ಕುಂದಾಪುರ, ಮೇ.25: ಒಂದು ಕಾಲದಲ್ಲಿ ಬಹಳ ಹೆಸರುವಾಸಿಯಾದ ಸಂತ ಮೇರಿಸ್ ಕನ್ನಡ ಮಾಧ್ಯಮ ಅನುದಾನಿತ ಶಾಲೆಗೆ, ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳ ಉಪಯೋಗಕ್ಕೆ, ಅವರಿಗೂ ಇತರ ಉನ್ನತ ಶಾಲೆಗಳಲ್ಲಿ ದೊರೆಯುವ ಸೌಕರ್ಯ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ದೊರೆಯಬೇಕನ್ನುವ ಉದ್ದೇಶದಿಂದ ನೂತನ ಸುಸಜ್ಜಿತ ವಿಜ್ಞಾನ ಪ್ರಯೋಗ ಕೊಠಡಿಯನ್ನು ಕುಂದಾಪುರ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|, ಶಾಲಾ ಜಂಟಿ ಕಾರ್ಯದರ್ಶಿಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿದರು.
ಅವರು “ಕನ್ನಡ ಮಾಧ್ಯಮ ಶಾಲೆಯ ಮಕ್ಕಳೂ ಇದರ ಉಪಯೋಗ ಸಿಗಬೇಕು ಎಂಬ ದ್ರಷ್ಟಿಯಿಂದ ವಿಜ್ಞಾನ ಪ್ರಯೋಗ ಕೊಠಡಿಯನ್ನು ನಿರ್ಮಿಸಿದ್ದೇವೆ, ಇದರ ಉಪಯೋಗವನ್ನು ಈ ಶಾಲೆಯ ಮಕ್ಕಳು ಪಡೆಯಬೇಕು, ಈ ಶಾಲೆ ಕಲಿಸುವುದರಲ್ಲಿ ಮುಂದೆ ಇದ್ದು ಈ ಸಾಲಿನ ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡ ನೂರು ಫಲಿತಾಂಶ ದೊರಕಿದೆ, ಇಲ್ಲಿ ಬುದ್ದಿವಂತ ಮಕ್ಕಳನ್ನು ಮಾತ್ರ ಭರ್ತಿ ಮಾಡಿಕೊಂಡು ಉತ್ತಮ ಫಲಿತಾಂಶಕ್ಕೆ ಆಸೀಸುವುದಿಲ್ಲಾ, ಸಾಮಾನ್ಯ ಮಕ್ಕಳನ್ನು ಭರ್ತಿ ಮಾಡಿಕೊಂಡು ಅವರಿಗೆ ಉತ್ತಮ ಶಿಕ್ಷಣ ನೀಡಿ ಬುದ್ದಿವಂತರನ್ನಾಗಿಸುವ ಕೆಲಸ ನೆಡೆಯುತ್ತದೆ, ಅದಕ್ಕಾಗಿ ಈ ಸುಸಜ್ಜಿತ ವಿಜ್ಞಾನ ಪ್ರಯೋಗ ಕೊಠಡಿಯನ್ನು ನಿರ್ಮಿಸಲಾಗಿದೆ, ಇದಕ್ಕೆ ಸಹಕಾರ ನೀಡಿದವರು ದಾನಿಗಳಾದ ಸಮೀರ್ ಪಿಂಟೊ ಇವರ ಉದಾರ ಮನಸ್ಸಿನಿಂದ ನಮ್ಮ ಯೋಜನೆ ಕಾರ್ಯಗತವಾಗಿದೆ, ಎಂದು ಅವರಿಗೆ ಧನ್ಯವಾದಗಳನ್ನು ಹೇಳುತ್ತಾ, ಅವರು ಪ್ರಯೋಗ ಕೊಠಡಿಗಾಗಿ ಸುಮಾರು 4.5 ಲಕ್ಷ ದಾನ ನೀಡಿದ್ದಾರೆ’ ಎಂದು ಫಾ|ಸ್ಟ್ಯಾನಿ ತಿಳಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಶಾಲೆಯ ಮುಖ್ಯಾಪಾಧ್ಯಾಯಿನಿ ಅಸುಂಪ್ತಾ ಲೋಬೊ, ವಿಜ್ಞಾನ ಶಿಕ್ಷಕಿ ಸ್ಮಿತಾ, ರೋಜರಿ ಮಾತಾ ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ತೆರೆಜಾ ಶಾಂತಿ, ಸಂತಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯಾಪಾಧ್ಯಾಯಿನಿ ಡೋರಾ ಲುವಿಸ್, ಸಂತ ಮೇರಿಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯಾಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ,ಮತ್ತು ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ 5 ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಯ ಸಲಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಭಾಸ್ಕರ ಗಾಣಿಗ ಧನ್ಯವಾದ ಸಮರ್ಪಿಸಿದರು.