ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಗೋಪಾಲ್ನಾಯಕ್ ಮಾತನಾಡಿ ಪರಿಶುದ್ದ ಗಾಳಿ ಮಾನವನ ಆರೋಗ್ಯಕ್ಕೆ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ ಎಂದು ಹೇಳುತ್ತಾ, ಸಸಿಗಳನ್ನು ರಕ್ಷಿಸಿಸುವುದರಿಂದ ಪರಿಸರ ರಕ್ಷಣೆಯಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದರು. ಇಂದು ಪರಿಸರಮಾಲಿನ್ಯದಿಂದ ಅನೇಕ ರೋಗರುಜಿನುಗಳು ಹರಡುತ್ತಿದೆ ಎಂದರು . ಪರಿಸರ ಮಾಲಿನ್ಯದಿಂದ ಸಂಭವಿಸುವ ಅನೇಕ ಕಾಯಿಲೆಗಳನ್ನು ತಪ್ಪಿಸಲು ಸೂಕ್ತ ರೀತಿಯಲ್ಲಿ ಪರಿಸರ ನಿರ್ವಹಣೆ ಮಾಡಬೇಕಿದೆ. ಆದ್ದರಿಂದ ಉತ್ತಮ ಪರಿಸರ ಹೊಂದಲು ಮರಗಿಡಗಳನ್ನು ಬೆಳಸಬೇಕು ಎಂದರು.
ಪರಿಸರ ಅಭಿಯಂತರ ಕೆ.ಎಸ್.ಲಕ್ಷ್ಮೀಶ್, ಕಂದಾಯ ಅಧಿಕಾರಿ ವಿ.ನಾಗರಾಜು, ಕಂದಾಯ ನಿರೀಕ್ಷಕ ಶಂಕರ್, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಪುರಸಭೆ ಸದಸ್ಯ ಆನಂದ್, ನಾಮಿನಿ ಸದಸ್ಯ ಷೇಕ್ ಷಫೀವುಲ್ಲಾ, ಮುಖಂಡರಾದ ಇಡ್ಲಿಬಾಬು, ಜಗದೀಶ್,ಶಿವಕುಮಾರ್ ಹಾಗು ಎನ್ಸಿಸಿ ವಿದ್ಯಾರ್ಥಿಗಳು ಸಾಥ್ ನೀಡಿದರು.
ಶ್ರೀನಿವಾಸಪುರ ಪೋಟೋ 1 : ತಾಲೂಕಿನ ಯರ್ರಂವಾರಿಪಲ್ಲಿ ಶಾಲಾವರಣದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನಡೆಲಾಯಿತು. ಗ್ರಾ.ಪಂ.ಸದಸ್ಯ ವೈ.ಆರ್.ಶ್ರೀನಿವಾಸರೆಡ್ಡಿ, ಬಿಲ್ಕಲೆಕ್ಟರ್ ಅಶೋಕ್, ಶಿಕ್ಷಕಿ ಅನಿತಾ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ, ಗ್ರಂಥಪಾಲಕ ಗೋವಿಂದಪ್ಪ ಇದ್ದರು.
ಶ್ರೀನಿವಾಸಪುರ ಪೋಟೋ 2 : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿನ ಬಿಆರ್ಸಿ ಕಚೇರಿ ಮುಂಭಾಗ ವಿಶ್ವದಿನಾಚರಣೆ ಅಂಗವಾಗಿ ಗಿಡಗಳನ್ನು ನಡೆವುದರ ಮೂಲಕ ಆಚರಣೆ ಮಾಡಲಾಯಿತು. ಬಿಆರ್ಸಿ ಕೆ.ಸಿ.ವಸಂತಾ, ಬಿಆರ್ಪಿಗಳಾದ ಚಲಪತಿ, ರಾಮಮೂರ್ತಿ, ಬಿಐಇಆರ್ಟಿ ಅಧಿಕಾರಿ ಜಿ.ವಿ.ಚಂದ್ರಪ್ಪ ಇದ್ದರು.