ಕುಂದಾಪುರ, ಸೆ. 7: ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿಯಾದ 452 ವರ್ಷದ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬ (ಮೇರಿ ಮಾತೆಯ ಹುಟ್ಟು ಹಬ್ಬದ) ಪ್ರಯುಕ್ತ ತಯಾರಿಗಾಗಿ 9 ನೇ ದಿನದ ನೊವೆನಾ ಸಂಪನ್ನವಾಯಿತು.ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನ ಅರ್ಪಿಸಿ ನೊವೆನಾ ಪ್ರಾರ್ಥನೆ ನಡೆಸಿಕೊಟ್ಟು, 9 ದಿವಸಗಳ ನೊವೆನಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಿರಿಯವರು ಆಗಮಿಸಿದಕ್ಕಾಗಿ ಧನ್ಯವಾದಗಳನ್ನು ನೀಡಿದರು. ನಾಳೆ ಸೆ. 8 ರಂದು ಕನ್ಯಾ ಮರಿಯಮ್ಮನ ಜನ್ಮ ದಿನಾಚರೆಣೆ ಮತ್ತು ತೇನೆ ಹಬ್ಬ ವಿಜ್ರಂಭಣೆಯಿಂದ ನಡೆಯುವುದೆಂದು ತಿಳಿಸಿದರು.