ಕೋಲಾರ,ಜೂ.01: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಡಾ.ವೈ.ನಾರಾಯಣಸ್ವಾಮಿ ಅವರ ಗೆಲುವು ನಿಶ್ಚಿತ ಎಂದುಪ್ರಚಾರ ಸಭೆಯಲ್ಲಿ ಕೆಯುಡಿ ಮಾಜಿ ಅಧ್ಯಕ್ಷ ವಿಜಯಕುಮಾರ್ ಹಾಗೂ ಮಾಧ್ಯಮ ಸಹ ಸಂಚಾಲಕ್ ಕೆಂಬೋಡಿ ನಾರಾಯಣಸ್ವಾಮಿ ಜಂಟಿ ಹೇಳಿಕೆ ನೀಡಿರುತ್ತಾರೆ
ಇಂದು ನಗರದ ಹಲವು ಶಾಲೆಗಳಲ್ಲಿ ಮತದಾರರನ್ನು ಭೇಟಿ ಮಾಡಿ ಡಾ. ವೈ.ಎ.ನಾರಾಯಣಸ್ವಾಮಿ ರವರ ಪರವಾಗಿ ಮತಯಾಚನೆ ಮಾಡಲಾಯಿತು.
ಇಡೀ ಜಿಲ್ಲಾದ್ಯಂತ ವೈ.ಎ.ನಾರಾಯಣಸ್ವಾಮಿ ಅವರ ಪರ ಅಲೆ ಜೋರಾಗಿದೆ. ಖಾಸಗಿ, ಸರ್ಕಾರಿ, ಅನುಧಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಜೂ, 3 ರಂದು ನಡೆಯುವ ಚುನಾವಣೆಯಲ್ಲಿ ವೈ.ಎ.ನಾರಾಯಣಸ್ವಾಮಿ ಅವರನ್ನು ಬೆಂಬಲಿಸುವುದಾಗಿ ಹೇಳಿರುವುದು ಇನ್ನಷ್ಟು ಬಲ ಬಂದಂತಾಗಿದೆ ಎಂದರು.
ಈ ಬಾರಿ ಎನ್ಡಿಎ ಅಭ್ಯರ್ಥಿಯ ಗೆಲುವು ಸುಲಭವಾಗಿರುತ್ತದೆ. ಏಕೆಂದರೆ ಬಹುತೇಕ ಶಿಕ್ಷಕರ ಸಂಘಗಳ ಮುಖಂಡರುಗಳು ಡಾ.ವೈ.ಎ ನಾರಾಯಣಸ್ವಾಮಿ ರವರ ಪರವಾಗಿ ಕೆಲಸ ಮಾಡುತ್ತಿದ್ದು, ಸರ್ಕಾರಿ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ, ಪದವಿ ಪೂರ್ವ ಶಿಕ್ಷಕರ ಸಂಘ, ದೈಹಿಕ ಶಿಕ್ಷಕ ಸಂಘ, ವೃತ್ತಿ ಶಿಕ್ಷಕರ ಸಂಘ, ಪದವಿಪೂರ್ವ ಕಾಲೇಜುಗಳ ಪ್ರಾಧ್ಯಾಪಕ ಪ್ರಾಂಶುಪಾಲರ ಸಂಘ, ಅನುದಾನಿತ ಶಾಲಾ ಶಿಕ್ಷಕರ ಸಂಘ, ಅನುದಾನ ರಹಿತ ಶಾಲಾ ಶಿಕ್ಷಕರ ಸಂಘ, ಐಟಿಐ ಕಾಲೇಜು ಶಿಕ್ಷಕರ ಸಂಘ, ಎಲ್.ಎಲ್.ಬಿ ಶಾಲಾ ಆಡಳಿತ ಮಂಡಳಿಗಳು ಬಹುತೇಕ ಶಿಕ್ಷಣ ಸಂಸ್ಥೆಯ ಎಲ್ಲಾ ಸಂಘಟನೆಗಳ ಮುಖಂಡರುಗಳು ನಮ್ಮ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಗೆಲುವು ನಮ್ಮದೇ ಆಗಿರುತ್ತದೆ ಹಾಗೂ ಎಲ್ಲಾ ಶಾಲಾ ಆಡಳಿತ ಮಂಡಳಿಗಳು ಡಾ.ವೈ.ನಾರಾಯಣಸ್ವಾಮಿ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಹಾಗೂ ಹಿಂದೆ ಭಾರತೀಯ ಜನತಾ ಪಕ್ಷ ಸರ್ಕಾರ ಇದ್ದಾಗ ಕ್ಷಣದಲ್ಲಿ ಮಹತ್ವದ ಬದಲಾವಣೆಗಳು ತಂದು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿರುತ್ತದೆ ಕೇಂದ್ರ ಸರ್ಕಾರದ ಶಿಕ್ಷಣ ನೀತಿಯು ಸಹಕಾರಿಯಾಗಿರುತ್ತದೆ ನಮ್ಮ ಅಭ್ಯರ್ಥಿಯು ಶಿಕ್ಷಕರ ಮತದಾರರ ಅಚ್ಚುಮೆಚ್ಚಿನ ಅಭ್ಯರ್ಥಿಯಾಗಿರುತ್ತಾರೆ ಎಂದು ತಿಳಿಸಿದರು.
ಇಂದು ಪ್ರಚಾರದಲ್ಲಿ ಬಾಬಾ ಪ್ರೌಢಶಾಲೆ, ಆರ್ಕಾ ಶಿಕ್ಷಣ ಸಂಸ್ಥೆ, ಸೆಂಟನ್ಸ್ ಪ್ರೌಢಶಾಲೆ, ಬಾಪೂಜಿ ಪ್ರೌಢಶಾಲೆ, ಬಿಜಿಎಸ್ ಕಾಲೇಜು, ಮೆಥೋಡೀಸ್ ಪ್ರೌಢಶಾಲೆ, ಆದರ್ಶ ಕಾಲೇಜು ಹಲವಾರು ಕಾಲೇಜುಗಳಲ್ಲಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಲಾಯಿತು.
ಈ ಪ್ರಚಾರ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅರುಣಮ್ಮ, ಜಿಲ್ಲಾ ಕಾರ್ಯದರ್ಶಿ ಹಾರೋಹಳ್ಳಿ ವೆಂಕಟೇಶ್, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಸವಿತಾ ಶ್ರೀನಾಥ್, ಮಹಿಳಾ ಮೋರ್ಚಾ ಮುಖಂಡರಾದ ಮಂಜುಳಮ್ಮ, ಸುಜಾತಮ್ಮ,
ವಿಜಯಲಕ್ಷ್ಮಿ, ರಾಧಿಕಾ, ನವೀನ್, ಕುಮಾರಿ ಅಂಬಿಕಾ, ಲಾಯರ್ ನವೀನ್ ಇನ್ನು ಹಲವಾರು ಮುಖಂಡರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.
– ಮಾಧ್ಯಮ ಸಹ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ