ಶ್ರೀನಿವಾಸಪುರ : ಜಿಲ್ಲೆಯಲ್ಲಿ 100 ಕ್ಕೆ ಶೇ 90 ರಷ್ಟು ಶಾಲೆಗಳು ಸೋರುತ್ತಿದೆ. ಅದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರಣ. ಗುಣಮಟ್ಟ ಕಾಯ್ದುಕೊಳ್ಳಲು ಗಮಹರಿಸದೆ ಇರುವುದೇ ಮುಖ್ಯಕಾರಣ. ಸರ್ಕಾರದ ಹಣ ಎಂದು ನಿರ್ಲಕ್ಷ್ಯ ವಹಿಸುತ್ತಿವೆ .ಹೀಗಾಗಿ ಗುಣಮಟ್ಟ ಕಾಯ್ದುಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಕೆಲಸವೆಂದು ಸಾರ್ವಜನಿಕರು ಚಿನ್ನಾಗಿ ಕೆಲಸ ಮಾಡಿಸಿಕೊಳ್ಳಬೇಕು . ಸರ್ಕಾರಿ ಶಾಲೆಗಳ ಅಭಿವೃದ್ಧಿ ನಮ್ಮೆಲರ ಕರ್ತವ್ಯ ಇಲ್ಲದಿದ್ದರೆ ನಮ್ಮ ಮಕ್ಕಳಿಗೇ ತೊಂದರೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಚಿರುವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶುಕ್ರವಾರ ದಿ||ಶ್ರೀಮತಿ ಮುನಿಲಕ್ಷಮ್ಮ ಮತ್ತು ದಿ|| ತಾಚೇಗೌಡ ಜ್ಞಾಪಕಾರ್ತವಾಗಿ ದಾನಿಗಳಿಂದ ನಿರ್ಮಿಸಲಾದ ನೂತನ ಎರಡು ಶಾಲಾ ಕೊಠಡಿಗಳನ್ನು ಉದ್ಗಾಟಿಸಿ ಮಾತನಾಡಿದರು.
ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಪಣ ತೊಟ್ಟಿದ್ದೇನೆ. ಮುಳಬಾಗಿಲು ರಸ್ತೆಯಲ್ಲಿ ಹಾಗೂ ಮದನಪಲ್ಲಿ ರಸ್ತೆಯಲ್ಲಿ ಐದಾರು ಸಾವಿರ ಎಕರೆಯಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಿದ್ದು , ಮುಂದಿನ ಎರಡು ಮೂರು ವರ್ಷಗಳಲ್ಲಿ ಈ ಯೋಜನೆಯು ಕಾರ್ಯಗತವಾಗಲಿದೆ ಎಂದರು. ಮುಂದಿನ ದಿನಗಳಲ್ಲಿ ಐದಾರು ಸಾವಿರ ಎಕರೆಯಷ್ಟು ಕೈಗಾರಿಕ ವಲಯವನ್ನು ಸ್ಥಾಪಿಸಿ ನಿರುದ್ಯೋಗಸ್ಥರಿಗೆ ಉದ್ಯೋಗವನ್ನು ಕಲ್ಪಿಸುವ ಕನಸನ್ನು ಕಂಡಿದ್ದೇನೆ ಎಂದರು.
ನನ್ನನ್ನು ಐದು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದೀರಾ, ನಾನು ನಿಮ್ಮ ಸೇವಕನಾಗಿ ಹಗಲಿರಲು ದುಡಿಯಲು ಸಿದ್ದನಿದ್ದೇನೆ ನನ್ನ ಬಳಿ ಬಂದು ಕೆಲಸ ಮಾಡಿಸಿಕೊಳ್ಳಿ ಎಂದರು.
ದಾನಿ ನಿವೃತ್ತ ಮುಖ್ಯ ಅಭಿಯಂತರ ಟಿ.ಬಿಸ್ಸೇಗೌಡ ನಾನು ಇದೇ ಶಾಲೆಯಲ್ಲಿ 1965 ರಿಂದ 1969 ರ ವರೆಗೆ ಓದಿದ್ದೆ , ನನಗೆ ಸರ್ಕಾರಿ ನೌಕರಿ ಸಿಗಲು ಕಾರಣ ನನ್ನ ಊರು, ನನ್ನ ಶಾಲೆ ಎಂದರು. ಈ ಹಿಂದೆ ಜಿಲ್ಲೆಯಿಂದ ಕೆಎಎಸ್, ಐಎಎಸ್ ನಲ್ಲಿ ಹೆಚ್ಚು ಅಧಿಕಾರಿಗಳು ಇರುತ್ತಿದ್ದರು. ಆದರೆ ಈಗ ಕಡಿಮೆ ಆಗಿದೆ. ಇಂದು ಎಲ್ಲಾ ಸಾಮಾನ್ಯವಾಗಿ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ಗೆ ಸೇರಿಸುತ್ತಿದ್ದಾರೆ ಆದರೆ ಸರ್ಕಾರಿ ಶಾಲೆಗಳಲ್ಲಿ ಸಿಗುವಷ್ಟು ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳಲ್ಲಿ ಸಿಗುವುದಿಲ್ಲ ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಾಲತಿ ಮಾಡಲು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ, ಮಾವು ಮಂಡಲಿ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ ಮಾತನಾಡಿದರು. ಅಪರ ಜಿಲ್ಲಾ ವರಿಷ್ಟಾಧಿಕಾರಿ ಎಸ್.ಎಲ್.ಶಿವಶಂಕರ್, ತಹಶೀಲ್ದಾರ್ ಜಿ.ಎನ್.ಸುದೀಂದ್ರ, ವಸಂತಬಿಸ್ಸೇಗೌಡ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ಕಟ್ಟಡ ನಿರ್ಮಾಣ ಮೇಲ್ವಿಚಾರಕ ಸಿ.ಜಗದೀಶ್, ನಂಬಿಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಪದ್ಮಾವತಮ್ಮ, ಗ್ರಾ.ಪಂ. ಸದಸ್ಯೆ ಮಂಜುಳಮ್ಮ , ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ, ಮುಖ್ಯ ಶಿಕ್ಷಕ ಡಿ.ಆರ್.ಶ್ರೀನಿವಾಸರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಣ್ಣ, ಎಸ್ಡಿಎಂಸಿ ಅಧ್ಯಕ್ಷ ಜಿ. ಉಮೇಶ್, ಮುಖಂಡರಾದ ಶಂಕರೇಗೌಡ, ಶಿವಾನಂದಗೌಡ, ಸತ್ಯನಾರಾಯಣ, ಶಿಕ್ಷಕರಾದ ರಮೇಶ್, ಶಿವಮೂರ್ತಿ, ತಾಜ್ಪಾಷ, ಇದ್ದರು.