ್ಡಿ, ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಉಪಯೋಗಿಸಿಕೊಳ್ಳಬೇಕು, ಒಳ್ಳೆಯ ಶಿಕ್ಷಣವನ್ನು ಪಡೆದುಕೊಳ್ಳಬೇಕು, ಭವಿಷ್ಯದಲ್ಲಿಉತ್ತಮ ಪ್ರಜೆಗಳಾಗಿ ಬೆಳೆದು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ರೋಟರಿ ಸಂಸ್ಥೆಯು ಸೇವಾ ಮನೋಭಾವನೆಯನ್ನು ಹೊಂದಿದ್ದು, ಆರೋಗ್ಯ, ಶಿಕ್ಷಣ, ಸೇವಾ ಮನೋಭಾವ ಹೊಂದಿರುವ ಹಿರಿಯ ನಾಗರೀಕರನ್ನು ಗುರ್ತಿಸಿ ಸನ್ಮಾನಿಸುವುದು, ಉತ್ತಮ ಶಿಕ್ಷಕರನ್ನು ಗುರ್ತಿಸಿ ಸನ್ಮಾನಿಸುವುದು, ಶಾಲಾ ಆವರಣಗಳಲ್ಲಿ ಹಾಗೂ ರಸ್ತೆಯ ಬದಿಗಳಲ್ಲಿ ಸಸಿಗಳನ್ನು ನೆಡುವುದು, ಆರೋಗ್ಯ ಶಿಭಿರಗಳನ್ನು ಹಮ್ಮಿಕೊಳ್ಳುವುದು ಮುಂತಾದ ಕಾರ್ಯಕ್ರಮಗಳನ್ನು ಉಚಿತವಾಗಿ ಹಮ್ಮಿಕೊಳ್ಳಲಾಗುತ್ತಿದೆಎಂದು ತಿಳಿಸಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಕಾರ್ಯದರ್ಶಿ ಎಸ್. ಶಿವಮೂರ್ತಿ ಮಾತನಾಡಿ, ಈ ಶಾಲೆಯ ಸುಮಾರು 150 ಮಕ್ಕಳಿಗೆ ಬೆಂಗಳೂರಿನ ರೋಟರಿ ಸೌತ್ಕ್ಲಬ್ ವತಿಯಿಂದಉಚಿತವಾಗಿಪಠ್ಯಪುಸ್ತಕ ಮತ್ತುನೋಟ್ ಪುಸ್ತಕಗಳನ್ನು ನೀಡಿದ ಬೆಂಗಳೂರಿನ ರೋಟರಿ ಸೌತ್ಕ್ಲಬ್ಅಧ್ಯಕ್ಷರಾದ ಲೋಕನಾಥ್ರವರಿಗೆ ಧನ್ಯವಾದಗಳನ್ನು ತಿಳಿಸಿ, ಮಕ್ಕಳು ಈ ಪುಸ್ತಕಗಳನ್ನು ಉಪಯೋಗಿಸಿಕೊಂಡು ಉತ್ತಮ ವ್ಯಾಸಂಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಕ್ಲಬ್ ಸಪೆÇರ್ಟ್ಡೈರಕ್ಟರ್ರವೀಂದ್ರನಾಥ್ ಮಾತನಾಡಿ, ಉಚಿತವಾಗಿ ಪುಸ್ತಕಗಳನ್ನು ನೀಡಿದ ಬೆಂಗಳೂರಿನ ಸೌತ್Àಕ್ಲಬ್ಅಧ್ಯಕ್ಷರಾದ ಲೋಕನಾಥ್ರವರಿಗೆ ಧನ್ಯವಾದಗಳನ್ನು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ, ಶಾಲೆಯ ಸಿಬ್ಬಂಧಿ, ಪೆÇೀಷಕರು ಹಾಗೂ ವಿದ್ಯಾರ್ಥಿ ವಿಧ್ಯಾರ್ಥಿನಿಯರು ಹಾಜರಿದ್ದರು.