ಕುಂದಾಪುರ,ಜು.1 ಈ ಮೊದಲು ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾಗಿ ಹಾಗೂ ಕುಂದಾಪುರ ವಲಯದ ಪ್ರಧಾನರಾಗಿದ್ದ ಅ|ವಂ| ಸ್ಟ್ಯಾನ್ ತಾವ್ರೊ ರವರಿಗೆ 75 ವರ್ಷ ತುಂಬಿದ ಮೇಲೆ ಎರಡು ವರ್ಷ ಹೆಚ್ಚಿನ ಸೇವೆಗಾಗಿ ಅವರನ್ನು ಕೋಟ ಸಂತ ಜೋಸೆಫ್ ಚರ್ಚಿನ ಧರ್ಮಗುರುಗಳಾಗಿ ಬಿಷಪ್ ಸ್ವಾಮಿ ನೇಮಕ ಮಾಡಿದ ಹಿನ್ನೆಲೆಯಲ್ಲಿ, ಕುಂದಾಪುರ ರೋಜರಿ ಚರ್ಚಿನ ಜನತೆ ಅವರನ್ನು ಪ್ರೀತಿ ಪೂರ್ವಕವಾಗಿ ಜೊತೆಗೆ ಸಾಗಿ, ಮೇ 31 ರಂದು ಕೋಟ ಚರ್ಚಿನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು.
ವಂ|ಸ್ಟ್ಯಾನಿ ತಾವ್ರೊ ನಿರ್ಗಮಿಸುವ ವೇಳೆ ಕುಂದಾಪುರ ಇಗರ್ಜಿಯಲ್ಲಿ ಸಣ್ಣ ಧಾರ್ಮಿಕ ವಿಧಿಯನ್ನು ಆಚರಿಸಲಾಯಿತು, ಅವರು ಕುಂದಾಪುರ್ದ ಭಕ್ತಾಧಿಗಳನ್ನು ಆಶಿರ್ವದಿಸಿದರು. ನಂತರ ಅವರ ಜೊತೆ ಕುಂದಾಪುರದ ಜನತೆ, ಕೋಟಕ್ಕೆ ಸಾಗಿತು. ಅಲ್ಲಿ ನೂತನವಾಗಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಪ್ರತಿನಿಧಿಯಾಗಿ, ಕೋಟ ಚರ್ಚಿನ ಧರ್ಮಗುರುವಾಗಿ ಅಧಿಕಾರ ಸ್ವೀಕರಿಸುವ ವಿಧಿ ವಿಧಾನವನ್ನು ನೇರವೆರಿಸಿದರು.
ಕೋಟ ಚರ್ಚಿನ ಈ ಹಿಂದಿನ ಧರ್ಮಗುರುಗಳಾಗಿ ಸೇವೆ ನೀಡಿದ ವಂ|ಧರ್ಮಗುರು ಆಲ್ಫೋನ್ಸ್ ಡಿಲಿಮಾ, 77 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರು ಧರ್ಮಗುರುಗಳ ವಿಶ್ರಾಂತ ಮನೆಯಲ್ಲಿ ತೆರಳುವ ಹಿನ್ನೆಲೆಯಲ್ಲಿ ಅವರಿಗೆ ಶುಭ ಕೋರಲಾಯಿತು. ಅವರು ನೂತನ ಗುರುಗಳಿಗೆ ಚರ್ಚಿನ ಹಿನ್ನೆಲೆಯನ್ನು ತಿಳಿಸಿದರು, ಪಾಲನ ಮಂಡಳಿಯ ಉಪಾಧ್ಯಕ್ಷ ಹೆರಾಲ್ಡ್ ಫೆರ್ನಾಂಡಿಸ್ ಚರ್ಚ್ ವ್ಯಾಪ್ತಿಯಲ್ಲಿರುವ ಕುಟುಂಬಗಳ ಹೆಸರಿದ್ದ ಮಾಹಿತಿ ಪುಸ್ತಕವನ್ನು ನೂತನ ಧರ್ಮಗುರುಗಳಿಗೆ ನೀಡಿದರು. ಇದೇ ಅಂದರ್ಭದಲ್ಲಿ ವಂ|ಡಿಲೀಮಾ ಬರೆದ ಪುಸ್ತಕವನ್ನು ವಂ|ಪಾವ್ಲ್ ರೇಗೊ ಬಿಡುಗಡೆಗೊಳಿಸಿದರು.
ಧರ್ಮಗುರು ಫಾ|ಸ್ಟ್ಯಾನಿ ತಾವ್ರೊ, ಕುಂದಾಪುರದ ಜನತೆ ನನನ್ನು ಅತ್ಯಂತ ಪ್ರೀತಿಯಿಂದ ಕಂಡಿದ್ದಾರೆ, ನನಗೆ ನನ್ನ ಸೇವೆ ಮಾಡಲು ಎಲ್ಲಾ ರೀತಿಯಿಂದ ಸಹಕರಿಸಿದ್ದಾರೆ, ನನ್ನ 50 ನೇ ಗುರು ದೀಕ್ಷೆಯ ಸಂಭ್ರಮ, ನನ್ನ 75 ನೇ ಹುಟ್ಟು ಹಬ್ಬದ ಸಂಭ್ರಮ, ಅತ್ಯಂತ ಹಿರಿಯ ಚರ್ಚ್ ಆದ ರೋಜರಿ ಮಾತಾ ಚರ್ಚಿನ 450 ನೇ ವರ್ಷಾಚರಣೆಯ ಸಂಭ್ರಮ ವೈಭವದಿಂದ ಮಾಡಿದ್ದಾರೆ, ಅವರ ಪ್ರೀತಿ ಎಂದಿಗೂ ಮರೆಯಲಾರೆ, ಎನ್ನುತ್ತಾ ಕ್ರತ್ಞತೆಯನ್ನು ಸಲ್ಲಿಸಿ. ಕೋಟದಲ್ಲೂ ನಾನು ಉತ್ತಮ ಸೇವೆ ನೀಡುತ್ತೇನೆ, ಸಂತ ಜೋಸೆಫರ ಮಡಿಲಿಗೆ ಬಂದಿದ್ದೇನೆ ಅವರು ನನ್ನನ್ನು ಸಹಕರಿಸುತ್ತಾರೆ, ನಿಮ್ಮ ಸಹಕಾರ ಪ್ರೀತಿಯೂ ಆಶಿಸುತ್ತೇನೆ’ ಎಂದು ನುಡಿದರು.
ನೂತನ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಇಬ್ಬರೂ ಧರ್ಮಗುರುಗಳಿಗೆ ಶುಭ ನುಡಿಗಳಾನ್ನಾಡಿದರು. ಈ ಕಾರ್ಯಕ್ರಮದಲ್ಲಿ ವಲಯದ ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು, ಕೋಟ ಮತ್ತು ಕುಂದಾಪುರ ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಆಯೋಗಗಳ ಸಂಯೋಜಕರು, ಭಕ್ತಾಧಿಗಳು ಉಪಸ್ಥಿತರಿದ್ದರು. ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಕಾರ್ಯಕ್ರಮವನ್ನು ನಿರೂಪಿಸಿದರು.