ಕುಂದಾಪುರ,ಜೂ.5: ಎಮ್.ಸಿ.ಸಿ.ಬ್ಯಾಂಕ್ ಲಿ. ಇವರಿಂದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜೂ. 5 ರಂದು ಶಾಲಾ ಬ್ಯಾಗ್ ಮತ್ತು ಕೊಡೆ ವಿತರಣೆಯನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಜಂಟಿ ಕಾರ್ಯದರ್ಶಿಗಳಾದ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ವಹಿಸಿಕೊಂಡಿದ್ದು, ಅವರು ಮತ್ತು ಅತಿಥಿಗಳು ಗೀಡಕ್ಕೆ ನೀರೆರೆಯುವ ಮೂಲಕ ಪರಿಸರ ದಿನವನ್ನು ಆಚರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..
ಎಮ್.ಸಿ.ಸಿ.ಬ್ಯಾಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಕೊಡೆಗಳನ್ನು ವಿತರಿಸಿ ”ನಾವು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತೀರುವ ವಿದ್ಯಾಥಿಗಳಿಗೆ ನಿಮ್ಮ ಕಲಿಕೆಗೆ ಸಹಾಯವಾಗಲೆಂದು ಈ ಕಾರ್ಯವನ್ನು ಮಾಡುತ್ತೀದ್ದೆವೆ, ನೀವು ಕಲಿಯುತ್ತೀರುವದು ಬರೆ ಶಾಲೆ ಅಲ್ಲ, ಇದು ವಿದ್ಯಾ ದೇಗುಲ, ಚೆನ್ನಾಗಿ ಕಲಿತು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು, ಜ್ಞಾನವನ್ನು ಸಂಪಾದಿಸಿ ಸಮಾಜಕ್ಕೆ ಒಳಿತನ್ನು ಮಾಡಬೇಕು” ಎಂದು ಸಂದೇಶ ನೀಡಿದರು.
ಅಧ್ಯಕ್ಷತೆ ಸ್ಥಾನವನ್ನು ವಹಿಸಿದ ಫಾ| |ಪಾವ್ಲ್ ರೇಗೊ ‘ಶಾಲಾ ಬ್ಯಾಗ್ ಮತ್ತು ಕೊಡೆಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಅಭಿನಂದಿಸಿ, ‘ಶಾಲಾ ಬ್ಯಾಗ್ ಮತ್ತು ಕೊಡೆಗಳನ್ನು ಕೊಡ ಮಾಡಿದ ಎಮ್.ಸಿ.ಸಿ.ಬ್ಯಾಂಕಿಗೆ ಕ್ರತ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಮ್.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ಎಲ್ರೋಯ್ ಕಿರಣ್ ಕ್ರಾಸ್ಟೊ, ಡಾ.ಜೆರಾಲ್ಡ್ ಪಿಂಟೊ, ಬ್ಯಾಂಕಿನ ವ್ಯವಸ್ಥಾಪಕರಾದ ಸಂದೀಪ್ ಕ್ವಾಡ್ರಸ್, ಜ್ಯೋತಿ ಬರೆಟ್ಟೊ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಶಾಂತಿ ರಾಣಿ ಬರೆಟ್ಟೊ ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ಧನ್ಯವಾದಗಳನ್ನು ಅರ್ಪಿಸಿದರು, ಶಿಕ್ಷಕಿ ಜ್ಯೋತಿ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.