ಕುಂಭಮೇಳದಿಂದ ಭಾಗವಹಿಸಿ ವಾಪಸ್ ಆದ ಶೇ.99ರಷ್ಟು ಜನರಿಗೆ ಪಾಸಿಟಿವ್; ಮಹಾ ಸ್ಪ್ರೆಡರ್ ಆಯ್ತು ಹರಿದ್ವಾರ

JANANUDI.COM NETWORK


ಹರಿದ್ವಾರ: ಕೊರೋನಾ 2ನೇ ಅಲೆಯಿಂದ ತತ್ತರಿಸುತ್ತಿರುವ ಭಾರತಕ್ಕೆ ಅದೇ ಸಮಯದಲ್ಲಿ ಉತ್ತಾರಖಂಡ್ನ ಹರಿದ್ವಾರದಲ್ಲಿ ನಡೆದ ಕುಂಭಮೇಳ ಈಗ ಕೊರೋನಾ ಮಹಾ ಸ್ಪ್ರೆಡರ್ ಆಗಿ ಹೊರ ಹಮ್ಮಿದೆ. . ಪವಿತ್ರ ಗಂಗಾ ಸ್ನಾನದಲ್ಲಿ (ಶಾಹಿ ಸ್ನಾನ್) ಮಿಂದೆದ್ದ ಸಾವಿರಾರು ಮಂದಿಗೆ ಸೋಂಕು ಅಂಟಿಕೊಂಡಿದೆ. ಹರಿದ್ವಾರದಿಂದ ಮಧ್ಯಪ್ರದೇಶಕ್ಕೆ ಹಿಂತಿರುಗಿದ ಶೇ.99ರಷ್ಟು ಮಂದಿಯ ರಿಪೋರ್ಟ್ ಕೋವಿಡ್ ಪಾಸಿಟಿವ್ ಬಂದಿದೆ. ಕುಂಭ ಮೇಳದಲ್ಲಿ ಭಾಗಿಯಾಗಿ ರಾಜ್ಯಕ್ಕೆ ಮರಳಿದವರೆಲ್ಲರಿಗೂ 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಿಸಿ, ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಕಳೆದ ವರ್ಷ ತಬ್ಲಿಘಿ ಜಮಾತ್ನಿಂದ ಕೊರೋನಾ ಹರಡಿತ್ತು. ಆಗ ಕೊರೋನಾ ಬಗ್ಗೆ ತಿಳಿಯದೇ ಅವರೆಲ್ಲಾ ದೆಹಲಿಯಲ್ಲಿ ಒಂದೆಡೆ ಸೇರಿದ್ದರು.ಮತ್ತು ಇಷ್ಟೊಂದು ಆಗಾದ ಪ್ರಮಾಣದಲ್ಲಿ ಜನ ಸೇರಿರಲಿಲ್ಲಾ ಆದರೆ ಈ ವರ್ಷ ಕೊರೋನಾ ಬಗ್ಗೆ ತಿಳಿದಿದ್ದರೂ ಕುಂಭಮೇಳ ನಡೆಸಲಾಗುತ್ತಿದೆ. ತಬ್ಲಿಘಿ ಜಮಾತ್ಗಿಂತ ದೊಡ್ಡ ಮಟ್ಟದಲ್ಲಿ ಕುಂಭಮೇಳ ನಡೆಸಿದರಿಂದ ಸೋಂಕು ತೀವ್ರ ಗತಿಯಲ್ಲಿ ಹರಡಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಅದರೆಂತೆ ಈಗ ಕುಂಭಮೇಳದಿಂದ ಮಧ್ಯಪ್ರದೇಶಕ್ಕೆ ವಾಪಸ್ ಆದರವರಲ್ಲಿ ಶೇ.99ರಷ್ಟು ಮಂದಿಗೆ ಕೊರೋನಾ ಬಂದಿದೆ. ಇನ್ನು 22 ಯಾತ್ರಾರ್ಥಿಗಳ ಸುಳಿವು ಸಿಕ್ಕಿಲ್ಲ. ಹೀಗಾಗಿ ಮಧ್ಯಪ್ರದೇಶದಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಹರಿದ್ವಾರದಿಂದ ಹಿಂತಿರುಗಿದವರಲ್ಲಿ ಬಹುತೇಕರಿಗೆ ಕೊರೋನಾ ಬಂದಿದ್ದು ಅನೇಕ ಜನ ಸಾವನ್ನಪ್ಪಿದ್ದಾರೆ,ಅದರಲ್ಲಿ ಸಾಧು ಸಂತರೂ ಸಾವನ್ನಪ್ಪಿದ್ದಾರೆಂದು ವದಂತಿಗಳಿವೆ.